ನ್ಯೂಸ್ ನಾಟೌಟ್ :ಪೊಲೀಸರಿಂದ ತಪ್ಪಿಸಿಕೊಳ್ಳಲು ಹೋಗಿ ಬಿಜೆಪಿ ಕಾರ್ಯಕರ್ತನೊಬ್ಬ ಕೈ-ಕಾಲು ಮುರಿದುಕೊಂಡಿರುವ ಘಟನೆ ನಡೆದಿದೆ.
ಮಹಾಂತೇಶ್ ಎಸ್ಕೇಪ್ ಆಗಲು ಯತ್ನಿಸಿದ (escape from police) ಬಿಜೆಪಿ ಕಾರ್ಯಕರ್ತ ಎಂದು ತಿಳಿದು ಬಂದಿದೆ.ಕಲಬುರಗಿಯ ಅಫಜಲಪುರ ತಾಲೂಕಿನ ಮಾಶಾಳ ಗ್ರಾಮದ ನಿವಾಸಿಯೆಂದು ತಿಳಿದು ಬಂದಿದೆ.ಬಿಜೆಪಿ ಕಾರ್ಯಕರ್ತನಾದ ಮಹಾಂತೇಶ್ ಹಾಗೂ ಜೆಸ್ಕಾಂ ಸಿಬ್ಬಂದಿ ಜತೆ ವಿದ್ಯುತ್ ಬಿಲ್ ವಿಚಾರಕ್ಕೆ ಗಲಾಟೆ ನಡೆದಿತ್ತು ಎನ್ನಲಾಗಿದೆ.ಈ ವೇಳೆ ಬಿಜೆಪಿ ಕಾರ್ಯಕರ್ತ ಒಂದು ತಿಂಗಳ ವಿದ್ಯುತ್ ಬಿಲ್ 8 ಸಾವಿರ ಬಂದಿರುವುದನ್ನು ಪ್ರಶ್ನಿಸಿದ್ದು ಅಲ್ಲದೇ ಅವಾಚ್ಯ ಶಬ್ಧಗಳಿಂದಲೂ ನಿಂದಿಸಿದ್ದ ಎನ್ನಲಾಗಿದೆ. ಈ ವೇಳೆ ಜೆಸ್ಕಾಂ ಎಇಇ ಹಾಗೂ ಮಹಾಂತೇಶ್ ಮಧ್ಯೆ ಗಲಾಟೆ ನಡೆದಿತ್ತು ಎನ್ನಲಾಗಿದೆ.
ಇದರೀಂದಾಗಿ ಬಿಜೆಪಿ ಕಾರ್ಯಕರ್ತನ ವಿರುದ್ಧ ದೂರು ದಾಖಲಾಗಿತ್ತು. ಈ ಸಂಬಂಧ ಅಫಜಲಪುರ ಪೊಲೀಸ್ ಠಾಣೆಯಲ್ಲಿ ಪೊಲೀಸರು ದೂರು ದಾಖಲಿಸಿಕೊಂಡು ಮಹಾಂತೇಶ್ನನ್ನು ಬಂಧಿಸಿ, ಕಲಬುರಗಿಗೆ ಕರೆ ತಂದಿದ್ದರು.ಇದೇ ಸಂದರ್ಭದಲ್ಲಿ ತಪ್ಪಿಸಿಕೊಳ್ಳಲು ಪ್ಲ್ಯಾನ್ ಹೂಡುತ್ತಿದ್ದ ಮಹಾಂತೇಶ್ ಮಾರ್ಗ ಮಧ್ಯೆ ಊಟಕ್ಕಾಗಿ ಹೋಟೆಲ್ಗೆ ಬಂದಾಗ ಎಸ್ಕೇಪ್ ಆಗಲು ಪ್ಲ್ಯಾನ್ ಮಾಡಿಯೇ ಬಿಟ್ಟ. ಹೋಟೆಲ್ನ ಅಡುಗೆ ರೂಮಿನಿಂದ ಪರಾರಿ ಆಗಲು ಯತ್ನಿಸಿಸುತ್ತಿದ್ದಂತೆ ಅಲ್ಲಿಂದಲೇ ಹಾರಿದ್ದಾನೆ.ಈ ವೇಳೆ 2ನೇ ಮಹಡಿಯಲ್ಲಿದ್ದ ಆತ ಅಲ್ಲಿಂದ ಬಿದ್ದು ಕೈ- ಕಾಲು ಮುರಿದುಕೊಂಡಿದ್ದಾನೆ.
ಸದ್ಯ ಪೊಲೀಸರು ಗಾಯಾಳು ಮಹಾಂತೇಶ್ನನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಿದ್ದಾರೆ. ಪರಾರಿಯಾಗಲು ಯತ್ನಿಸಿದ ಸಂಬಂಧವು ಪ್ರಕರಣ ದಾಖಲಿಸುವ ಸಾಧ್ಯತೆ ಇದೆ.