ನ್ಯೂಸ್ ನಾಟೌಟ್ :ರೈಲಿನಲ್ಲಿ ಒಂದು ದಿನ ಕುಳಿತುಕೊಂಡ್ರೆ ನಾವು ಹೋಗೋ ಸ್ಥಳ ಒಮ್ಮೆ ಬಂದು ಬಿಡ್ಲಿ ಎಂದು ಯೋಚಿಸ್ತೀವಿ.ಒಂದೇ ಸ್ಥಳದಲ್ಲಿ ಕುಳಿತು ಕೊಂಡಲ್ಲೇ ಕೋರೋದು ಅಂದ್ರೆ ಮನುಷ್ಯನಾದವನಿಗೆ ಬೋರ್ ಹೊಡೆಯುತ್ತೆ.ಆದರೆ ಇಲ್ಲೊಬ್ಬಳು ಯುವತಿ ಬರೋಬ್ಬರಿ ೮ ವರ್ಷಗಳ ಕಾಲ ರೈಲಿನಲ್ಲಿಯೇ ಕಾಲ ಕಳೆದಿದ್ದಾಳೆ ಅಂದ್ರೆ ನೀವು ಆಶ್ಚರ್ಯಕ್ಕೊಳಗಾಗುತ್ತೀರಾ?
ಇತ್ತೀಚಿನ ದಿನಗಳಲ್ಲಿ ಬಾಡಿಗೆ ಮನೆಯಲ್ಲಿಯೇ ಕಾಲ ಕಳೆಯೋದು ಅಂದ್ರೆ ತುಂಬಾ ದುಸ್ತರ. ತಮಗೆ ಬರುವ ಅಲ್ಪ ಸ್ವಲ್ಪ ಆದಾಯದಲ್ಲಿ ಬಹುಪಾಲು ಭಾಗ ಮನೆ ಬಾಡಿಗೆಗಂತಲೇ ಮೀಸಲಿಡಬೇಕಾಗುತ್ತೆ. ಈ ಖರ್ಚನ್ನು ಕಡಿಮೆ ಮಾಡಲು ಈ ಯುವತಿ ಒಂದು ಉಪಾಯ ಮಾಡಿದ್ದಾಳೆ. ಅಪಾರ್ಟ್ಮೆಂಟ್ನಲ್ಲಿ ವಾಸಿಸುತ್ತಿದ್ದವಳು, ಈಗ ರೈಲಿನಲ್ಲಿ ವಾಸಿಸಲು ಶುರು ಮಾಡಿದ್ದಾಳೆ..!
ಈ ಯುವತಿ ಜರ್ಮನಿಯವಳು. ಯಾವ ದೇಶವೇ ಆಗಿರಲಿ.ಹೆಣ್ಮಕ್ಕಳು ಈ ನಿರ್ಧಾರಕ್ಕೆ ಬರೋದು ಅಂದ್ರೆ ಸಾಮಾನ್ಯ ವಿಷಯವಲ್ಲ.ಹೆಣ್ಮಕ್ಕಳು ಒಂದು ಕಡೆ ರಕ್ಷಣೆಯನ್ನೂ ನೋಡಿ ಕೊಳ್ಳ ಬೇಕಾಗುತ್ತದೆ.ಆದರೆ ಈ ಯುವತಿ ಬಾಡಿಗೆ ಮನೆಯಿಂದ ಬೇಸತ್ತು ರೈಲಿನಲ್ಲಿ ಜೀವನ ಸಾಗಿಸುತ್ತಿದ್ದು,ಇಡೀ ದಿನ ರೈಲಿನಲ್ಲಿ ಇರಲು ಆಕೆಗೆ ಒಂಚೂರು ಬೇಸರವಾಗುವುದಿಲ್ಲವಂತೆ..! ರಜೆ ಎಂದುಕೊಳ್ಳುತ್ತಾಳಂತೆ ಮನೆಗಿಂತ ಅಗ್ಗವೂ ಕೂಡ ಎನ್ನುತ್ತಾಳೆ ಈ ಯುವತಿ.
ಈಕೆಯ ಹೆಸರು ಲಿಯೋನಿ, ಈ ಹಿಂದೆ ಸಾಮಾನ್ಯರಂತೆ ಅಪಾರ್ಟ್ಮೆಂಟ್ನಲ್ಲಿ ವಾಸಿಸುತ್ತಿದ್ದರು. ಒಂದು ದಿನ ಬಾಡಿಗೆ ಮನೆಯ ಮಾಲೀಕರೊಂದಿಗೆ ಜಗಳವಾಯಿತು. ಅದಾದ ಬಳಿಕ ಈ ವಿಶಿಷ್ಟ ಜೀವನಶೈಲಿಯ ನಿರ್ಧಾರಕ್ಕೆ ಆಕೆ ಒಗ್ಗಿಕೊಂಡಳು.ಮನೆಯಲ್ಲಿ ವಾಸಿಸುವ ಮೊದಲು ರೈಲಿನಲ್ಲಿ ಉಳಿದುಕೊಳ್ಳಲು ನಿರ್ಧರಿಸಿದರು.ಆಕೆ ವಾರ್ಷಿಕವಾಗಿ 300 ಪೌಂಡ್ ಅಂದರೆ 31 ಸಾವಿರ ರೂ. ಪಾಸ್ ಪಡೆದಿದ್ದು, ಆಕೆ ಜರ್ಮನಿಯ ಯಾವುದೇ ರೈಲಿನಲ್ಲಿ ಉಚಿತವಾಗಿ ಪ್ರಯಾಣಿಸಬಹುದಾಗಿದೆ. ಸ್ನಾನ ಮಾಡುವುದು, ಓದುವುದು ಎಲ್ಲವನ್ನೂ ರೈಲಿನಲ್ಲೇ ಮಾಡುತ್ತಾಳೆ. ಆಕೆ 2015ರಿಂದ ರೈಲಿನಲ್ಲಿ ವಾಸಿಸುತ್ತಿದ್ದು,ನನಗಿಲ್ಲಿ ಖುಷಿಯಿದೆ.ಅಪಾರ್ಟ್ಮೆಂಟ್ಗೆ ಮತ್ತೆ ಹೋಗುವುದಿಲ್ಲ ಎನ್ನುತ್ತಾರೆ ಲಿಯೋನಿ.
ಹುಡುಗಿ ಪ್ರತಿಭಾನ್ವಿತೆಯಾಗಿದ್ದು, ತನ್ನ ಅಗತ್ಯ ಬಟ್ಟೆಗಳು, ಟ್ಯಾಬ್ಲೆಟ್ ಕಂಪ್ಯೂಟರ್ ಮತ್ತು ಸ್ಯಾನಿಟರಿ ಬ್ಯಾಗ್ನೊಂದಿಗೆ ಮಾತ್ರ ಪ್ರಯಾಣಿಸುತ್ತಾಳೆ.ಈಕೆಯ ಈ ಜೀವನ ಸ್ನೇಹಿತರಿಗೆ ಒಂಚೂರು ಇಷ್ಟವಾಗೋದಿಲ್ಲ.ಆದರೆ ಅನೇಕ ಜನರು ಇದನ್ನು ಆಸಕ್ತಿದಾಯಕವಾಗಿ ಕಾಣುತ್ತಾರೆ.ಅಂದಹಾಗೆ 2020 ರಲ್ಲಿ, ಹುಡುಗಿ ತನ್ನ ಅಧ್ಯಯನವನ್ನು ಪೂರ್ಣಗೊಳಿಸಿದ್ದಾಳೆ.