ನ್ಯೂಸ್ ನಾಟೌಟ್ : ಸೊಂಡಿಲು ಇಲ್ಲದ ಆನೆಗಳನ್ನು ನಾವು ಪ್ರಪಂಚದಲ್ಲಿಯೇ ಕಂಡಿರಲಿಕ್ಕಿಲ್ಲ.ಏಕೆಂದರೆ ಆನೆಗಳಿಗೆ ತಿನ್ನೋದಕ್ಕೆ ,ನೀರು ಕುಡಿಯೋದಕ್ಕೆ ಅವುಗಳು ಉಪಯೋಗಿಸೋದು ಸೊಂಡಿಲುಗಳನ್ನು.ಹೀಗಾಗಿ ಆನೆಗಳ ಜೀವನಕ್ಕೆ ಸೊಂಡಿಲಿನ ಪಾತ್ರ ಮನುಷ್ಯನ ಕೈಗಳಂತೆ ಬಹಳ ಮುಖ್ಯವಾದುದು.
ಆನೆ ಸೊಂಡಿಲಿನ ಸಹಾಯದಿಂದ 300 ಕೆ.ಜಿ.ಗಿಂತಲೂ ಅಧಿಕ ತೂಕವನ್ನು ಸುಲಭವಾಗಿ ಎತ್ತಬಲ್ಲದು. ಅಷ್ಟೇ ಏಕೆ? ಕಾರುಗಳು ಮತ್ತು ಇತರ ವಾಹನಗಳನ್ನು ಸುಲಭವಾಗಿ ಎತ್ತಬಹುದು. ಆದರೆ ಅದೇ ಆನೆಗೆ ಸೊಂಡಿಲು ಇಲ್ಲದಿದ್ದರೆ… ಅದು ಹೇಗೆ ಜೀವನ ನಡೆಸಬಲ್ಲುದು ಎನ್ನುವ ಪ್ರಶ್ನೆ ಕಾಡುವುದು ಸಹಜ.
ಹೌದು, ಅರಣ್ಯಾಧಿಕಾರಿಗಳು ಅತಿರಪ್ಪಿಲ್ಲಿಯ ದಟ್ಟಕಾಡಿನಲ್ಲಿ ಸೊಂಡಿಲಿಲ್ಲದ ಆನೆಯನ್ನು ಪತ್ತೆ ಮಾಡಿದ್ದಾರೆ. ಕೇರಳ ಮತ್ತು ತಮಿಳುನಾಡು ನಡುವೆ ಸಂಚರಿಸುತ್ತಿದ್ದ ಆನೆಗಳ ಹಿಂಡಿನ ಮೇಲೆ ನಿಗಾ ಇಟ್ಟಿದ್ದ ಅಧಿಕಾರಿಗಳು ಈ ಸೊಂಡಿಲು ಇಲ್ಲದ ಆನೆ ಕಂಡು ಬೆಚ್ಚಿಬಿದ್ದಿದ್ದಾರೆ. ನಂತರ ಆನೆಯ ಆರೋಗ್ಯದ ಚಲನವಲನವನ್ನು ಸೂಕ್ಷ್ಮವಾಗಿ ಗಮನಿಸಿದ್ದಾರೆ.
ಈ ವೇಳೆ ಶಂಕೆ ವ್ಯಕ್ತ ಪಡಿಸಿದ ಅಧಿಕಾರಿಗಳು ಚೂಪಾದ ಲೋಹದ ತಂತಿಗಳಿಗೆ ತಾಗಿ ಆನೆಗಳ ಸೊಂಡಿಲು ತುಂಡಾಗುವ ಸಂಭವವಿದೆ ಎಂದಿದ್ದಾರೆ. ಆದರೆ ಸೊಂಡಿಲು ಇಲ್ಲದ ಆನೆ ಪತ್ತೆಯಾದ ಮೊದಲ ಪ್ರಕರಣ ಇದಾಗಿದೆ ಎಂದು ಅರಣ್ಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಮುಖ್ಯವಾಗಿ ಆನೆಗಳಿಗೆ ತಿನ್ನಲು, ಕುಡಿಯಲು ಮತ್ತು ಬೆರೆಯಲು ಸೊಂಡಿಲು ಬೇಕೇ ಬೇಕು. ಆದರೆ ಈ ಆನೆಗೆ ಸೊಂಡಿಲು ಇಲ್ಲದಿರುವುದು ನಿಜಕ್ಕೂ ಬೇಸರದ ಸಂಗತಿ.ಆದರೆ ಅದು ತಿನ್ನುವುದಕ್ಕೆ ಏನು ಮಾಡುತ್ತದೆ ಅನ್ನುವ ಪ್ರಶ್ನೆ ಇನ್ನೂ ನಿಗೂಢವಾಗಿದೆ.
ಇದರ ಉಳಿವಿನ ಬಗ್ಗೆ ಆತಂಕ ಮೂಡಿಸಿದೆ ಎನ್ನುವ ಅಧಿಕಾರಿಗಳು. ಸದ್ಯ ಆನೆ ಮರಿ ಆರೋಗ್ಯವಾಗಿದೆ ಎಂದು ಹೇಳಿದ್ದಾರೆ.ಅದನ್ನು ಆರೈಕೆ ಶಿಬಿರಕ್ಕೆ ಸ್ಥಳಾಂತರಿಸುವ ಅಗತ್ಯವಿಲ್ಲ.ಮುಂದಿನ ಪರೀಕ್ಷೆಯ ನಂತರ ತೀರ್ಮಾನಿಸಲಾಗುವುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಏಳು ತಿಂಗಳ ಹಿಂದೆ ಆನೆಗೆ ಯಾವುದೇ ತೊಂದರೆ ಇರಲಿಲ್ಲ ಎಂದು ಅರಣ್ಯಾಧಿಕಾರಿಗಳು ತಿಳಿಸಿದ್ದಾರೆ. ಪ್ರಸ್ತುತ, ಇದು ಸುಮಾರು ನಾಲ್ಕು ವರ್ಷದ ಮರಿ ಎಂದು ಅಂದಾಜಿಸಲಾಗಿದೆ. ಇದುವರೆಗೆ ಅಧಿಕಾರಿಗಳು ನಾಲ್ಕು ಬಾರಿ ಈ ಆನೆಗಳನ್ನು ಪರೀಕ್ಷಿಸಿದ್ದಾರೆ. ಆದರೆ ಈ ಬಾರಿ ಆನೆ ಬಲಹೀನವಾಗಿದೆ ಎಂದು ಹೇಳಿದ್ದಾರೆ.ಯಾಕೆಂದರೆ ಸಾಮಾನ್ಯವಾಗಿ ತಾಯಿ ಆನೆಗಳು ತಮ್ಮ ಮರಿ ಆನೆಗಳಿಗೆ ನಾಲ್ಕರಿಂದ ಐದು ವರ್ಷಗಳವರೆಗೆ ಹಾಲು ನೀಡುತ್ತವೆ. ಅಸಾಮಾನ್ಯ ಸಂದರ್ಭಗಳಲ್ಲಿ ಹಾಲು ನೀಡುವುದನ್ನು ನಿಲ್ಲಿಸುತ್ತವೆ. ಆದರೆ ಸೊಂಡಿಲಿಲ್ಲದ ಮರಿ ಆನೆ ಆಹಾರದ ಕೊರತೆಯಿಂದ ದುರ್ಬಲವಾಗಿರಬಹುದು ಎಂದು ಅಂದಾಜಿಸಲಾಗಿದೆ.
ಇತರ ಪ್ರಾಣಿಗಳಂತೆ ಈ ಆನೆಯು ಕಾಡು ಆಹಾರ ತಿನ್ನುವುದಿಲ್ಲ. ಹುಲ್ಲು ಮಾತ್ರ ತಿನ್ನುವುದಕ್ಕೆ ಸಾಧ್ಯವಿದೆ.ಇದು ಭವಿಷ್ಯದಲ್ಲಿ ಕಷ್ಟವಾಗಲಿದೆ. ಗಂಡು ಆನೆಯಾದರೆ ಅದರ ಬದುಕು ದುಸ್ತರ. ಇದು ಆನೆ ಪ್ರಿಯರನ್ನು ಚಿಂತೆಗೀಡು ಮಾಡಿದೆ. ಸೊಂಡಿಲಿನ ಮೇಲಿನ ಭಾಗದಲ್ಲಿ ಕತ್ತರಿಸಿದ ಗುರುತು ಕಂಡುಬಂದಿದ್ದು, ಅದು ಹುಟ್ಟಿನಿಂದಲೋ ಹೀಗೆ ಇದೆಯೋ ಅಥವಾ ಅಪಘಾತದಿಂದಲೋ ಎಂದು ಅರಣ್ಯಾಧಿಕಾರಿಗಳು ಪರಿಶೀಲಿಸುತ್ತಿದ್ದಾರೆ.