ನ್ಯೂಸ್ ನಾಟೌಟ್ : ವಯಸ್ಸಾದ ವೃದ್ಧರಿಗೆ ಏನೇನೋ ಆಸೆಗಳಿರುತ್ತವೆ ಆನ್ನೋದನ್ನು ಕೇಳಿದ್ದೇವೆ.ತಾನು ಹಾಗೆ ಮಾಡಬೇಕಿತ್ತು,ಹೀಗೆ ಮಾಡಬೇಕಿತ್ತು.ಆ ಗುರಿಯನ್ನು ತಾನಿನ್ನು ತಲುಪಲೇ ಇಲ್ಲ ಎನ್ನುವ ಬಗ್ಗೆ ಹೇಳ್ಕೊಂಡಿರೋದನ್ನು ನೀವೆಲ್ಲಾ ಕೇಳಿರ ಬಹುದು. ಆದರೆ ಇಲ್ಲೊಬ್ಬ 72 ವರ್ಷದ ವೃದ್ಧನೊಬ್ಬ ಹಾದಿ ಬೀದಿಯಲ್ಲಿ ಹೋಗುವ ಜನರನ್ನೆಲ್ಲಾ ಬೆತ್ತಲೆಯಾಗಿ ನೋಡಬಹುದು ಎನ್ನುವ ಹುಚ್ಚುತನಕ್ಕೆ ಬರೋಬ್ಬರಿ 9 ಲಕ್ಷ ರೂ.ಕಳೆದು ಕೊಂಡ ಘಟನೆ ವರದಿಯಾಗಿದೆ.
ಕಾನ್ಪುರದ ಅವಿನಾಶ್ ಕುಮಾರ್ ಶುಕ್ಲಾ ನಂಬಿ ಮೋಸ ಹೋಗಿ ಹಣ ಕಳೆದು ಕೊಂಡಿರುವ ವೃದ್ಧ. ಪಶ್ಚಿಮ ಬಂಗಾಳ ಮೂಲದ ಪಾರ್ಥ ಸಿಂಘ್ರಾಯ್, ಮೋಲಾಯ ಸರ್ಕಾರ್ ಮತ್ತು ಸುದಿಪ್ತ ಸಿನ್ಹಾ ರಾಯ್ ಈ ವೃದ್ಧನ ಪರಿಚಯ ಮಾಡಿಕೊಂಡು ಯಾಮಾರಿಸಿದ್ದಾರೆ. ತಾವು ಸಿಂಗಾಪುರದ ಕಂಪನಿಯಲ್ಲಿ ಕೆಲಸ ಮಾಡುತ್ತಿರುವುದಾಗಿ ಹೇಳಿ ವೃದ್ಧನಿಗೆ ಕನಸುಗಳ ಗೋಪುರ ಕಟ್ಟಿಸಿ ನಯವಾಗಿ ವಂಚಿಸಿದ್ದಾರೆ.
ನಮ್ಮ ಬಳಿ ಎರಡು ಕೋಟಿ ರೂಪಾಯಿ ಮೌಲ್ಯದ ಮ್ಯಾಜಿಕ್ ಮಿರರ್ ಇದ್ದು ಒಂದನ್ನು ಮಾರಾಟ ಮಾರುತ್ತಿರುವುದಾಗಿ ತಿಳಿಸಿದ್ದಾರೆ. ಆ ಮ್ಯಾಜಿಕ್ ಮಿರರ್ನಲ್ಲಿ ಯಾರನ್ನೇ ನೋಡಿದರೂ ಅವರು ಬೆತ್ತಲೆಯಾಗಿ ಕಾಣುತ್ತಾರೆ. ಹಾಗೆಯೇ ಆ ಕನ್ನಡಿ ಭವಿಷ್ಯವನ್ನೂ ಹೇಳುತ್ತದೆ ಎಂದಿದ್ದಾರೆ. ಈ ಕನ್ನಡಿಯನ್ನು ಅಮೆರಿಕದ ನಾಸಾದಲ್ಲಿ ಕೆಲಸ ಮಾಡುವ ವಿಜ್ಞಾನಿಗಳು ಬಳಸುತ್ತಿದ್ದರು ಎಂದೂ ಹೇಳಿದ್ದಲ್ಲದೇ ಅದನ್ನು ಕೊಂಡುಕೊಳ್ಳುವಂತಹ ಆಸೆಯನ್ನು ಅವಿನಾಶ್ ಅವರಲ್ಲಿ ಹುಟ್ಟಿಸಿದ್ದಾರೆ.
ಇದೇ ಆಸೆಯಿಂದ ಮೊದಲಿಗೆ ಅವಿನಾಶ್ ವೃದ್ಧ 9 ಲಕ್ಷ ರೂ.ಯನ್ನು ವಂಚಕರಿಗೆ ನೀಡಿದ್ದಾರೆ. ನಂತರ ಮತ್ತೊಮ್ಮೆ ಭೇಟಿ ಮಾಡಬೇಕೆಂದು ಮೋಸಗಾರರು ಭುವನೇಶ್ವರದ ಹೋಟೆಲ್ ಒಂದಕ್ಕೆ ಬರುವುದಕ್ಕೆ ತಿಳಿಸಿದ್ದು, ವೃದ್ದ ಅಲ್ಲಿಗೂ ಹೋಗಿದ್ದಾರೆ.ಈ ಬಾರಿ ಅವಿನಾಶ್ಗೆ ಅನುಮಾನ ಬಂದಿದೆ. ಹಾಗಾಗಿ ನನಗೆ ಕನ್ನಡಿ ಬೇಡ, ನಾನು ಕೊಟ್ಟಿರುವ ಹಣವನ್ನು ವಾಪಸು ಕೊಟ್ಟುಬಿಡಿ ಎಂದು ಕೇಳಿದ್ದಾನೆ.
ಆದರೆ ಇದಕ್ಕೆ ಒಪ್ಪದ ವಂಚಕರು ಹಣ ವಾಪಾಸ್ ಕೊಡಲೇ ಇಲ್ಲ. ಅವಿನಾಶ್ ಪೊಲೀಸ್ ಠಾಣೆಯ ಮೆಟ್ಟಿಲು ಹತ್ತಿದ್ದು, ಪೊಲೀಸರಲ್ಲಿ ನಡೆದ ವಿಚಾರದಲ್ಲಿ ದೂರು ನೀಡಿದ್ದಾನೆ. ಪೊಲೀಸರು ಈ ವೇಳೆ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಮೂರು ಆರೋಪಿಗಳನ್ನೂ ಬಂಧಿಸಲಾಗಿದ್ದು,ತನಿಖೆ ಮುಂದುವರಿದೆ.
ಇತ್ತೀಚಿನ ದಿನಗಳಲ್ಲಿ ಯಾಮಾರಿಸುವವರ ಸಂಖ್ಯೆ ಹೆಚ್ಚಾಗುತ್ತಿದ್ದು,ನಾಗರಿಕರು ಈ ಬಗ್ಗೆ ಎಚ್ಚೆತ್ತುಕೊಳ್ಳುವುದು ಒಳಿತು.ಪದೇ ಪದೇ ಇಂತಹ ಪ್ರಕರಣಗಳು ಮರುಕಳಿಸುತ್ತಲೇ ಇದ್ದು ಇಡೀ ಸಮಾಜವನ್ನೇ ಬೆಚ್ಚಿ ಬೀಳಿಸುವಂತಿದೆ.ಹಳ್ಳಿ ಜನರೇ ಇವರ ಟಾರ್ಗೆಟ್ ಆಗಿದ್ದು,ಯಾರು ಇಲ್ಲದ ಸಂದರ್ಭಗಳಲ್ಲಿ ಮನೆಗೆ ತೆರಳಿ ಮಹಿಳೆಯರ ಚಿನ್ನ ವಾಷ್ ಮಾಡುವ ನೆಪದಲ್ಲಿ ಯಾಮಾರಿಸಿದ್ದೂ ಇದೆ. ಎಲ್ಲಿಯವರೆಗೆ ಮೋಸ ಹೋಗುವವರು ಇರುತ್ತಾರೋ ಅಲ್ಲಿಯವರೆಗೆ ಮೋಸ ಮಾಡುವವರು ಇದ್ದೇ ಇರುತ್ತಾರೆ.