ನ್ಯೂಸ್ ನಾಟೌಟ್ : ಇತ್ತೀಚಿನ ದಿನಗಳಲ್ಲಿ ಹೆಣ್ಮಕ್ಕಳ ನಾಪತ್ತೆ ಪ್ರಕರಣ ಹೆಚ್ಚಾಗುತ್ತಿದೆ.ಈ ಹಿನ್ನಲೆಯಲ್ಲಿ ಮನೆಯವರು ಆದಷ್ಟು ಜಾಗೃತರಾಗಿರೋದು ಒಳ್ಳೆಯದು.ಇದೀಗ ಬೆಂಗಳೂರಿನಲ್ಲಿ ಇಂತಹ ಘಟನೆ ನಡೆದಿದ್ದು ಕಾಣೆಯಾಗಿದ್ದ ಯುವತಿ ಬರ್ಬರವಾಗಿ ಕೊಲೆಗೀಡಾದ ಘಟನೆಯೂ ನಡೆದಿದೆ.ರಾತ್ರಿ ಕಾಣೆಯಾಗಿದ್ದಾಳೆ ಎಂದು ಪೊಲೀಸ್ ಠಾಣೆಗೆ ದೂರು ನೀಡಿದ ಮಾರನೇ ದಿನವೇ ಯುವತಿಯ ಮೃತದೇಹ ಮನೆಯ ಮುಂದೆಯೇ ಪತ್ತೆಯಾಗಿರುವ ಘಟನೆ ಬೆಂಗಳೂರಿನ ಮಹದೇವಪುರದ ಲಕ್ಷ್ಮಿ ಸಾಗರ ಲೇಔಟ್ನಲ್ಲಿ ನಡೆದಿದೆ.
ಶೆಲ್ ಪೆಟ್ರೋಲ್ ಬಂಕ್ನಲ್ಲಿ ಕೆಲಸ ಮಾಡ್ತಿದ್ದ ಮಹಾನಂದಾ (21) ಮೃತ ದುರ್ದೈವಿ. ಈಕೆ ಕಲಬುರಗಿ ಮೂಲದ ಯುವತಿಯಾಗಿದ್ದು,ಬೆಳಗ್ಗಿನ ಜಾವ ನಾಲ್ಕು ಗಂಟೆಗೆ ಮನೆ ಮುಂದೆಯೇ ಶವವಾಗಿ ಪತ್ತೆಯಾಗಿದ್ದಾಳೆಂದು ತಿಳಿದು ಬಂದಿದೆ.
ಮಹಾನಂದಾಳನ್ನು ದುಷ್ಕರ್ಮಿಗಳು ಕತ್ತು ಹಿಸುಕಿ ಕೊಲೆ ಮಾಡಿದ್ದಾರೆ ಎಂದು ಹೇಳಲಾಗಿದೆ.ಅದಕ್ಕೆ ಪೂರಕವಾಗಿ ಕತ್ತಿನ ಭಾಗದಲ್ಲಿ ಗುರುತುಗಳು ಕೂಡ ಪತ್ತೆಯಾಗಿದೆ.ನಿನ್ನೆ ಕೆಲಸಕ್ಕೆ ಹೋಗದೆ ಮಹಾನಂದಾ ಮನೆಯಲ್ಲೇ ಇದ್ದಳು. ಕಲಬುರಗಿ ಮೂಲದ ಅಕ್ಕ-ತಂಗಿ ಇಬ್ಬರು ಶೆಲ್ ಪೆಟ್ರೋಲ್ ಬಂಕ್ನಲ್ಲಿ ಕೆಲಸ ಮಾಡ್ತಿದ್ರು. ನಿನ್ನೆ ರಾತ್ರಿ ಅಡುಗೆ ಮಾಡೋದಕ್ಕೆ ಅಂತ ಮಹಾನಂದಾ ಸ್ಟೌ ಮೇಲೆ ಅಕ್ಕಿ ಇಟ್ಟಿದ್ದಳು. ಬಳಿಕ ಮನೆಯಿಂದ ಹೊರಹೋಗಿ ಕಾಣೆಯಾಗಿದ್ದಳೆಂದು ತಿಳಿದು ಬಂದಿದೆ.
ರಾತ್ರಿಯಾದರೂ ತಂಗಿ ಮನೆಗೆ ಬಾರದ ಹಿನ್ನೆಲೆ ಮಹಾನಂದಾಳ ಅಕ್ಕ ಪೊಲೀಸ್ ದೂರು ನೀಡಿದ್ದಳು.ಬೆಳಗ್ಗೆ 5 ಗಂಟೆಗೆ ಎದ್ದು ನೋಡಿದಾಗ ಮನೆಯ ಬಳಿ ಸಹೋದರಿಯ ಮೃತದೇಹವನ್ನು ಕಂಡು ಮಹಾನಂದಾಳ ಅಕ್ಕ ಆಘಾತಕ್ಕೆ ಒಳಗಾಗಿದ್ದಾರೆ.
ಯಾರೋ ದುಷ್ಕರ್ಮಿಗಳು ಮೃತದೇಹ ಎಸೆದು ಹೋಗಿದ್ದಾರೆ ಎನ್ನಲಾಗಿದೆ.ಆದರೆ ಕೊಲೆ ಮಾಡಿದ ದುಷ್ಕರ್ಮಿಗಳ ಬಗ್ಗೆ ಸುಳಿವು ಸಿಕ್ಕಿಲ್ಲ.ಘಟನಾ ಸ್ಥಳಕ್ಕೆ ಮಹದೇವಪುರ ಪೊಲೀಸರು ಹಾಗೂ ಸೀನ್ ಆಫ್ ಕ್ರೈಮ್ ಅಫೀಸರ್ಸ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಪ್ರಕರಣ ದಾಖಲಾಗಿದ್ದು, ತನಿಖೆ ಆರಂಭಿಸಲಾಗಿದೆ.