ನ್ಯೂಸ್ ನಾಟೌಟ್ :ಇಬ್ಬರು ಮಹಿಳೆಯರು ಮಾತಿಗಿಳಿದರೆ ಸಾಕು ಗಂಟೆ ಗಂಟೆಗಟ್ಟಲೇ ಮಾತನಾಡುವುದನ್ನು ನೋಡುತ್ತೇವೆ.ಅಂತೆಯೇ ಇಬ್ಬರು ಮಹಿಳೆಯರು ಜಗಳಕ್ಕಿಳಿದರೂ ಅಷ್ಟೇ ಅದನ್ನು ನಿಲ್ಲಿಸುವುದು ಕೂಡ ಕಷ್ಟ ಸಾಧ್ಯ.ಸಾಮಾನ್ಯನಾದವನಿಗೆ ಈ ಜಗಳವನ್ನು ಕೂಡ ನಿಲ್ಲಿಸುವುದು ಸವಾಲಿನ ಕೆಲಸ.ಇದೀಗ ಚಲಿಸುತ್ತಿದ್ದ ಮೆಟ್ರೊದಲ್ಲಿ ಇಬ್ಬರು ಮಹಿಳೆಯರು ಜಗಳವಾಡಿದ ವಿಡಿಯೊವೊಂದು ಭಾರಿ ವೈರಲ್ ಆಗಿದೆ.
ಮೆಟ್ರೊ ರೈಲು ಎಂದರೆ ಸಮಯಕ್ಕೆ ಸರಿಯಾಗಿ ಬರುವ ರೈಲು, ಸ್ವಚ್ಛತೆ ಒಟ್ಟಿನಲ್ಲಿ ಶಿಸ್ತಿನ ಕೆಲಸ ನೆನಪಾಗುತ್ತದೆ.ಆದರೆ ದೆಹಲಿ ಮೆಟ್ರೊ ರೈಲು (Delhi Metro) ಎಂದರೆ ನೆನಪಿಗೆ ಬರೋದು ಪ್ರೇಮಿಗಳಿಬ್ಬರ ಸರಸ ಸಲ್ಲಾಪ, ಲಿಪ್ಲಾಕ್, ಯುವಕ -ಯುವತಿಯರ ರೀಲ್ಸ್, ಯುವಕರ ಜಗಳ ಹೀಗೆ ಹಲವಾರು ಚಟುವಟಿಕೆಗಳಿಗೆ ಈ ರೈಲು ಸುದ್ದಿಯಾಗುತ್ತಿವೆ. ಇದೀಗ ಇದರಲ್ಲಿ ಮಹಿಳೆಯರು ವಾಗ್ವಾದವು ಸೇರಿಕೊಂಡಿದೆ.
ಹೌದು, ದೆಹಲಿ ಮೆಟ್ರೊದಲ್ಲಿ ಕಂಡು ಬಂದ ದೃಶ್ಯವಿದು. ಇಬ್ಬರು ಮಹಿಳೆಯರ ಮಧ್ಯೆ ಭಾರಿ ವಾಗ್ವಾದ ಉಂಟಾಗಿದ್ದು,ಕೆಲವು ನಿಮಿಷಗಳ ಕಾಲ ಜಗಳ ಮಾಡಿಕೊಂಡಿದ್ದಾರೆ. ವಿಡಿಯೋ ವೀಕ್ಷಿಸುವ ವೇಳೆ ನೀನು ಬಾಯಿ ಮುಚ್ಚು ಎಂದು ಒಬ್ಬ ಮಹಿಳೆ ಗದರಿದರೆ, ನೀನೇಕೆ ಕಿರುಚುತ್ತಿದ್ದೀಯಾ, ನೀನು ಸುಮ್ಮನಾಗು ಎಂದು ಮತ್ತೊಬ್ಬ ಮಹಿಳೆ ಜೋರು ಧ್ವನಿಯಲ್ಲಿ ಹೇಳಿದ್ದಾರೆ. ಇಬ್ಬರೂ ಹೀಗೆ ಅರಚಿಕೊಂಡಿರುವುದಕ್ಕೆ ಅಲ್ಲಿದ್ದ ಪ್ರಯಾಣಿಕರಿಗೆ ಕಿರಿ ಕಿರಿಯಾಗಿದೆ.ಬೇರೆಯವರು ಏನೆಂದುಕೊಳ್ಳುತ್ತಾರೋ ಎಂಬ ಯೋಚನೆಯನ್ನೂ ಮಾಡದೇ ಅಳುಕಿಲ್ಲದೆ ಇಬ್ಬರೂ ವಾಕ್ಸಮರ ನಡೆಸಿದ್ದಾರೆ.
ಇದೇ ವೇಳೆ ಯುವಕನೊಬ್ಬ ಮಹಿಳೆಯೊಬ್ಬರನ್ನು ಸಮಾಧಾನಪಡಿಸಲು ಮುಂದಾಗಿದ್ದಾನೆ.ಜಗಳ ನಿಲ್ಲಿಸಲು ಬಂದಿದ್ದ ಯುಕನ ವಿರುದ್ಧ ಮತ್ತೊಬ್ಬ ಮಹಿಳೆ ಕೆಂಡಾಮಂಡಲವಾಗಿದ್ದಾರೆ. ಸದ್ಯ ಈ ವಿಡಿಯೋವನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದು ಭಾರಿ ವೈರಲ್ ಆಗಿದೆ.ಮಾತ್ರವಲ್ಲ ಜನರ ಆಕ್ರೋಶಕ್ಕೆ ಕಾರಣವಾಗಿದೆ. ದೆಹಲಿ ಮೆಟ್ರೊದಲ್ಲಿ ಇಂತಹ ಚಟುವಟಿಕೆಗಳಿಗೆ ಕಡಿವಾಣ ಹಾಕಬೇಕು ಎಂದು ಜನ ಆಗ್ರಹಿಸಿದ್ದಾರೆ. ಮತ್ತೊಂದಿಷ್ಟು ಜನ ಮಹಿಳೆಯರ ಜಗಳ ನೋಡಿ ತಮಾಷೆಯಾಗಿ ಪ್ರತಿಕ್ರಿಯಿಸಿದ್ದಾರೆ.
ಒಟ್ಟಿನಲ್ಲಿ ಪ್ರಯಾಣಿಕರು ಪ್ರಯಾಣದ ಲಾಭವನ್ನು ಪಡೆದುಕೊಳ್ಳುವ ಬದಲು ಚಲಿಸುತ್ತಿರುವ ವೇಳೆ ಅದನ್ನು ದುರುಪಯೋಗ ಪಡಿಸಿಕೊಳ್ಳುತ್ತಿದ್ದಾರೆ.ರೈಲು ಇರೋದು ಸಂಚಾರಕ್ಕಾಗಿ ನೂರಾರು ಪ್ರಯಾಣಿಕರು ಸಂಚರಿಸುತ್ತಿರುವ ವೇಳೆ ಈ ರೀತಿ ಜಗಳಗಳಾದರೆ ಇತರ ಪ್ರಯಾಣಿಕರೂ ಗಾಬರಿಕೊಳ್ಳುವ ಸಂದರ್ಭ ಎದುರಾಗಬಹುದು.ಇದರಿಂದ ಸಂಸ್ಥೆಗೂ ಕೆಟ್ಟ ಹೆಸರು ಬರಬಹುದು.ಮಹಿಳೆಯರು ಮನೆಯಲ್ಲೋ , ಬೀದಿ ಬದಿಯಲ್ಲೋ ಏನಾದರೂ ಕಾರಣವೊಡ್ಡಿ ಜಗಳ ಮಾಡೋದು ಸಾಮಾನ್ಯ.ಆದರೆ ಮೆಟ್ರೋ ರೈಲಿನಲ್ಲಿಯೂ ಈ ರೀತಿಯ ಜಗಳವಾಗುತ್ತದೆ ಅನ್ನೋದನ್ನು ನಿರೀಕ್ಷಿಸಲು ಸಾಧ್ಯವಿಲ್ಲ.