ನ್ಯೂಸ್ ನಾಟೌಟ್ : ಏಷ್ಯಾ ಕಪ್ ನಲ್ಲಿ ಪಾಕಿಸ್ತಾನ ತಂಡದ ಸೊಕ್ಕಡಗಿಸಿದ ಬೆನ್ನಲ್ಲೇ ಭಾರತ ತಂಡ ಮತ್ತೊಂದು ಸಮರಕ್ಕೆ ಮುಂದಾಗಿದೆ. ಈ ಹೋರಾಟದಲ್ಲಿ ಭಾರತ ತಂಡ ಪ್ರಬಲ ಶ್ರೀಲಂಕಾ ತಂಡವನ್ನು ಎದುರಿಸಲಿದೆ. ಹಾಲಿ ಚಾಂಪಿಯನ್ ಲಂಕಾ ತಂಡ ಭಾರತ ತಂಡಕ್ಕೆ ಕಬ್ಬಿಣದ ಕಡಲೆಯಾಗುವ ಎಲ್ಲ ಸಾಧ್ಯತೆಗಳಿವೆ. ಈ ಪಂದ್ಯದಲ್ಲಿ ಗೆಲ್ಲುವವರು ನೇರವಾಗಿ ಫೈನಲ್ ಗೆ ಪ್ರವೇಶ ಪಡೆದುಕೊಳ್ಳಲಿದ್ದಾರೆ.
ಕನ್ನಡಿಗ ಕೆ.ಎಲ್. ರಾಹುಲ್ ಪಾಕ್ ವಿರುದ್ಧ ಶತಕ ಸಿಡಿಸಿ ಗಮನ ಸೆಳೆದಿದ್ದರು. ವಿಶ್ವಕಪ್ ಕೂಟಕ್ಕೂ ಮೊದಲು ಕಮ್ ಬ್ಯಾಕ್ ಮಾಡಿ ನಿರೀಕ್ಷಿಸಿದ್ದಾರೆ. ಇಂದು ಲಂಕಾ ವಿರುದ್ಧವೂ ಅವರು ಅಬ್ಬರಿಸಬಹುದು ಅನ್ನುವ ನಿರೀಕ್ಷೆ ಇದೆ. ವಿರಾಟ್ ಕೊಹ್ಲಿ, ರೋಹಿತ್ ಶರ್ಮ ಸಿಡಿಯುವ ಸಾಧ್ಯತೆಗಳಿವೆ.
ಶ್ರೀಲಂಕಾ ತಂಡದಲ್ಲಿ ಸ್ಟಾರ್ ಆಟಗಾರರಿಲ್ಲ. ಆದರೆ ಈ ತಂಡ ಯಾವುದೇ ಸಂದರ್ಭದಲ್ಲಿ ಪುಟಿದೇಳುವ ಸಾಮರ್ಥ್ಯವನ್ನು ಹೊಂದಿದೆ. ಎಲ್ಲಕ್ಕಿಂತ ಹೆಚ್ಚಿನದ್ದಾಗಿ ತವರಿನಲ್ಲೇ ಈ ತಂಡ ಕಣಕ್ಕೆ ಇಳಿಯುವುದರಿಂದ ಹೆಚ್ಚಿನ ನಿರೀಕ್ಷೆ ಇದೆ. ಈ ಪಂದ್ಯಕ್ಕೆ ಮಳೆ ನಿರೀಕ್ಷೆ ಇದ್ದು ಪಂದ್ಯ ಸ್ಥಗಿತಗೊಳ್ಳುವ ಅಪಾಯವೂ ಇದೆ.