ನ್ಯೂಸ್ ನಾಟೌಟ್: ಪ್ರೀತಿ ಕುರುಡು ಅನ್ನುವ ಮಾತಿದೆ, ಪ್ರೀತಿಗೆ ವಯಸ್ಸಿನ ಅಂತರ, ಜಾತಿ-ಧರ್ಮ ಇದ್ಯಾವುದು ಲೆಕ್ಕಕ್ಕೆ ಬರುವುದಿಲ್ಲ ಎನ್ನುತ್ತಾರೆ ಹಲವರು. ಪೋಷಕರ ವಿರೋಧದ ನಡುವೆಯೂ ಅಂತರ್ಜಾತಿ, ಅಂತರ್ಧಮಿಯ ವಿವಾಹವಾಗುತ್ತಾರೆ.
ಪ್ರಪಂಚದಲ್ಲಿ ಇಂತಹ ಕಟ್ಟುಪಾಡುಗಳನ್ನು ಮೀರಿ ಚಿತ್ರ-ವಿಚಿತ್ರವಾಗಿ ಮದುವೆಗಳಾದ ನಿದರ್ಶನಗಳಿವೆ. ಅದೇ ರೀತಿಯ ವಿಚಿತ್ರ ಮದುವೆಯ ಘಟನೆ ಸಾಮಾಜಿಕಜಾಲತಾಣದಲ್ಲಿ ಸಖತ್ ವೈರಲ್ ಆಗುತ್ತಿದೆ.
ಕೇವಲ 16 ವರ್ಷದ ಬಾಲಕನೊಬ್ಬ ಶಾಲೆಗೆ ಕೊಂಚಕಾಲ ವಿರಾಮ ನೀಡಿ 41 ವರ್ಷದ ಮಹಿಳೆಯನ್ನು ಮದುವೆಯಾಗಿದ್ದಾರೆ. ಜುಲೈ 30ರಂದು ಇಂಡೋನೇಷಿಯಾದ ಪಶ್ಚಿಮ ಕಲಿಮಂಟನ್ ಪ್ರಾಂತ್ಯದಲ್ಲಿ ಈ ಜೋಡಿ ವಿವಾಹವಾಗಿದ್ದಾರೆ. ಇದೀಗ ಈ ಜೋಡಿ ಮದುವೆಯಾಗಿರುವ ಫೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿವೆ.
ದುಬಾರಿ ಉಡುಪಿನಲ್ಲಿ ಅದ್ಭುತವಾಗಿ ಕಾಣುತ್ತಿರುವ ಈ ದಂಪತಿ ಮದುವೆಯ ಉಂಗುರವನ್ನು ಧರಿಸಿರುವುದನ್ನು ಕಾಣಬಹುದು. ಈ ಜೋಡಿಯ ಚಿತ್ರಗಳನ್ನು ನೋಡಿದ ಅನೇಕರು ಇವರಿಬ್ಬರು ತಾಯಿ ಮತ್ತು ಮಗನಂತೆ ಕಾಣುತ್ತಾರೆಂದು ಕಾಮೆಂಟ್ ಮಾಡಿದ್ದಾರೆ.