ನ್ಯೂಸ್ ನಾಟೌಟ್ : ಉಜಿರೆ ಗ್ರಾಮ ಪಂಚಾಯತ್ ನ ಮುಂದಿನ ಎರಡೂವರೆ ವರ್ಷದ ಅವಧಿಗೆ ಅಧ್ಯಕ್ಷರಾಗಿ ಬಿಜೆಪಿ ಬೆಂಬಲಿತ ಉಷಾ ಅರವಿಂದ ಕಾರಂತ್ ಹಾಗೂ ಉಪಾಧ್ಯಕ್ಷರಾಗಿ ರವಿ ಕುಮಾರ್ ಬರಮೇಲು ಆಯ್ಕೆಯಾಗಿದ್ದಾರೆ.
ಇಲ್ಲಿ 34 ಸದಸ್ಯರ ಬಲ ಇದ್ದು 25 ಮಂದಿ ಬಿಜೆಪಿ ಸದಸ್ಯರನ್ನು ಹೊಂದಿದೆ. ಒಬ್ಬರು ವಿದೇಶಕ್ಕೆ ಹೋಗಿರುವುದರಿಂದ ಪ್ರಸ್ತುತ ಬಿಜೆಪಿ ಬೆಂಬಲಿತ 24 ಮಂದಿ ಮತ್ತು 9 ಮಂದಿ ಕಾಂಗ್ರೆಸ್ ಬೆಂಬಲಿತ ಸದಸ್ಯರನ್ನು ಹೊಂದಿದೆ. ಅಧ್ಯಕ್ಷ ಸ್ಥಾನ ಸಾಮಾನ್ಯ ಮಹಿಳೆಗೆ ಮೀಸಲಾಗಿದ್ದು ಬಿಜೆಪಿಯಿಂದ ಉಷಾ ಅರವಿಂದ ಕಾರಂತ್ ಮತ್ತು ಕಾಂಗ್ರೆಸ್ ನಿಂದ ನಾಗವೇಣಿ ನಾಮಪತ್ರ ಸಲ್ಲಿಸಿದ್ದರು.
ಮತದಾನ ನಡೆದಾಗ ಉಷಾ ಅರವಿಂದ ಕಾರಂತ್ 23 ಮತ ಪಡೆದು ಆಯ್ಕೆಯಾದರು.ಕಾಂಗ್ರೆಸ್ ಬೆಂಬಲಿತ ನಾಗವೇಣಿ 10 ಮತ ಪಡೆದು ಕೊಂಡರು. ಉಪಾಧ್ಯಕ್ಷ ಸ್ಥಾನ ಸಾಮಾನ್ಯ ಕ್ಷೇತ್ರಕ್ಕೆ ಮೀಸಲಾತಿಯಾಗಿದ್ದು ಬಿಜೆಪಿ ಯಿಂದ ಹಾಲಿ ಉಪಾಧ್ಯಕ್ಷ ರವಿ ಕುಮಾರ್ ಮತ್ತು ಕಾಂಗ್ರೆಸ್ ನಿಂದ ಜೆನೆಟ್ ಪಿಂಟೋ ನಾಮಪತ್ರ ಸಲ್ಲಿಸಿದ್ದರು.
ರವಿ ಕುಮಾರ್ 25 ಮತ ಪಡೆದು ಆಯ್ಕೆಯಾದರು.ಕಾಂಗ್ರೆಸ್ ಬೆಂಬಲಿತ ಜೆನೆಟ್ ಪಿಂಟೋ 8 ಮತ ಪಡೆದು ಕೊಂಡರು.ಚುನಾವಣಾಧಿಕಾರಿಯಾಗಿ ತೋಟಗಾರಿಕಾ ಇಲಾಖೆಯ ಅಧಿಕಾರಿ ಲಿಖಿ ರಾಜ್ ಪ್ರಕ್ರಿಯೆ ನಡೆಸಿದರು. ಪಿಡಿಒ ಪ್ರಕಾಶ್ ಶೆಟ್ಟಿ ಪಿ.ಹೆಚ್., ಕಾರ್ಯದರ್ಶಿ ಶ್ರವಣ್ ಕುಮಾರ್ ಸಿಬ್ಬಂದಿ ಸಹಕರಿಸಿದರು.