ನ್ಯೂಸ್ ನಾಟೌಟ್: ಚಿಕ್ಕಮಗಳೂರು ಜಿಲ್ಲೆ ಈ ಹಿಂದೆ ಐತಿಹಾಸಿಕ ಕ್ಷಣಕ್ಕೆ ಸಾಕ್ಷಿಯಾಗಿತ್ತು.ಅಂಗಾಂಗ ರವಾನೆ ಮಾಡುವ ಮೂಲಕ ಭಾರಿ ಸುದ್ದಿಯಾಗಿತ್ತು.ಇದೀಗ ಮತ್ತೊಂದು ಐತಿಹಾಸಿಕ ಕ್ಷಣಕ್ಕೆ ಕಾಫಿನಾಡ ಜಿಲ್ಲಾಸ್ಪತ್ರೆ ಸಾಕ್ಷಿಯಾಗಿದೆ.
ಹೌದು, ಮತ್ತೋರ್ವ ಮಹಿಳೆಯ ಅಂಗಾಂಗ ರವಾನೆಗೆ ಚಿಕ್ಕಮಗಳೂರು ಸಜ್ಜಾಗಿದೆ.ಬ್ರೈನ್ ಟ್ಯೂಮರ್ ನಿಂದ ಸಾವನ್ನಪ್ಪಿದ ಮಹಿಳೆಯ ಅಂಗಾAಗ ರವಾನೆ ಮಾಡಲಾಗುತ್ತಿದ್ದು,ಸಹನಾ ಮೊಸೆಸ್, ಬ್ರೈನ್ ಟ್ಯೂಮರ್ ನಿಂದ ಬಳಲುತ್ತಿದ್ದ ಮಹಿಳೆ ಎನ್ನಲಾಗಿದೆ.ಸಹನಾ,ಕಾಂಗ್ರೆಸ್ ಮಾಧ್ಯಮ ವಕ್ತಾರೆಯಾಗಿದ್ದು, ನಗರಸಭೆ ಮಾಜಿ ಸದಸ್ಯ ರೂಬಿ ಅವರ ಪತ್ನಿಯಾಗಿದ್ದಾರೆ.
ಬೆಂಗಳೂರು,ಮಂಗಳೂರಿಗೆ ಅಂಗಾಂಗ ರವಾನೆಯಾಗಲಿದೆ ಎಂದು ತಿಳಿದು ಬಂದಿದೆ.ಕಣ್ಣು, ಕಿಡ್ನಿ ಹಾಗೂ ಲಿವರ್ ಸೇರಿ ಒಟ್ಟು ಐದು ಅಂಗಗಳ ರವಾನೆಯಾಗಲಿದೆ.ಹೀಗಾಗಿ 2ನೇ ಬಾರಿ ಅಂಗಾಂಗ ರವಾನೆಗೆ ಸಾಕ್ಷಿಯಾಗಿದೆ ಚಿಕ್ಕಮಗಳೂರು ಜಿಲ್ಲಾಸ್ಪತ್ರೆ.
ಒಂಬತ್ತು ತಿಂಗಳ ಹಿಂದೆ ಯುವತಿ ರಕ್ಷಿತಾಬಾಯಿ ಅಂಗಾಂಗಗಳನ್ನ ಜಿಲ್ಲಾಸ್ಪತ್ರೆ ರವಾನೆ ಮಾಡಿತ್ತು.ಇದೀಗ ಮತ್ತೋರ್ವ ಮಹಿಳೆಯ ಅಂಗಾAಗ ರವಾನೆಗೆ ಚಿಕ್ಕಮಗಳೂರು ಸಜ್ಜಾಗಿದ್ದು, ಐತಿಹಾಸಿಕ ಕ್ಷಣಕ್ಕೆ ಸಾಕ್ಷಿಯಾಗಿದೆ.ಈ ಮೂಲಕ ಜಿಲ್ಲಾಸ್ಪತ್ರೆಗಳಲ್ಲಿ ಅಂಗಾAಗ ರವಾನೆ ಮಾಡಿದ ಮೊದಲ ಜಿಲ್ಲೆ ಕಾಫಿನಾಡು ಎಂಬ ಹೆಗ್ಗಳಿಕೆ ಪಡೆದುಕೊಂಡಿದೆ.