ನ್ಯೂಸ್ ನಾಟೌಟ್: 2011ರ ಏಕದಿನ ವಿಶ್ವಕಪ್ ಗೆದ್ದ ಇತಿಹಾಸ ಇಂದಿಗೂ ನಮ್ಮೆಲ್ಲರ ಕಣ್ಣ ಮುಂದಿದೆ. ಅಂದು ಆ ರಾತ್ರಿಯೇ ಧೋನಿ ಗೆಲುವಿನ ಖುಷಿಯಲ್ಲಿ ಹೆರ್ಕಟ್ ಮಾಡಿಸಿದ್ದರು. ಇದು ಏಕೆ ಅನ್ನುವ ಮಿಲಿಯನ್ ಡಾಲರ್ ಪ್ರಶ್ನೆ ಇಂದಿನ ತನಕ ಹಾಗೆಯೇ ಉಳಿದಿತ್ತು. ಈ ಪ್ರಶ್ನೆಗೆ ಇಂದಿಗೂ ಹಲವರಿಗೆ ಉತ್ತರ ಗೊತ್ತಿಲ್ಲ. ಅವತ್ತಿನ ರಾತ್ರಿ ನಡೆದಿದ್ದೇನು ಅನ್ನೋದರ ಬಗೆಗಿನ ಕೌತುಕದ ವಿಚಾರ ಇಲ್ಲಿದೆ ನೋಡಿ.
2011ರ ಏಕದಿನ ವಿಶ್ವಕಪ್ ಗೆಲುವು ಕೋಟ್ಯಂತರ ಭಾರತೀಯರ ಪಾಲಿಗೆ ಅವಿಸ್ಮರಣೀಯ ಕ್ಷಣವಾಗಿತ್ತು. ಟೀಂ ಇಂಡಿಯಾ ಬರೋಬ್ಬರಿ 28 ವರ್ಷಗಳ ಬಳಿಕ ವಿಶ್ವ ಕಪ್ ಕೀರಿಟಕ್ಕೆ ಮುತ್ತಿಟ್ಟಿತ್ತು. ಆ ಕ್ಷಣವನ್ನ ಮರೆಯಲು ಸಾಧ್ಯವೇ ಇಲ್ಲ. ಆ ಗೆಲುವಿನ ಸಂಭ್ರಮದಲ್ಲಿದ್ದ ವೇಳೆ ಧೋನಿ ಹೆಡ್ ಶೇವ್ ಮಾಡಿಸಿಕೊಂಡು ಎಲ್ಲರಿಗೂ ಸರ್ಪ್ರೈಸ್ ಶಾಕ್ ಕೊಟ್ಟಿದ್ದರು. ಇಂದಿಗೂ ಹಲವರಿಗೆ ಇದರ ಹಿಂದಿರುವ ವಿಚಾರವೇ ಅರ್ಥ ಆಗಿಲ್ಲ.
ಟೀಮ್ ಇಂಡಿಯಾ ವಿಶ್ವಕಪ್ ಗೆದ್ದಿದ್ದು ಏಪ್ರಿಲ್ 2 ತಡರಾತ್ರಿ. ಆಟಗಾರರು ಹೋಟೆಲ್ಗೆ ತೆರಳಿ ಅಲ್ಲಿ ಸಂಭ್ರಮಾರಣೆ ಮುಗಿಸಿದರು. ಮಲಗುವ ವೇಳೆಗೆ ಗಂಟೆ ರಾತ್ರಿ ಎರಡಾಗಿತ್ತಂತೆ. ಬೆಳಗ್ಗೆ ಎದ್ದಾಗ ಆಟಗಾರರಿಗೆಲ್ಲಾ ಧೋನಿ ಸರ್ಪ್ರೈಸ್ ಶಾಕ್ ಕೊಟ್ಟಿದ್ರು. ರಾತ್ರಿ ಮಲಗುವಾಗ ಇದ್ದ ಧೋನಿ ತಲೆ ಕೂದಲು ಬೆಳಗಾಗುವಷ್ಟರಲ್ಲಿ ಮಾಯವಾಗಿತ್ತು. ಇದನ್ನ ಕಂಡ ಅಭಿಮಾನಿಗಳೂ ಕೂಡ ಬೆರಗಾಗಿದ್ರು. ಇದ್ರ ಹಿಂದಿನ ಕಾರಣ ಧೋನಿಯ ದೇವರ ಮೇಲಿನ ಭಕ್ತಿ.
ಹೌದು, ವಿಶ್ವಕಪ್ಗೂ ಮುನ್ನ ತಾವು ತುಂಬಾ ನಂಬ್ತಿದ್ದ ರಾಂಚಿಯ ದೇವರಲ್ಲಿ ಧೋನಿ ಮುಡಿಕೊಡುವ ಹರಕೆ ಮಾಡಿಕೊಂಡಿದ್ರು. ಹೀಗಾಗಿ, ವಿಶ್ವಕಪ್ ಗೆದ್ದ ದಿನ ರಾತ್ರಿ, ಧೋನಿ ತಾವು ಹರಕೆ ಮಾಡಿಕೊಂಡಿದ್ದ ದೇವಸ್ಥಾನದ ಪೂಜಾರಿಗಳು ತಿಳಿಸಿದಂತೆ, ರಾತ್ರಿ 2.45ರಿಂದ 3ಗಂಟೆಯ ಅವಧಿಯಲ್ಲಿ ಮುಡಿ ತೆಗೆಸಿಕೊಂಡಿದ್ರು. ಇಷ್ಟೇ ಅಲ್ಲದೆ, ಆ ಕೂದಲನ್ನ ಧೋನಿ, ತಿರುಪತಿ ತಿಮ್ಮಪ್ಪನಿಗೂ ಕೂದಲು ಕಳುಹಿಸಿಕೊಟ್ಟಿದರು.