ನ್ಯೂಸ್ ನಾಟೌಟ್ :ಎಲ್ಲೆಡೆ ಗಣೇಶನ ಹಬ್ಬದ ಸಂಭ್ರಮ ಮುಗಿಲು ಮುಟ್ಟಿದೆ.ಭಕ್ತಾದಿಗಳು ಗಣೇಶನ ದರ್ಶನ ಪಡೆದು ಪುಳಕಿತರಾಗುತ್ತಿದ್ದಾರೆ.ಅಂತೆಯೇ ಶ್ರೀ ಸಿದ್ದಿವಿನಾಯಕ ಸೇವಾ ಸಮಿತಿ (ರಿ ) ಸುಳ್ಯ ಮತ್ತು ಸಾರ್ವಜನಿಕ ಶ್ರೀ ದೇವತಾರಾಧನ ಸಮಿತಿ ಸುಳ್ಯ ವತಿಯಿಂದ 55 ನೇ ವರ್ಷದ ಸಾರ್ವಜನಿಕ ಶ್ರೀ ಗಣೇಶೋತ್ಸವ ಅದ್ದೂರಿಯಿಂದ ನಡೆಯುತ್ತಿದೆ.ಇಂದು ಆರಂಭಗೊಂಡ ಈ ಉತ್ಸವ ಸೆ.23 ಶನಿವಾರದ ತನಕ ಇರಲಿದೆ.
ಕಾರ್ಯಕ್ರಮವನ್ನು ಸಿದ್ದಿವಿನಾಯಕ ಸೇವಾ ಸಮಿತಿ (ರಿ ) ಸುಳ್ಯ ಇದರ ಅಧ್ಯಕ್ಷರಾದ ಉಮೇಶ್ ಪಿ.ಕೆ. ದೀಪ ಬೆಳಗಿಸುವುದರ ಮೂಲಕ ಉದ್ಘಾಟಿಸಿದರು.ಬಳಿಕ ಮಾತಾಡಿದ ಅವರು “ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಕೇವಲ ಮನರಂಜನೆಗೆ ಮೀಸಲಿಡದೇ ಸಂಸ್ಕೃತಿ ಹಾಗೂ ಪ್ರತಿಭೆಗಳನ್ನು ಪರಿಚಯಿಸುವ ಮತ್ತು ಬೆಳೆಸುವ ವೇದಿಕೆಯಾಗಬೇಕು ಎಂದರು.
ವೇದಿಕೆಯಲ್ಲಿ ಮುಖ್ಯ ಅತಿಥಿಗಳಾಗಿ ಅಕಾಡೆಮಿ ಆಫ್ ಲಿಬರಲ್ ಎಜ್ಯುಕೇಶನ್ (ರಿ)ಸುಳ್ಯ ಇದರ ಅಧ್ಯಕ್ಷರಾದ ಡಾ.ಕೆ.ವಿ. ಚಿದಾನಂದ ,ಕಸ್ತೂರಿ ನರ್ಸರಿ ಮಾಲಕರಾದ ಮಧುಸೂಧನ್, ಗಣೇಶೋತ್ಸವ ಸಮಿತಿ ಅಧ್ಯಕ್ಷರಾದ ಕೆ.ಸೋಮನಾಥ್,ಗಣೇಶೋತ್ಸವ ಸಮಿತಿ ಸುಳ್ಯ ಇದರ ಪ್ರಧಾನ ಕಾರ್ಯದರ್ಶಿಯಾದ ಎಂ.ಜೆ. ಶಶಿಧರ ಕೊಯ್ಕುಳಿ, ಲತಾ ಮಧುಸೂಧನ್ (ಮಹಿಳಾ ಘಟಕ ಸಾರ್ವಜನಿಕ ಶ್ರೀ ದೇವತಾ ಆರಾಧನಾ ಸಮಿತಿ ಸುಳ್ಯ) ಹಾಗೂ ಸರ್ವ ಸದಸ್ಯರು ಸಾರ್ವಜನಿಕ ಶ್ರೀ ದೇವತಾರಾಧನಾ ಸಮಿತಿ ಸುಳ್ಯ, ಮಹಿಳಾ ಘಟಕ ಸಾರ್ವಜನಿಕ ಶ್ರೀ ದೇವತಾ ಆರಾಧನಾ ಸಮಿತಿ ಸುಳ್ಯ ಇದರ ಸದಸ್ಯರು,ಶ್ರೀ ಸಿದ್ದಿವಿನಾಯಕ ಸೇವಾ ಸಮಿತಿ (ರಿ ) ಸುಳ್ಯ ಇದರ ಸರ್ವ ಸದಸ್ಯರು ಉಪಸ್ಥಿತರಿದ್ದರು.
ದಯಾನಂದ ಸ್ವಾಗತಿಸಿದರು. ಶಶಿಧರ ಎಂ.ಜೆ ಧನ್ಯವಾದವಿತ್ತರು. ಲತಾಶ್ರೀ ಸುಪ್ರೀತ್ ಮೊಂಟಡ್ಕ ನಿರೂಪಿಸಿದರು.ಅತ್ಯಧಿಕ ಸಂಖ್ಯೆಯಲ್ಲಿ ಭಕ್ತರು ಭಾಗವಹಿಸಿ ಗಣಪತಿ ದೇವರ ಕೃಪೆಗೆ ಪಾತ್ರರಾದರು.