ನ್ಯೂಸ್ ನಾಟೌಟ್ : ಕಳೆದ ಹಲವು ದಿನಗಳಿಂದ ತಮಿಳುನಾಡು ಮುಖ್ಯಮಮಂತ್ರಿ ಪುತ್ರ ಹಾಗೂ ಸಚಿವ ಉದಯನಿಧಿ ಸ್ಟಾಲಿನ್, ಸನಾತನ ಧರ್ಮದ ಕುರಿತ ಹೇಳಿಕೆಗೆ ದೇಶಾದ್ಯಂತ ವಿರೋಧ ವ್ಯಕ್ತವಾಗುತ್ತಿದೆ.
ಆದರೆ, ಈ ಬಗ್ಗೆ ಸಮರ್ಥಿಸಿಕೊಳ್ಳಲು ಮುಂದಾದ ಪ್ರಕಾಶ್ ರಾಜ್ ಸನಾತನ ಧರ್ಮ ಕಾಗೆ ಎಂದು ಹೇಳಿಕೆ ನೀಡಿದ್ದರು. ಈ ಬಗ್ಗೆ ವಿಜಯಪುರದಲ್ಲಿ ಕಿಡಿಕಾರಿದ ಶಾಸಕ ಬಸವನಗೌಡ ಪಾಟೀಲ್ ಯತ್ನಾಳ್, ಪ್ರಕಾಶ್ ರಾಜ್ ಅನ್ನುವ ಹಂದಿ ನಮ್ಮ ರಾಜ್ಯದಲ್ಲಿದೆ ಎಂದು ಹೇಳುವ ಮೂಲಕ ಹಂದಿಗೆ ಹೋಲಿಕೆ ಮಾಡಿದ್ದಾರೆ.
ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ‘ಬಿಜೆಪಿ ವಿಷದ ಹಾವು ಎಂದ ಉದಯನಿಧಿ ಸ್ಟಾಲಿನ್ ಹೇಳಿಕೆ ನೀಡಿದ್ದರ ಬಗ್ಗೆ ಪ್ರತಿಕ್ರಿಯೆ ನೀಡಿ ಕರುಣಾನಿಧಿ ತಳಿಯೆ ವಿಷದ ಹಾವು. ಅದು ಕೆಟ್ಟ ತಳಿ ಇದೆ. ಈ ತಳಿ ದೇಶಕ್ಕೆ ನಿಷ್ಠೆ ಇಲ್ಲ, ಧರ್ಮಕ್ಕೆ ನಿಷ್ಠೆ ಇಲ್ಲ. ಒಂದು ಕಾಲದಲ್ಲಿ ಎಲ್ಟಿಟಿಇ ದೇಶ ವಿರೋಧಿ ಸಂಘಟನೆಗೆ ಸಪೋರ್ಟ್ ಮಾಡಿದವರು ಅವರು. ದೇಶವಿರೋಧಿ ಚಟುವಟಿಕೆಗೆ ಸಪೋರ್ಟ್ ಮಾಡಿದವರು. ಅವರಿಂದ ಇನ್ನೇನು ನಿರೀಕ್ಷಿಸಲು ಸಾಧ್ಯವಿಲ್ಲ ಎಂದು ಹೇಳಿದರು.
ಇದೇ ವೇಳೆ ಪ್ರಕಾಶ್ ರಾಜ್ ವಿರುದ್ಧವೂ ಯತ್ನಾಳ್ ವಾಗ್ದಾಳಿ ಮಾಡಿದ್ದಾರೆ. ಸನಾತನ ಧರ್ಮ ಕಾಗೆ ಎಂದ ಪ್ರಕಾಶ್ ರಾಜ್, ಹಂದಿ ಇದ್ದ ಹಾಗೆ. ಪ್ರಕಾಶ್ ರಾಜ್ ಅನ್ನುವ ಹಂದಿ ನಮ್ಮ ರಾಜ್ಯದಲ್ಲಿದೆ. ನಗರ ಮತ್ತು ಗ್ರಾಮೀಣ ಭಾಗದಲ್ಲಿ ಊರು ಸ್ವಚ್ಛ ಮಾಡಲು ಹಂದಿ ಇರುತ್ತದೆ. ಹಾಗೆ ನಮ್ಮಲ್ಲೂ ಪ್ರಕಾಶ ರಾಜ್ ಅನ್ನುವ ಹಂದಿ ಇದೆ ಎಂದ ಯತ್ನಾಳ್ ಹೇಳಿದರು.