ನ್ಯೂಸ್ ನಾಟೌಟ್ : ಆರೋಗ್ಯವಂತ ಮಹಿಳೆಗೆ ಒಂಭತ್ತರಿಂದ ಹತ್ತು ತಿಂಗಳೊಳಗಾಗಿ ಹೆರಿಗೆಯಾಗುವುದು ಕ್ರಮ.ಒಂದೊಂದು ಸಲ ಅದಕ್ಕಿಂತಲೂ ಮುಂಚಿತವಾಗಿ ಅಂದ್ರೆ 7 ತಿಂಗಳಲ್ಲಿಯೂ ಹೆರಿಯಾಗಬಹುದು.ಆದರೆ ಇಲ್ಲೊಬ್ಬಳು ಮಹಿಳೆ ಬರೋಬ್ಬರಿ 60 ವರ್ಷಗಳ ಕಾಲ ಗರ್ಭ ಧರಿಸಿದ್ದಾಳೆ..!
ಇಂತಹ ವಿಚಿತ್ರ ಪ್ರಕರಣಕ್ಕೆ ಸಾಕ್ಷಿಯಾಗಿದ್ದು,ಚೀನಾ ದೇಶ. ಆದರೆ 10 ತಿಂಗಳೇ ಗರ್ಭ ಧರಿಸುವಾಗ ತಾಯಿ ತುಂಬಾ ಕಷ್ಟ ಪಡುತ್ತಾಳೆ.ಮಗುವನ್ನು ಹೊತ್ತು ನಡೆಯುವುದು , ಇತರ ಕೆಲಸಗಳನ್ನು ಮಾಡೋದು ತುಂಬಾನೇ ಸವಾಲಾಗಿರುತ್ತದೆ.ಇಂತಹ ಕ್ಲಿಷ್ಟಕರ ಸಮಯದಲ್ಲಿ ಆಕೆ ೬೦ ವರ್ಷ ಗರ್ಭ ಧರಿಸಿದ್ದು ಹೇಗೆ ಅನ್ನೋದು ಕುತೂಹಲ..ಇದು ನಿಜವಾಗಿ ಸಾಧ್ಯವೇ ಎಂದು ಸ್ವತಃ ವೈದ್ಯರನ್ನೇ ಆಶ್ಚರ್ಯಕ್ಕೆ ತಳ್ಳುವಂತೆ ಮಾಡಿದೆ.
ಚೀನಾದಲ್ಲಿ ಹುವಾಂಗ್ ಯಿಜುನ್ (92) ಎಂಬ ಮಹಿಳೆ 1948 ರಲ್ಲಿ 31 ವರ್ಷದವಳಿದ್ದಾಗ ಗರ್ಭಿಣಿಯಾದರು. ಇವರ ಮನೆಯಲ್ಲಿ ಸಂಭ್ರಮದ ವಾತಾವರಣವೇ ಏರ್ಪಟ್ಟಿತ್ತು. ಆದರೆ ಈ ಸಂತೋಷದ ವಿಷಯ ಕೇಳಿದ ಮಹಿಳೆಗೆ ಆಘಾತಕಾರಿ ವಿಷಯವೂ ಕಾದಿತ್ತು.
ಹಾಗಾದರೆ ಇದಕ್ಕೆ ಉತ್ತರವೇನು? ಯಾಕೆ ಈ ಥರ ಬೆಳವಣಿಗೆಯಾಯಿತು. ವೈದ್ಯರ ಪ್ರಕಾರ, ಗರ್ಭಾವಸ್ಥೆ ಸಮಯದಲ್ಲಿ ಅಂಡಾಣು ಗರ್ಭದೊಳಗೆ ಬೆಳೆಯಬೇಕು. ಸಾಮಾನ್ಯವಾಗಿ, ಗರ್ಭಾವಸ್ಥೆಯಲ್ಲಿ, ಅಂಡಾಣು ಫಾಲೋಪಿಯನ್ ಟ್ಯೂಬ್ಗಳಿಗೆ ಅಂಟಿಕೊಳ್ಳುತ್ತದೆ, ಆದರೆ ಈ ಮಹಿಳೆಗೆ ಅಂಡಾಣು ಟ್ಯೂಬ್ಗಳ ಹೊರಗೆ ಅಂಟಿಕೊಂಡಿರುತ್ತದೆ. ಪರಿಣಾಮವಾಗಿ ಈ ಗರ್ಭಾವಸ್ಥೆಯನ್ನು ‘ಕಿಬ್ಬೊಟ್ಟೆಯ ಅಪಸ್ಥಾನೀಯ ಗರ್ಭಧಾರಣೆ’ ಎಂದು ಕರೆಯಲಾಗುತ್ತದೆ ಎಂದು ಅಭಿಪ್ರಾಯ ಪಟ್ಟರು.
ಕಿಬ್ಬೊಟ್ಟೆಯ ಅಪಸ್ಥಾನೀಯ ಗರ್ಭಧಾರಣೆಯ ಸಂದರ್ಭಗಳಲ್ಲಿ, ಬೆಳವಣಿಗೆಯಾಗುತ್ತಿರುವ ಭ್ರೂಣವು ಹೊಟ್ಟೆಯೊಳಗಿನ ವಿವಿಧ ಅಂಗಗಳಿಗೆ ಅಂಟಿಕೊಳ್ಳುತ್ತದೆ. ಇದು ಯಕೃತ್ತು, ಡಯಾಫ್ರಾಮ್, ಕರುಳುಗಳು ಅಥವಾ ಗುಲ್ಮದಂತಹ ಅಂಗಗಳಿಗೆ ಅಂಟಿಕೊಂಡು ಬೆಳೆಯುತ್ತದೆ. ಇದೆ ಅಪಾಯದಲ್ಲಿ ತಾಯಿ-ಮಗು ಇದೆ ಎಂದು ವೈದ್ಯರು ತಿಳಿಸಿದ್ದಾರೆ.ಇದನ್ನು ಕೇಳಿ ತಾಯಿಗೂ ಶಾಕ್ ಆಗಿದೆ.ಆದರೆ ಮತ್ತೆ ಆಕೆ ವೈದ್ಯರ ಸಲಹೆ ಪಡೆಯುತ್ತಾಳೆ.
ಇದಕ್ಕೆ ಪ್ರತಿಕ್ರಿಯಿಸಿದ ವೈದ್ಯರು ಕಿಬ್ಬೊಟ್ಟೆಯ ಗರ್ಭಾವಸ್ಥೆಯುಲ್ಲಿ ತಾಯಿ ಮತ್ತು ಮಗುವಿಗೆ ಅಪಾಯಗಳಿವೆ. ಅಂತಹ ಸಂದರ್ಭಗಳಲ್ಲಿ ಜನಿಸಿದ ಶಿಶುಗಳು ಆರೋಗ್ಯವಾಗಿರುವುದಿಲ್ಲ, ಗರ್ಭಾಶಯದ ಹೊರಗೆ ಭ್ರೂಣವು ಬೆಳೆಯುತ್ತಿದೆ. ಕೂಡಲೇ ಗರ್ಭಪಾತ ಮಾಡಿಸಿಕೊಳ್ಳುವಂತೆ ವೈದ್ಯರು ಸಲಹೆ ನೀಡುತ್ತಾರೆ.ಇದನ್ನು ಕೇಳಿ ಸಂಭ್ರಮದಲ್ಲಿ ತೇಲಾಡಿದ್ದ ತಾಯಿಗೆ ಆಕಾಶವೇ ಕಳಚಿ ಬಿದ್ದ ಅನುಭವವಾಗುತ್ತೆ.ತುಂಬಾ ನೋವಿನಿಂದಲೇ ಮನೆ ಕಡೆ ತರಳುತ್ತಾಳೆ. ಏನೂ ತೋಚದ ಪರಿಸ್ಥಿತಿ ಆಕೆಯದ್ದಾಗಿರುತ್ತದೆ.
ಆದರೆ ಹುವಾಂಗ್ ಯಿಜುನ್ ಆಗಲೇ ಹಣಕಾಸಿನ ತೊಂದರೆಯಿಂದ ಬಳಲುತ್ತಿದ್ದರಿಂದ ನಿರ್ಧಾರ ಮಾಡೋದೇ ಕಷ್ಟವಾಗಿತ್ತು. ಪರಿಣಾಮವಾಗಿ, ಆಕೆಗೆ ಭ್ರೂಣವನ್ನು ತೆಗೆಯಲು ಅವಕಾಶವಿರಲಿಲ್ಲ. ಕೊನೆಗೆ ಅದೇನಿದ್ದರೂ ಹಾಗೆಯೇ ಹೊಟ್ಟೆಯಲ್ಲಿ ಉಳಿಯಿತು.ಹುವಾಂಗ್ನ ಹೊಟ್ಟೆಯಲ್ಲಿದ್ದ ಮಗು ಆಕೆಯ ದೇಹವು ತನ್ನಿಂದ ತಾನೇ ಹೊರಹಾಕಲು ಸಾಧ್ಯವಾಗದ ಗಾತ್ರಕ್ಕೆ ಬೆಳೆದಿತ್ತು.
ಆದರೆ ವಿಚಿತ್ರವೆಂದರೆ ಆಕೆಗೆ ಯಾವುದೇ ನೋವು ಅಥವಾ ಗರ್ಭಪಾತದಂತಹ ರಕ್ತಸ್ರಾವವಾಗಿರಲಿಲ್ಲ. ಆದ್ದರಿಂದ ಅವಳು ವರ್ಷಗಟ್ಟಲೆ ಗರ್ಭ ಧರಿಸಿದಳು. ಹೀಗೆ ಸುಮಾರು 61 ವರ್ಷಗಳು ಕಳೆದಿವೆ. ಅಂತಿಮವಾಗಿ 90 ನೇ ವಯಸ್ಸಿನಲ್ಲಿ ವೈದ್ಯರ ಬಳಿ ಬಂದಿದ್ದಾಳೆ. ಕೊನೆಗೆ ಆಕೆಯ ಹೊಟ್ಟೆಯೊಳಗಿದ್ದ ಮಗುವನ್ನು ಹೊರಗೆ ತೆಗೆಯಲಾಯಿತ್ತು.