ನ್ಯೂಸ್ ನಾಟೌಟ್ :ಬ್ಯಾಂಕ್ ಬಳಿ ವ್ಯವಹಾರ ಮಾಡುವಾಗ ತುಂಬಾ ಜಾಗರೂಕರಾಗಿರಬೇಕಾಗುತ್ತದೆ.ಸ್ವಲ್ಪ ಯಾಮಾರಿದ್ರೂ ನಾವು ಕಷ್ಟ ಪಟ್ಟು ದುಡಿದ ಹಣ ಯಾರದ್ದೋ ಪಾಲಾಗುವ ಸಾಧ್ಯತೆ ಹೆಚ್ಚಿದೆ.ಇದೀಗ ಬ್ಯಾಂಕೇ ಮಾಡಿರುವ ಎಡವಟ್ಟಿನಿಂದಾಗಿ ವ್ಯಕ್ತಿಯೊಬ್ಬರ ಖಾತೆಗೆ ಬರೋಬ್ಬರಿ ೯,೦೦೦ ಕೋಟಿ ರೂ. ಜಮೆಯಾದ ಅಪರೂಪದ ಘಟನೆ ವರದಿಯಾಗಿದೆ.
ಅಂದ ಹಾಗೆ ತಮಿಳುನಾಡಿನ ಬಡ ಅಟೋ ಚಾಲಕನ ಅಕೌಂಟಿಗೆ ಬರೋಬ್ಬರಿ 9,000 ಕೋಟಿ ರೂ. ಹಣ ಜಮೆ ಆಗಿದೆ. ಪಳನಿಯ ನೈಕ್ಕರಪಟ್ಟಿ ಮೂಲದ ರಾಜ್ಕುಮಾರ್ ಎಂಬ ಆಟೋ ಚಾಲಕನಿಗೆ ತನ್ನ ಖಾತೆಗೆ ಬ್ಯಾಂಕ್ನಿಂದ ಬಂದಿರುವ ಹಣ ನೋಡಿ ಶಾಕ್ ಆಗಿದೆ.ಹಣ ಕ್ರೆಡಿಟ್ ಆಗಿರುವ ಬಗ್ಗೆ ಆತನ ಫೋನ್ಗೆ ಎಸ್ಎಂಎಸ್ ಬಂದಿದೆ. ಮೊದಲು ಈ ಸಂದೇಶವನ್ನು ಫೇಕ್ಎಂದುಕೊಂಡಿದ್ದ ಆತ ಮತ್ತೆ ಬ್ಯಾಂಕ್ ಖಾತೆಯನ್ನು ನೋಡಿ ಪರಿಶೀಲಿಸಿದಾಗ ಗಾಬರಿಯಾಗಿದ್ದಾನೆ.
ತಮಿಳುನಾಡು ಮರ್ಕೆಂಟೈಲ್ ಬ್ಯಾಂಕ್ನಿಂದ ಆಟೋ ಚಾಲಕನ ಖಾತೆಗೆ 9,000 ಕೋಟಿ ರೂಪಾಯಿ ಜಮಾ ಮಾಡಿರುವ ಸಂದೇಶವನ್ನು ಕಳುಹಿಸಿದ್ದಾರೆ. ಈ ಹಣ ಬರುವ ಮೊದಲು ಆತನ ಖಾತೆಯಲ್ಲಿ 105 ರೂ. ಮಾತ್ರ ಇತ್ತು ಎಂದು ಹೇಳಲಾಗಿದೆ.ಆದರೆ ಏಕಾ ಏಕಿ ಕೋಟಿಗಟ್ಟಲೆ ಹಣ ನೋಡಿ ಕಣ್ತುಂಬಿಕೊಂಡ ಆತ ಕೂಡಲೇ ೨೧,೦೦೦ ರೂ.ವನ್ನು ಕೊಡಬೇಕಾದವರಿಗೆ ಕೊಟ್ಟಿದ್ದಾನೆ.
9,000 ಕೋಟಿ ರೂಪಾಯಿ ಜಮೆಯಾಗಿ 30 ನಿಮಿಷದಲ್ಲಿ ಮತ್ತೆ ಆ ಹಣವನ್ನು ಬ್ಯಾಂಕ್ ನವರು ಹಿಂಪಡೆದಿದ್ದಾರೆ.ಆದರೆ ಆಟೋ ಚಾಲಕ 9,000 ಕೋಟಿಯಲ್ಲಿ 21 ಸಾವಿರ ರೂ.ವನ್ನು ತನ್ನ ಸ್ನೇಹಿತನಿಗೆ ಕಳುಹಿಸಿಕೊಟ್ಟಿದ್ದರಿಂದ ಭಾರಿ ಸಮಸ್ಯೆಯಾಗಿದೆ.
ಮರುದಿನ ಬೆಳಿಗ್ಗೆ ಬ್ಯಾಂಕ್ ಅಧಿಕಾರಿಗಳು ಆತನನ್ನು ಹುಡುಕಿಕೊಂಡು ಬಂದಿದ್ದು, ತಪ್ಪಾಗಿ ಬಂದಿರುವ ಹಣದ ಬಗ್ಗೆ ತಿಳಿಸಿದ್ದಾರೆ.ಆದರೆ ಗಾಬರಿಯಾದ ಆತ ಖರ್ಚು ಮಾಡಿದ ಹಣವನ್ನು ಹಿಂಪಡೆಯದಂತೆ ಅಟೋ ಚಾಲಕ ರಾಜ್ಕುಮಾರ್ ಮನವಿ ಮಾಡಿದ್ದಾನೆ. 9,000 ಕೋಟಿ ರೂ.ನಲ್ಲಿ ೨೧,೦೦೦ ತಾನೇ ಎಂದುಎರಡು ಕಡೆ ಪರಸ್ಪರ ರಾಜಿ ಮಾಡಿಕೊಂಡಿದ್ದಾರೆ ಎಂದು ಹೇಳಲಾಗಿದೆ.