ನ್ಯೂಸ್ ನಾಟೌಟ್ : ಬೆಳ್ಳಾರೆ ಪೇಟೆಯಲ್ಲಿ ತರಕಾರಿ ಅಂಗಡಿಗೆ ನುಗ್ಗಿ ಲಕ್ಷಾಂತರ ರೂ. ಮೌಲ್ಯದ ಸೊತ್ತು ಕಳವು ಪ್ರಕರಣಕ್ಕೆ ಸಂಬಂಧಿಸಿದಂತೆ ಮೂವರ ವಿರುದ್ಧ ಬೆಳ್ಳಾರೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಬೆಳ್ಳಾರೆ ಪೇಟೆಯಯಲ್ಲಿರುವ ಅತಾವುಲ್ಲಾ ಎಂಬವರ ಮಾಲೀಕತ್ವದ ಬಿ.ವಿ. ಎಂಬ ತರಕಾರಿ ಅಂಗಡಿಯಿಂದ ಸೊತ್ತುಗಳು ಕಳವಾಗಿತ್ತು. ಇದೀಗ ಪ್ರಕರಣಕ್ಕೆ ಸಂಬಂಧಿಸಿದಂತೆ ಜಮಾಲುದ್ದೀನ್ ಕೆ.ಎಸ್,ಅಜರುದ್ದೀನ್,ಸೂಫಿ ಕೆ.ಎಸ್. ಎಂಬವರ ಮೇಲೆ ಪ್ರಕರಣ ದಾಖಲಾಗಿದೆ. ತರಕಾರಿ, ಹಣ್ಣುಹಂಪಲು,ಜೇನು ಸೇರಿದಂತೆ ಸುಮಾರು 1,33,000 ರೂ. ಮೌಲ್ಯದ ಸೊತ್ತು ಹಾಗೂ 12,000 ನಗದು ಕಳವುಗೈದಿರುವುದಾಗಿ ಮಹಮ್ಮದ್ ರಫೀಕ್ ಎಂಬವರು ಪೊಲೀಸ್ ದೂರು ನೀಡಿದ್ದರು.