ನ್ಯೂಸ್ ನಾಟೌಟ್ : ಪ್ರಥಮ ಚಿಕಿತ್ಸೆ ಕೌಶಲ ಪ್ರತಿಯೊಬ್ಬರೂ ತಿಳಿಯಬೇಕಾದುದು ಕರ್ತವ್ಯ. ಏಕೆಂದರೆ, ಜೀವನದಲ್ಲಿ ಹಲವು ಸಂದರ್ಭಗಳಲ್ಲಿ ಪ್ರತಿಯೊಬ್ಬರಿಗೂ ಇದರ ಅಗತ್ಯ ಬೀಳಬಹುದು. ಈ ಬಗ್ಗೆ ಒಂದಿಷ್ಟು ಜ್ಞಾನ ಪಡೆಯುವುದು ಕೂಡ ಆವಶ್ಯಕವಾಗಿದೆ. ಆದರೆ ಆಸ್ಪತ್ರೆಯೊಂದಕ್ಕೆ ಅಪಘಾತವಾಗಿ ಹೋಗಿರುವ ವ್ಯಕ್ತಿಗೆ ಅಲ್ಲಿನ ಸಿಬ್ಬಂದಿ ಏನು ಮಾಡಿದ್ದಾರೆ ಗೊತ್ತಾ..?ಪ್ರಥಮ ಚಿಕಿತ್ಸೆ ವೇಳೆ ಆಗಿರೋ ಎಡವಟ್ಟುಗಳೇನು ಅನ್ನೋದಕ್ಕೆ ಈ ವರದಿ ನೋಡಿ..
ಹೌದು,ಅಪಘಾತವಾದ ಬಳಿಕ ಆಸ್ಪತ್ರೆ ಸಿಬ್ಬಂದಿ ಪ್ರಥಮ ಚಿಕಿತ್ಸೆಯ ವೇಳೆ ಮಹಾ ಎಡವಟ್ಟು ಮಾಡಿದ ಪ್ರಸಂಗವೊಂದು ನಡೆದಿದೆ.ನೆಲಮಂಗಲ ತಾಲೂಕಿನ ಡಾಬಸ್ ಪೇಟೆ ಸರ್ಕಾರಿ ಆಸ್ಪತ್ರೆಯಲ್ಲಿ ಈ ಘಟನೆ ನಡೆದಿದ್ದು, ಸಿಬ್ಬಂದಿ ನಿರ್ಲಕ್ಷ್ಯಕ್ಕೆ ಸಾರ್ವಜನಿಕರು ಕಿಡಿ ಕಾರಿದ್ದಾರೆ.
ಪ್ರಥಮ ಚಿಕಿತ್ಸೆ ಸಂದರ್ಭದಲ್ಲಿ ಸಿಬ್ಬಂದಿ ಪೇಪರ್ ರಟ್ಟು ಇಟ್ಟು ಡ್ರೆಸ್ಸಿಂಗ್ ಮಾಡಿರುವ ಘಟನೆ ನಡೆದಿದೆ.ಬೈಕ್ ಅಪಘಾತಕ್ಕೀಡಾಗಿ ಬಿಹಾರ (Bihar) ಮೂಲದ ಪ್ರಭು ಎಂಬ ಕಾರ್ಮಿಕ ಕಾಲು ಮುರಿದುಕೊಂಡಿದ್ದಾರೆ. ಕೂಡಲೇ ಅವರು ಚಿಕಿತ್ಸೆಗಾಗಿ ಸ್ಥಳೀಯ ಆಸ್ಪತ್ರೆಗೆ ತೆರಳಿದ್ದಾರೆ. ಈ ವೇಳೆ ಅಲ್ಲಿ ವೈದ್ಯರಿರಲಿಲ್ಲ. ಹೀಗಾಗಿ ಸಿಬ್ಬಂದಿ ಗಾಯಾಳು ಕಾಲಿಕೆ ಪೇಪರ್ ರಟ್ಟಿನಿಂದ ಬ್ಯಾಂಡೇಜ್ ಮಾಡಿದ್ದಾರೆ.
ಇದನ್ನು ಗಮನಿಸಿದ ಅಲ್ಲಿನ ಸ್ಥಳೀಯರು ಫೋಟೋ ತೆಗ್ದು ಆಕ್ರೋಶ ವ್ಯಕ್ತ ಪಡಿಸಿದ್ದಾರೆ. ಆಸ್ಪತ್ರೆ ಅಂದಾಕ್ಷಣ ಪ್ರಥಮ ಚಿಕಿತ್ಸೆಯನ್ನು ಅಲ್ಲಿನ ಸಿಬ್ಬಂದಿಗಳು ಕಲಿತುಕೊಳ್ಳುವ ಅನಿವಾರ್ಯತೆ ಇದೆ.ಸಾಮಾನ್ಯ ಜನರಿಗೂ ಇದು ತಿಳಿದಿರುವ ವಿಚಾರ. ಆದರೆ ವೈದ್ಯರು ಇಲ್ಲದೆ ಆಸ್ಪತ್ರೆಯ ಸಿಬ್ಬಂದಿ ಗಾಯಾಳು ವ್ಯಕ್ತಿ ಕಾಲಿಗೆ ರಟ್ಟನ್ನು ಕಟ್ಟಿದ್ದಾರೆ ಅಂದ್ರೆ ಈ ವ್ಯವಸ್ಥೆಗೆ ಏನನ್ನಬೇಕೋ ತಿಳಿಯುತ್ತಿಲ್ಲ ಎಂದು ಸಾರ್ವಜನಿಕರು ಕಿಡಿ ಕಾರಿದ್ದಾರೆ.