ನ್ಯೂಸ್ ನಾಟೌಟ್ : ಆಕೆ ಹಲವು ಕನಸುಗಳನ್ನು ಹೊತ್ತುಕೊಂಡು ಮಹಾನಗರಿಗೆ ಕಾಲಿಟ್ಟಿದ್ದಳು.ತಾನು ಹಾಗಾಗಬೇಕು..ಹೀಗಾಗಬೇಕು…ಇನ್ನೂ ಎತ್ತರಕ್ಕೆ ಬೆಳೆಯಬೇಕು..ಜೀವನದಲ್ಲಿ ಏನಾದರೊಂದು ಸಾಧನೆ ಮಾಡಬೇಕೆಂದು ಹಠ ಹಿಡಿದಿದ್ದಳು.
ಹೌದು,ಆಕೆ ವಯಸ್ಸು ಕೇವಲ 24.ಕೊನೆಗೂ ಆಕೆ ಆಸೆ ಪಟ್ಟಂತೆ ಗಗನಸಖಿಯಾಗಿ ಇತ್ತೀಚೆಗೆ ನೇಮಕಗೊಂಡಿದ್ದಳು.ತನ್ನ ಕೆಲಸದ ಜೊತೆ ಸಾಮಾಜಿಕ ಜಾಲತಾಣದಲ್ಲೂ ಸಕ್ರಿಯವಾಗಿದ್ದಳು.ಆದರೆ ಏಕಾಏಕಿಯಾಗಿ ಏನಾಯ್ತೋ ಏನೋ.. ಅಪಾರ್ಮೆಂಟ್ನಲ್ಲಿ ಶಾಶ್ವತವಾಗಿ ಕಣ್ಣು ಮುಚ್ಚಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾಳೆ. ಈಕೆಯದ್ದು ಆಕರ್ಷಕ ವ್ಯಕ್ತಿತ್ವ,ಸೌಂದರ್ಯದ ಗಣಿ ಹೀಗೆ ಗಗನಸಖಿಯಾಗಿ ವೃತ್ತಿ ಜೀವನ ಆರಂಭಿಸಿದ್ದ ರೂಪಲ್ ಒಗ್ರೆ ದುರಂತ ಅಂತ್ಯ ಕಂಡಿದ್ದಾಳೆ.
ಎಪ್ರಿಲ್ ತಿಂಗಳಲ್ಲಷ್ಟೇ ಗಗನಸಖಿಯಾಗಿ ನೇಮಕಗೊಂಡ ಈಕೆ, ತರಬೇತಿ ಅವಧಿಯಲ್ಲಿದ್ದಳು.ಬಳಿಕ ಈಕೆಗೆ ಇತ್ತೀಚೆಗಷ್ಟೇ ಕೆಲಸ ಖಾಯಂ ಆಗಿತ್ತು.ಅಂಧೇರಿಯ ಎನ್ಜಿ ಅಪಾರ್ಟ್ಮೆಂಟ್ನಲ್ಲಿ ವಾಸವಿದ್ದ ಈಕೆ ಬಾರದ ಲೋಕಕ್ಕೆ ತೆರಳಿದ್ದಾಳೆ. ಮಾಹಿತಿ ತಿಳಿದು ಸ್ಥಳಕ್ಕೆ ಧಾವಿಸಿದ ಪೊಲೀಸರು ದೃಶ್ಯ ಕಂಡು ಬೆಚ್ಚಿ ಬಿದ್ದಿದ್ದಾರೆ.ಯಾರೂ ಊಹಿಸಿರದ ಘಟನೆ ಅಲ್ಲಿ ಆಗಿತ್ತು ಅನ್ನೋದು ದುಖಃದ ವಿಚಾರ.
ರೂಪಾಲ್ ಒಗ್ರೆಯ ಕತ್ತು ಸೀಳಿದ ಸ್ಥಿತಿಯಲ್ಲಿದ್ದಳು. ಉಡುಪುಗಳು ಕೂಡ ಹರಿದಿತ್ತು. ಮೃತದೇಹ ಪರಿಶೀಲನೆ ನಡೆಸಿದ ಮುಂಬೈ ಪೊಲೀಸರು ಪರೀಕ್ಷೆಗೆ ರಾಜವಾಡಿ ಆಸ್ಪತ್ರೆಗೆ ರವಾನಿಸಿದ್ದಾರೆ. ಪೊವಾಯಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ತನಿಖೆ ಆರಂಭಗೊಂಡಿದೆ. ರೂಪಾಲ್ ಒಗ್ರೆ ತಮ್ಮ ಫ್ಲ್ಯಾಟ್ನಲ್ಲಿ ಸಹೋದರಿ ಹಾಗೂ ಆಕೆಯ ಬಾಯ್ಫ್ರೆಂಡ್ ಜೊತೆ ವಾಸವಿದ್ದಳು ಎನ್ನುವ ಮಾಹಿತಿ ಲಭ್ಯವಾಗಿದೆ.
ಮೂರು ಜನ ಒಟ್ಟಿಗೆ ಇರುತ್ತಿದ್ದರು. ಕೆಲ ದಿನಗಳ ಹಿಂದೆ ಸಹೋದರಿ ಹಾಗೂ ಆಕೆಯ ಬಾಯ್ಫ್ರೆಂಡ್ ರಜಾ ನಿಮಿತ್ತ ತಮ್ಮ ಹುಟ್ಟೂರಿಗೆ ತೆರಳಿದ್ದಳು.ಹೀಗಾಗಿ ತಮ್ಮ ಪಾಡಿಗೆ ತಾನು ಕೆಲಸ ಮಾಡುತ್ತಾ ರೂಪಾಲ್ ಮನೆಯಲ್ಲಿ ಒಬ್ಬಳೇ ಇದ್ದಳು.ಆದರೆ ಹೇಗೆ ದುರಂತ ಸಂಭವಿಸಿತೋ ಗೊತ್ತಿಲ್ಲ.ಕೆಲವೊಂದು ಪ್ರಮುಖ ಸಾಕ್ಷ್ಯಗಳು ಕೂಡ ನಾಶವಾಗಿವೆ ಎಂದು ಹೇಳಲಾಗಿದೆ.
ಅಪಾರ್ಟ್ಮೆಂಟ್ ಸಿಸಿಟಿವಿ ದೃಶ್ಯಗಳನ್ನು ಪೊಲೀಸರು ಪರಿಶೀಲನೆ ನಡೆಸಿದ ಪೊಲೀಸರು ಗಗನಸಖಿಯಾಗಿ ಕೆಲಸ ಮಾಡುತ್ತಿದ್ದ ಸಹದ್ಯೋಗಿಗಳನ್ನು ಕೂಡ ವಿಚಾರಣೆ ನಡೆಸುವ ಸಾಧ್ಯತೆ ಇದೆ.ಮತ್ತೊಂದು ಕಡೆ ಗಗನಸಖಿಯನ್ನು ಈ ಮಟ್ಟಕ್ಕೆ ಬರುವಂತೆ ಮಾಡಿದ ದುಷ್ಕರ್ಮಿಗಳು ಆಕೆಯ ಮೊಬೈಲ್ ಫೋನ್ ನಾಶ ಮಾಡಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ. ಹೀಗಾಗಿ ಹಲವು ಸಾಕ್ಷ್ಯಗಳು ನಾಶವಾಗಿದೆ. ಇದೀಗ ಪೊಲೀಸರು ಅತ್ಯಾಧುನಿಕ ತಂತ್ರಜ್ಞಾನ ಬಳಸಿ ತನಿಖೆ ನೆಡಸಲು ಮುಂದಾಗಿದ್ದಾರೆ.