ನ್ಯೂಸ್ ನಾಟೌಟ್ : ಕೋಟ್ಯಂತರ ಸಂಖ್ಯೆಯ ಭಾರತೀಯರ ಚಿತ್ತ ಈಗ ಅಪರೂಪದ ಕ್ಷಣದತ್ತ ನೆಟ್ಟಿದೆ.‘ಚಂದ್ರಯಾನ–3’ ನೌಕೆಯ ಲ್ಯಾಂಡರ್ ಘಟಕವನ್ನು ಚಂದ್ರನ ದಕ್ಷಿಣ ಧ್ರುವದ ಅಂಗಳಕ್ಕೆ (ಸಾಫ್ಟ್ ಲ್ಯಾಂಡಿಂಗ್) ಇಳಿಸಲು ಕೆಲವೇ ಗಂಟೆಗಳು ಬಾಕಿ ಉಳಿದಿದೆ.ಈ ಮೂಲಕ ಭಾರತೀಯರ ಚಂದ್ರಯಾನದ ಕನಸು ನನಸಾಗಲು ಕ್ಷಣಗಣನೆ ಆರಂಭವಾಗಿದೆ.
ಇದೇ ಆಗಸ್ಟ್ 23ರಂದು ಸಂಜೆ 6:04ಕ್ಕೆ (ಭಾರತೀಯ ಕಾಲಮಾನ) ಚಂದ್ರಯಾನ 3 (Chandrayaan 3) ಚಂದ್ರನ ದಕ್ಷಿಣ ಧ್ರುವದಲ್ಲಿ ಇಳಿಯಲಿದೆ ಎಂದು ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ISRO) ಪ್ರಕಟಿಸಿದೆ. ಈ ಅಪರೂಪದ ಕ್ಷಣಕ್ಕೆ ಎಲ್ಲರೂ ಕಾದುಕುಳಿತಿದ್ದು,ಮೈ ನವೀರೇಳಿಸುವ ಸಮಯ ಇದಾಗಲಿದೆ.ಶುಭ ಹಾರೈಕೆ ಮತ್ತು ಸಕಾರಾತ್ಮಕ ಮನೋಭಾವನೆ ಹೊಂದಿರುವುದಕ್ಕೆ ಧನ್ಯವಾದಗಳು’ ಎಂದು ಸಾಮಾಜಿಕ ಮಾಧ್ಯಮ ‘ಎಕ್ಸ್’ನಲ್ಲಿ ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೊ) ತಿಳಿಸಿದೆ.
ಚಂದ್ರಯಾನ-3 ಯಶಸ್ವಿಯಾಗಲೆಂದು ಹಲವರು ಹರಕೆ ಕಟ್ಟಿಕೊಳ್ಳುತ್ತಿದ್ದಾರೆ. ದೇವರ ಮೊರೆ ಹೋಗಿ ಪೂಜೆ ಸಲ್ಲಿಸುತ್ತಿದ್ದಾರೆ.ಭಾರತೀಯ ವಿಜ್ಞಾನಿಗಳು ತಿರುಪತಿ ವೆಂಕಟರಮಣ ದೇವರ ಆಶೀರ್ವಾದ ಪಡೆದಿದ್ದರೆ , ಇತ್ತ ನಾಗರ ಪಂಚಮಿ ಪ್ರಯುಕ್ತ ಕುಕ್ಕೆ ಸುಬ್ರಹ್ಮಣ್ಯ ದೇವಾಲಯದಲ್ಲಿಯೂ ಇಸ್ರೋ ಹೆಸರಿನಲ್ಲಿ ವಿಶೇಷ ಪೂಜೆ ಮಾಡಲಾಗಿತ್ತು. ಇಂತಹ ಸಮಯದಲ್ಲಿ ಉಡುಪಿ ಮೂಲದ ಪ್ರಸಿದ್ಧ ಜ್ಯೋತಿಷಿ ಪ್ರಕಾಶ್ ಅಮ್ಮಣ್ಣಾಯ ವಿಕ್ರಂ ಲ್ಯಾಂಡ್ ಆಗುವ ಬಗ್ಗೆ ಭವಿಷ್ಯ ನುಡಿದಿದ್ದಾರೆ..!
ಜ್ಯೋತಿಷ್ಯ ಹಾಗೂ ವಿಜ್ಞಾನ ಲೆಕ್ಕಾಚಾರ ಎರಡೂ ಒಂದೇ. ಇದಕ್ಕೆ ನನ್ನ ಬಳಿ ಸರಿಯಾದ ಲೆಕ್ಕಾಚಾರವಿದ್ದು, ತುಲಾ ಲಘ್ನ ದಲ್ಲಿ ಕಳುಹಿಸಿದ ನೌಕೆ ಕುಂಭ ಲಗ್ನದಲ್ಲಿ ಲ್ಯಾಂಡ್ ಆಗಬೇಕು.ಆಗಸ್ಟ್ 23ರ ಸಂಜೆ 6:30ರ ನಂತರ ಚಂದ್ರನಲ್ಲಿ ಇಳಿದರೆ ನನ್ನ ಜ್ಯೋತಿಷ್ಯ ಹಾಗೂ ವಿಜ್ಞಾನ ಅಧ್ಯಯನ ಸಾರ್ಥಕವಾಗುತ್ತದೆ ಎಂದು ಹೇಳಿದ್ದಾರೆ.
ಭಾರತದ ಚಂದ್ರಯಾನ 3 ಕ್ಕೆ ದೈವಬಲ ಪೂರ್ಣವಾಗಿದೆ. ಭಾರತೀಯ ವಿಜ್ಞಾನಿಗಳು ತಿರುಪತಿ ವೆಂಕಟರಮಣ ದೇವರ ಆಶೀರ್ವಾದ ಬೇಡಿದ್ದಾರೆ. ದೇವರ ಆಶೀರ್ವಾದ ಪಡೆದ ಹಿನ್ನಲೆ ಹಾಗೂ ಚಂದ್ರಯಾನ 3 ಯಶಸ್ವಿಯಾಗಬೇಕೆನ್ನುವ ಪೂಜೆ ಹಿನ್ನಲೆಯಲ್ಲಿ ಎಂದೂ ನಿಧಾನಗತಿ ಪಡೆಯಲಿಲ್ಲ.ಇದೀಗ ಚಂದ್ರಯಾನ- 3 ಆಗಸ್ಟ್ 23 ರ ಸಂಜೆ ಕುಂಭ ಲಗ್ನ 6:30 ರ ನಂತರ ಚಂದ್ರನ ಮೇಲೆ ಇಳಿಯಬೇಕು ಎಂದು ಜ್ಯೋತಿಷಿ ಪ್ರಕಾಶ್ ಅಮ್ಮಣ್ಣಾಯ ಹೇಳಿದ್ದಾರೆ.