ನ್ಯೂಸ್ ನಾಟೌಟ್: ಇತ್ತೀಚೆಗೆ ಅಮೆರಿಕದ ಗೂಢಚಾರಿ ಅಧಿಕಾರಿಯೊಬ್ಬರು ಅಮೆರಿಕ ಅನಧಿಕೃತವಾಗಿ ಎಲಿಯನ್ಸ್ ಗಳನ್ನು ಬಂಧಿಸಿಟ್ಟಿದೆ ಎಂದು ಹೇಳಿದ್ದ ಹೇಳಿಕೆ ಎಲ್ಲೆಡೆ ಭಾರಿ ಸುದ್ದಿಯಾಗಿತ್ತು. ಸಾಮಾನ್ಯವಾಗಿ ಬಾಹ್ಯಾಕಾಶಕ್ಕೆ ಸಂಬಂಧಿಸಿದ ಬಹುತೇಕ ಚಲನ ಚಿತ್ರಗಳಲ್ಲಿ ಆಗಸದಿಂದ ಒಂದು ಹಾರುವ ತಟ್ಟೆ ಭೂಮಿಗೆ ಬಂದು ಇಳಿಯುವುದನ್ನು ನೋಡಿರುತ್ತೇವೆ, ಅಷ್ಟೇ ಯಾಕೆ ಅದರಿಂದ ಕೆಲ ಎರಡು ಕಾಲುಗಳುಳ್ಳ ಜನರು ಕೂಡ ಭೂಮಿಗೆ ಇಳಿಯುವುದನ್ನು ನೀವು ತೋರಿಸಿರುತ್ತಾರೆ.
ಇದುವರೆಗೆ ಇರುವ ಪ್ರಚಲಿತ ಜ್ಞಾನದ ಪ್ರಕಾರ ಅವುಗಳನ್ನು ಎಲಿಯನ್ ಗಳೆಂದು ನಂಬಲಾಗಿದೆ. ಏಕೆಂದರೆ ಎಲಿಯನ್ಸ್ ಅವುಗಳಂತೆಯೇ ಕಾಣಿಸುತ್ತಿರಬಹುದು ಎಂಬುದು ವಿಜ್ಞಾನಿಗಳು ಊಹಿಸಿದ್ದಾರೆ.
ಆದರೆ, ಈ ರೀತಿ ಆಗುವುದನ್ನು ಜನ ಕೇವಲ ಚಲನಚಿತ್ರಗಳಲ್ಲಿಯೇ ಮಾತ್ರ ವೀಕ್ಷಿಸಿದ್ದಾರೆ. ಆದರೆ, ಇದುವರೆಗೆ ನಿಜವಾಗಿಯೂ ಎಲಿಯನ್ಸ್ ಗಳಿವೆಯಾ ಅಥವಾ ಇಲ್ಲ ಎಂಬುದರ ಬಗ್ಗೆ ನಿಖರ ಮಾಹಿತಿ ಯಾರ ಬಳಿಯೂ ಇಲ್ಲ. ನಿಜವಾಗಿಯೂ ಎಲಿಯನ್ಸ್ ಗಳಿವೆಯಾ ಅಥವಾ ಇದೊಂದು ಕೇವಲ ಕಾನ್ಸ್ಪಿರೆಸಿ ಥಿಯರಿ ಆಗಿದೆಯಾ? ಇಂತಹ ಹಲವು ಪ್ರಶ್ನೆಗಳ ನಡುವೆಯೇ ಸಾಮಾಜಿಕ ಮಾಧ್ಯಮಗಳಲ್ಲಿ ವಿಡಿಯೋವೊಂದು ಇದೀಗ ಭಾರಿ ವೈರಲ್ ಆಗುತ್ತಿದೆ.
ಸಾಮಾಜಿಕ ಮಾಧ್ಯಮಗಳಲ್ಲಿ ಭಾರಿ ಸದ್ದು ಮಾಡುತ್ತಿರುವ ಈ ವಿಡಿಯೋವನ್ನು ಸ್ಪ್ಯಾನಿಶ್ ಸುದ್ದಿ ವೆಬ್ಸೈಟ್ ‘ಮಾರ್ಕಾ’ ಹಂಚಿಕೊಂಡಿತ್ತು. ಈ ವಿಡಿಯೋ ಪ್ರಕಾರ ಮೆಕ್ಸಿಕೋ ನಗರದ ವಿಜ್ಞಾನಿಗಳು ಕಾರ್ಯಕ್ರಮವೊಂದರಲ್ಲಿ ನಮ್ಮ ಕಲ್ಪನೆಯಲ್ಲಿರುವ ಎಲಿಯನ್ಸ್ ಹೋಲುವ ಎರಡು ಎಲಿಯನ್ಸ್ ಶವಗಳನ್ನು ವಿಶ್ವದ ಮುಂದೆ ತೆರೆದಿಟ್ಟಿದ್ದಾರೆ.
ಮೆಕ್ಸಿಕನ್ ಪತ್ರಕರ್ತ ಹಾಗೂ ಯುಫೋಲಾಜಿಸ್ಟ್ ಜೈಮೆ ಮೈಸನ್ ಈ ಕಾರ್ಯಕ್ರಮದ ನೇತೃತ್ವ ವಹಿಸಿದ್ದರು. ವೈರಲ್ ಆಗುತ್ತಿರುವ ಈ ವಿಡಿಯೋದಲ್ಲಿ ಎರಡು ಪ್ರತ್ಯೇಕ ಪೆಟ್ಟಿಗೆಯಲ್ಲಿ ‘ಮನುಷ್ಯರಲ್ಲದ ಶವಗಳನ್ನು’ ನೋಡಬಹುದು. ಈ ಸಂದರ್ಭದಲ್ಲಿ ಅಮೆರಿಕನ್ಸ್ ಫಾರ್ ಸೆಫ್ ಏರೋಸ್ಪೇಸ್ ನ ಎಕ್ಸಿಕ್ಯೂಟಿವ್ ಡೈರೆಕ್ಟರ್ ಹಾಗೂ ಯುಎಸ್ ನೆವಿಯ ಮಾಜಿ ಪೈಲಟ್ ರೆಯಾನ್ ಗ್ರೇವ್ಸ್ ಕೂಡ ಉಪಸ್ಥಿತರಿದ್ದರು ಎನ್ನಲಾಗಿದೆ