ನ್ಯೂಸ್ ನಾಟೌಟ್: ಇತ್ತೀಚೆಗೆ ಬಿಗ್ಬಾಸ್ ಮನೆಯೊಳಕ್ಕೆ ಹೋಗಿದ್ದ ನಟಿ ಪೂಜಾ ಭಟ್ ತಂದೆ ಅಲ್ಲಿಯ ಮಹಿಳಾ ಸ್ಪರ್ಧಿಗಳ ಜೊತೆ ಅಸಭ್ಯವಾಗಿ ನಡೆದುಕೊಂಡಿದ್ದರು ಎನ್ನುವ ಆರೋಪವೂ ನಿರ್ಮಾಪಕ ಮಹೇಶ್ ಭಟ್ ಮೇಲೆ ಕೇಳಿಬಂದಿತ್ತು.
ನಟಿ ಪೂಜಾ ಭಟ್ ಆಗಾಗ್ಗೆ ವಿವಾದಗಳಿಗೆ ಸಿಲುಕುತ್ತಲೇ ಇರುತ್ತಾರೆ. ಪೂಜಾ ಭಟ್ 80ರ ದಶಕದಲ್ಲೇ ಬಿಕಿನಿ ಧರಿಸಿ ತಮ್ಮ ಹಾಟ್ ಲುಕ್ನಿಂದಲೇ ಅಭಿಮಾನಿಗಳನ್ನು ತನ್ನತ್ತ ಸೆಳೆದುಕೊಂಡ ನಟಿ. ಇವರ ತಂದೆ ನಿರ್ದೇಶಕ ಮಹೇಶ್ ಭಟ್.
ಮಹೇಶ್ ಭಟ್ ಮಗಳು ಪೂಜಾ ಭಟ್ ಮದುವೆಯಾಗಬೇಕೆನ್ನುವ ತಮ್ಮ ಬಯಕೆಯನ್ನು ಹೇಳಿಕೊಂಡು ಆಕೆಯ ಜೊತೆಗೆ ಲಿಪ್ ಲಾಕ್ ಮಾಡಿ ನೆಟ್ಟಿಗರಿಂದ ಆಕ್ರೋಶಕ್ಕೆ ಒಳಗಾಗಿದ್ದರು.
ಇನ್ನು ಅದರ ಪೋಟೋ ಹೊರಬಂದಾಗ ಸಿನಿರಂಗದಲ್ಲಿ ಸಂಚಲನವೇ ಸೃಷ್ಟಿಯಾಗಿತ್ತು. ಮಹೇಶ್ ಭಟ್ ತಮ್ಮ ಮಗಳೊಂದಿಗೆ ಪರಸ್ಪರ ಚುಂಬಿಸಿದ ಫೋಟೋವನ್ನುಸ್ಟಾರ್ಡಸ್ಟ್ ಮ್ಯಾಗಜಿನ್ನಲ್ಲಿ ಪ್ರಕಟಿಸಲಾಗಿತ್ತು. ಈ ಪೋಟೋಗೆ ಅನೇಕರಿಂದ ವಿರೋಧ ವ್ಯಕ್ತವಾಗಿತ್ತು. ಇದೀಗ ಅದೇ ಪೋಟೋ ವಿಚಾರವಾಗಿ ನಟಿ ಪೂಜಾ ಭಟ್ ಮತ್ತೆ ಮಾತನಾಡಿದ್ದಾರೆ.
ನಿಮ್ಮ ತಂದೆಯೊಂದಿಗೆ ಲಿಪ್ ಲಾಕ್ ಮಾಡಿ ನೀವು ಪಶ್ಚಾತಾಪ ಪಟ್ಟಿದ್ದೀರಾ ಎನ್ನುವ ಪ್ರಶ್ನೆಗೆ ಉತ್ತರಿಸಿದ ಪೂಜಾ ಭಟ್ “ನಾನು ಆ ಕ್ಷಣವನ್ನು ಸಾಮಾನ್ಯವೆಂದು ಭಾವಿಸುತ್ತೇನೆ. ನೋಡುವವರು ಏನಾದರೂ ಮಾತನಾಡಬಹುದು. ಈ ಸಂದರ್ಭದಲ್ಲಿ ನನಗೆ ಶಾರುಖ್ ಅವರ ಒಂದು ಮಾತು ನೆನಪಿಗೆ ಬರುತ್ತೆ ಏನೆಂದರೆ ನಿಮಗೆ ಹೆಣ್ಣು ಮಕ್ಕಳಿದ್ದು, ಅವರು ಚಿಕ್ಕವರಿದ್ದಾಗ ಅಪ್ಪ ಅಮ್ಮ ನನಗೆ ಒಂದು ಮುತ್ತು ಕೊಡಿ ಎಂದು ಕೇಳುತ್ತದೆ. ಆಗ ತಂದೆ ತಾಯಿ ಸಹಜವಾಗಿಯೇ ಕೊಡುತ್ತಾರೆ. ಅದೇ ರೀತಿ ನಾನು ಈಗಲೂ ನನ್ನಪ್ಪನಿಗೆ ಚಿಕ್ಕ ಮಗುವೇ..ಅವರು ಜೀವನವಿಡೀ ನನ್ನ ಜೊತೆ ಹೀಗೆ ಇರುತ್ತಾರೆ” ಎಂದು ಹೇಳಿದ್ದಾರೆ ಎಂದು ವರದಿ ತಿಳಿಸಿದೆ.