ನ್ಯೂಸ್ ನಾಟೌಟ್ : ಮಲಯಾಳಂ ನಟಿ ಅಪರ್ಣಾ ನಾಯರ್ ಪ್ರಕರಣಕ್ಕೆ ಸಂಬಂಧ ಪಟ್ಟ ಹಾಗೆ ಸ್ಪೋಟಕ ತಿರುವು ಸಿಕ್ಕಿದೆ. ಇಲ್ಲಿಯವರೆಗೆ ಗಂಡನ ಕುಡಿತದ ಚಟಕ್ಕೆ ಬೇಸತ್ತು ನಟಿ ದುರಂತ ಅಂತ್ಯಕ್ಕೆ ಶರಣಾಗಿದ್ದಾರೆ ಎಂಬ ಬಗ್ಗೆ ಹೇಳಲಾಗಿತ್ತು. ಇದೀಗ ಅಪರ್ಣಾ ಸಹ ಉಸಿರು ಚೆಲ್ಲುವ ಮುನ್ನ ಮದ್ಯಪಾನ ಮಾಡಿದ್ದಳು ಎಂದು ಸ್ವತಃ ಆಕೆಯ ಗಂಡ ಪೊಲೀಸರಿಗೆ ಹೇಳಿಕೆ ನೀಡಿದ್ದಾರೆ ಎನ್ನುವ ಬಗ್ಗೆ ವರದಿಯಾಗಿದೆ.
ಇಡೀ ಕೇರಳ ರಾಜ್ಯವೇ ಈ ಬಗ್ಗೆ ಬೆಚ್ಚಿ ಬಿದ್ದಿತ್ತು.ನಟಿಯ ಈ ನಿರ್ಧಾರಕ್ಕೆ ಕಾರಣವೇನು ಎಂದು ಕೇರಳದ ಕರಮಾನ ಪೊಲೀಸ್ ಠಾಣೆಯಲ್ಲಿ ಈ ಸಂಬಂಧ ಪ್ರಕರಣ ದಾಖಲಾಗಿತ್ತು.ಇದೀಗ ಅಪರ್ಣಾ ಪತಿ ಸಂಜಿತ್ ಸ್ಪೋಟಕ ಹೇಳಿಕೆಯೊಂದನ್ನು ನೀಡಿದ್ದಾರೆ. ಘಟನೆ ನಡೆಯುವ ದಿನ ಅಪರ್ಣಾ ಕುಡಿದಿದ್ದಳು, ಇದೇ ವಿಚಾರಣಕ್ಕೆ ನನ್ನ ಮತ್ತು ಆಕೆಯ ನಡುವೆ ಜಗಳ ನಡೆದಿತ್ತು ಎಂದು ತಿಳಿಸಿದ್ದಾರೆ.
ಅದೇ ದಿನ ಬೆಳಗ್ಗೆ ಅಟ್ಟುಕಾಲ್ ದೇವಸ್ಥಾನಕ್ಕೆ ದಂಪತಿ ಭೇಟಿ ಮಾಡಿದ್ದು, ರಾತ್ರಿ ಓಣಂ ಆಚರಣೆಯನ್ನು ನೋಡಲು ನಿರ್ಧಾರ ಮಾಡಿದ್ದರು ಎನ್ನಲಾಗಿದೆ.ಆದರೆ, ಅಪರ್ಣಾ ಮದ್ಯ ಸೇವಿಸಿದ್ದನ್ನು ನೋಡಿದ ಸಂಜಿತ್, ಆಕೆಯನ್ನು ಪ್ರಶ್ನಿಸಿದ್ದರು.ಹೀಗಾಗಿ ಇಬ್ಬರ ನಡುವೆ ವಾಗ್ವಾದ ನಡೆದಿದೆ ಎನ್ನುವ ಬಗ್ಗೆ ವರದಿಯಾಗಿದೆ.
ಜಗಳದ ನಡುವೆ ಸಂಜಿತ್ ತುಂಬಾ ಕೋಪಗೊಂಡಿದ್ದರು ಎನ್ನಲಾಗಿದೆ. ಆತ ಮೆಟ್ಟುಕಾಡಕ್ಕೆ ತೆರಳಿದಾಗ ಫೋನ್ ಕರೆ ಬಂದಿದ್ದು, ಆತ್ಮಹತ್ಯೆಗೆ ಯತ್ನಿಸುತ್ತಿರುವುದಾಗಿ ಅಪರ್ಣಾ ಹೇಳಿದ್ದಾಳೆ. ಇದನ್ನು ಕೇಳಿದ ಕೂಡಲೇ ಸಂಜಿತ್ ಮನೆಗೆ ಧಾವಿಸಿದ್ದು, ಅಷ್ಟರಲ್ಲಾಗಲೇ ಆಕೆ ಬಾರದ ಲೋಕಕ್ಕೆ ತೆರಳಿದ್ದರು.
ಗಲಾಟೆ ಸಂದರ್ಭದಲ್ಲಿ ಸಂಜಿತ್ ತಲೆಗೆ ಅಪರ್ಣಾ ಬಾಟಲಿಯಿಂದ ಹೊಡೆದಿರುವುದಾಗಿ ಆಕೆಯ ಮೂರು ವರ್ಷದ ಮಗಳು ಪೊಲೀಸರ ಮುಂದೆ ಹೇಳಿಕೆ ನೀಡಿದ್ದಾರೆ. ಸದ್ಯ ಹೇಳಿಕೆಯನ್ನು ದಾಖಲಿಸಿರುವ ಪೊಲೀಸರು ತನಿಖೆಯನ್ನು ಮುಂದುವರಿಸಿದ್ದಾರೆ.
ಏನಿದು ಪ್ರಕರಣ?
ಕೇರಳದ ಕರಮಾನದ ಖಾಸಗಿ ಆಸ್ಪತ್ರೆಯಲ್ಲಿ ಸ್ವಾಗತಕಾರಿಣಿಯಾಗಿದ್ದ ಅಪರ್ಣಾ ಎರಡು ವಾರಗಳ ಹಿಂಷ್ಟೇ ರಾಜೀನಾಮೆ ನೀಡಿದ್ದರು. ಮನೆಯ ಕೊಠಡಿಯೊಳಗೆ ಉಸಿರು ಚೆಲ್ಲಿದ್ದಾಳೆ. ಆ.31ರಂದು ಕುಟುಂಬಸ್ಥರಿಗೆ ತಿಳಿಸಿದ ಬಳಿಕ ಅದೇ ದಿನ ರಾತ್ರಿ 7.30ರ ಸುಮಾರಿಗೆ ಅಪರ್ಣಾ ಅವರನ್ನು ಕರಮಾನ ಕಿಲ್ಲಿಪಾಲಂನಲ್ಲಿರುವ ಖಾಸಗಿ ಆಸ್ಪತ್ರೆಗೆ ಕರೆತರಲಾಯಿತು. ಆದರೆ, ಪ್ರಯೋಜನವಾಗಲಿಲ್ಲ. ಇದಾದ ಬಳಿಕ ಪೊಲೀಸರು ಅಸಹಜ ಸಾವು ಪ್ರಕರಣ ದಾಖಲಿಸಿದರು. ಆದರೆ, ಅಪರ್ಣಾ ಸಾವಿಗೆ ಗಂಡನ ಕುಡಿತದ ಚಟ ಮತ್ತು ಕೌಟುಂಬಿಕ ಸಮಸ್ಯೆಗಳೇ ಕಾರಣ ಎಂದು ಅಪರ್ಣಾ ಪಾಲಕರು ಆರೋಪ ಮಾಡಿದರು.
ಸಾವಿಗೂ ಕೆಲವೇ ಗಂಟೆಗಳಿಗೂ ಮುನ್ನ ಅಪರ್ಣಾ, ತನ್ನ ತಾಯಿಗೆ ವಿಡಿಯೋ ಕಾಲ್ ಮಾಡಿ, ಕುಟುಂಬದಲ್ಲಿನ ಸಮಸ್ಯೆಗಳ ಬಗ್ಗೆ ಮಾತನಾಡಿದ್ದರು. ಗಂಡನ ಕುಡಿತದ ಚಟದಿಂದ ಮಾನಸಿಕ ತೊಂದರೆಗೆ ಒಳಗಾಗಿದ್ದಳು. ಆದಷ್ಟು ಬೇಗ ಈ ಸ್ಥಳವನ್ನು ತೊರೆಯುತ್ತೇನೆ ಎಂದು ಹೇಳಿದ್ದಳು. ಫೋನ್ನಲ್ಲಿ ಮಾತನಾಡುವಾಗ ಅಪರ್ಣಾ ಅಳುತ್ತಿದ್ದಳು ಎಂದು ಆಕೆಯ ತಾಯಿ ತಿಳಿಸಿದ್ದರು. ಆದರೆ ಇದೀಗ ಪ್ರಕರಣ ಹೊಸ ತಿರುವು ಪಡೆದುಕೊಂಡಿದೆ. ಅಪರ್ಣಾ ಸಹ ಕುಡಿತದ ಚಟ ಹೊಂದಿದ್ದಳು ಎನ್ನಲಾಗಿದೆ.