ನ್ಯೂಸ್ ನಾಟೌಟ್ : ಹೆತ್ತ ತಾಯಿಗೆ ತನ್ನ ಮಗು ಒಂದು ನಿಮಿಷ ಕಣ್ತಪ್ಪಿದಂತಾದರೂ ತಾಯಿಯ ವೇದನೆ ಹೇಳತೀರದು.ಜಗತ್ತಿನಲ್ಲಿ ತಾಯಿ ಅನ್ನುವ ಸ್ಥಾನಕ್ಕೆ ಬೆಲೆ ಕಟ್ಟೋದಕ್ಕೆ ಅಸಾಧ್ಯ.ಅದು ಮನುಷ್ಯರೇ ಆಗಿರಲಿ ಪ್ರಾಣಿಗಳೇ ಆಗಿರಲಿ ತಾಯಿ ತನ್ನ ಮಗುವಿನ ಮೇಲೆ ತೋರಿಸುವ ಪ್ರೀತಿಗೆ ಕೊನೆಯೇ ಇಲ್ಲ.ಆದರೆ ವೈರಲ್ ಆದ ಈ ವಿಡಿಯೋ ಗಮನಿಸಿದ್ರೆ ನಿಮ್ಗೆ ಶಾಕ್ ಆಗಬಹುದು.
ಇಲ್ಲಿ ಮನೆಯಲ್ಲಿ ಸಾಕಿರುವ ಬೆಕ್ಕು ಮತ್ತು ಕೋಳಿ ವಿಡಿಯೋ ಭಾರಿ ವೈರಲ್ ಆಗುತ್ತಿದೆ. ಈ ವಿಡಿಯೋಗೆ ಸಾಮಾಜಿಕ ಮಾಧ್ಯಮದಲ್ಲಿ ಭರ್ಜರಿ ಪ್ರತಿಕ್ರಿಯೆ ಸಿಗುತ್ತಿದೆ. ಈ ವಿಡಿಯೋ ವೀಕ್ಷಿಸಿದ ಅನೇಕರು ಇದನ್ನು ಶೇರ್ ಮಾಡುತ್ತಿದ್ದಾರೆ.ಹೌದು,ಈ ವಿಡಿಯೋ ಕಂಡಾಗ ಒಮ್ಮೆ ನಗು ಬಂದರೂ ತಾಯಿ ಕೋಳಿಯ ಸಂಕಟ ಕಂಡು ಮನ ಮರುಗುತ್ತದೆ.
ತಾನು ಹೆತ್ತ ಕೋಳಿ ಮರಿಗಳು ಬೆಕ್ಕಿನ ಜತೆ ಸಂಗ ಮಾಡಿದರೆ ತಾಯಿ ಕೋಳಿಗೆ ಹೇಗನಿಸಬೇಡ.ಸಾಮಾನ್ಯವಾಗಿ ತಾಯಿ ಕೋಳಿಗಳು ತನ್ನ ಮರಿಗಳ ಹತ್ತಿರ ಯಾರೇ ಬಂದರೂ ಕ್ಷಮಿಸೋದಿಲ್ಲ. ತನ್ನ ತಂಡೆಗೆ ಬಂದ್ರೆ ಹುಷಾರ್ ಎನ್ನುತ್ತಾ ಅಲ್ಲೇ ಕುಕ್ಕಿ ಬಿಡುತ್ತವೆ.ಅದರಲ್ಲೂ ಇತರ ಪ್ರಾಣಿಗಳು ಹತ್ತಿರ ಸುಳಿದರೆ ಅದರ ಕಥೆಯೇ ಮುಗೀತು ಬಿಡಿ.ಅಷ್ಟೊಂದು ಕ್ರೂರವಾಗಿ ನಡೆದುಕೊಳ್ಳುತ್ತವೆ.ಆದರೆ ಕೋಳಿ ಮರಿಗಳು ಬೆಕ್ಕಿನ ಜತೆಗೆ ಮಲಗುತ್ತಿರುವುದನ್ನು ಕಂಡ ತಾಯಿ ಕೋಳಿ ಅಸಹಾಯಕತೆಯಿಂದ ನೋಡುತ್ತಿದೆ.
https://www.instagram.com/reel/CvuUdhoIyhm/?utm_source=ig_web_copy_link&igshid=MzRlODBiNWFlZA==
ಇಲ್ಲಿ ಮರಿಗಳಿಗೆ ತಾಯಿ ಕೋಳಿ ಬೇಡವೆನಿಸಿದೆ.ಬದಲಾಗಿ ಮರಿಗಳು ಬೆಕ್ಕಿನ ಜತೆ ಮಲಗಿಕೊಂಡು ಕಾಲ ಕಳಿತಿವೆ. ಈ ವಿಡಿಯೋದಲ್ಲಿ ತಾಯಿ ಕೋಳಿ ಬೆಕ್ಕು ಮತ್ತು ಕೋಳಿ ಮರಿಗಳನ್ನು ಕಾಣಬಹುದು. ಸಾಮಾನ್ಯವಾಗಿ ಕೋಳಿ ಮರಿಗಳು ತಾಯಿ ಕೋಳಿಯ ಕೆಳಗೆ ಸೇರಿ ಕುಳಿತು ಕೊಂಡಿರುತ್ತದೆ. ಅಲ್ಲಿ ಮರಿಗಳು ಸುರಕ್ಷಿತವಾಗಿರುತ್ತವೆ. ಆದರೆ ಇಲ್ಲಿ ಕೋಳಿ ಮರಿಗಳು ತಾಯಿ ಕೋಳಿಯನ್ನು ಬಿಟ್ಟು ಬೆಕ್ಕಿನ ಮಡಿಲು ಸೇರಿಕೊಂಡಿರೋದು ವಿಶೇಷವಾಗಿದೆ.
ಕೋಳಿ ತನ್ನ ಮರಿಗಳನ್ನು ತನ್ನತ್ತ ಕರೆಯಲು ಪ್ರಯತ್ನಿಸುತ್ತಿದ್ದರೂ ಕೋಳಿ ಮರಿಗಳು ಮಾತ್ರ ಕ್ಯಾರೆ ಎನ್ನುತ್ತಿಲ್ಲ.ಬೆಕ್ಕನ್ನು ಬಿಟ್ಟು ಕದಲುವುದಿಲ್ಲ. ಬೆಕ್ಕು ಕೂಡಾ ಇವೆಲ್ಲವೂ ತನ್ನದೇ ಮರಿಗಳು ಎನ್ನುವಂತೆ ಆ ಮರಿಗಳನ್ನು ಭದ್ರವಾಗಿ ಹಿಡಿದು ಕುಳಿತುಕೊಂಡಿದೆ. ಇದನ್ನು ನೋಡಿ ತಾಯಿ ಕೋಳಿಗೂ ಶಾಕ್ ಆಗಿದೆ.ಅರೆ! ಈ ಮರಿಗಳು ಬೆಕ್ಕಿನ ಅದ್ಯಾವ ಪ್ರೀತಿಗೆ ಮರುಳಾಗಿದೆಯೋ ಏನೋ.. ಈ ವಿಡಿಯೋಗೆ ನೆಟ್ಟಿಗರು ನಾನಾ ರೀತಿಯಲ್ಲಿ ಕಾಮೆಂಟ್ ಮಾಡುತ್ತಿದ್ದಾರೆ.
ಇಲ್ಲಿ ಕೋಳಿ ಪದೇ ಪದೇ ತನ್ನ ಮರಿಗಳತ್ತ ನೋಡುತ್ತದೆ. ಬೆಕ್ಕು ಯಾವಾಗ ಅಲ್ಲಿಂದ ಎದ್ದು ಹೋಗುತ್ತದೆಯೋ ಎಂದು ಕಾಯುತ್ತಿರುತ್ತದೆ. ಆದರೆ ಮೊಂಡುತನದ ಬೆಕ್ಕು ಈ ಮರಿಗಳು ತನ್ನದೇ ಎಂದು ಹೇಳಿಕೊಳ್ಳುವಂತೆ ಅವುಗಳೊಂದಿಗೆಯೇ ಕುಳಿತುಕೊಂಡಿರುವುದನ್ನು ಗಮನಿಸಬಹುದು. ಕೋಳಿ ಮರಿಗಳು ಕೂಡಾ ಇಲ್ಲಿ ತಮ್ಮ ನಿಜವಾದ ತಾಯಿಯನ್ನು ಗುರುತಿಸುತ್ತಿಲ್ಲ. ಪಾಪ ತಾಯಿ ಕೋಳಿ ಫುಲ್ ಶಾಕ್ ಮೋಡ್ ನಲ್ಲಿ ಬೆಕ್ಕು ಮತ್ತು ತನ್ನ ಮರಿಗಳನ್ನೇ ನೋಡುತ್ತಿದೆ. ಅದಕ್ಕು ಬಿಟ್ಟು ಹೋಗಲು ಮನಸ್ಸಿಲ್ಲ…
https://www.instagram.com/reel/CvuUdhoIyhm/?utm_source=ig_web_copy_link&igshid=MzRlODBiNWFlZA==
ಮುಗ್ಧ ಪ್ರಾಣಿ -ಪಕ್ಷಿಗಳನ್ನು ಕಂಡು ಜನರೇ ಬೆರಗಾಗಿದ್ದಾರೆ.ನಾನು ನನ್ನದು ಎಂದು ಸ್ವಾರ್ಥ ತುಂಬಿರುವ ಈ ಸಮಾಜದಲ್ಲಿ ಈ ಮುಗ್ಧ ಜೀವಿಗಳನ್ನು ನೋಡಿ ಮನುಷ್ಯ ಕಲಿಯೋದು ಬಹಳಷ್ಟಿದೆ.
https://www.instagram.com/reel/CvuUdhoIyhm/?utm_source=ig_web_copy_link&igshid=MzRlODBiNWFlZA==