ನ್ಯೂಸ್ ನಾಟೌಟ್ : ದೇವಿರಮ್ಮನ ದೇಗುಲಕ್ಕೆ ಡ್ರೆಸ್ಕೋಡ್ (Dresscode) ಆದೇಶ ಜಾರಿಯಾಗಿದ್ದು, ಸಾಂಪ್ರದಾಯಿಕ ಉಡುಗೆಯಲ್ಲಿ ಆಗಮಿಸಲು ಧಾರ್ಮಿಕ ದತ್ತಿ ಇಲಾಖೆ ಹಾಗೂ ದೇವಸ್ಥಾನ ಆಡಳಿತ ಮಂಡಳಿ ಸೂಚನೆ ನೀಡಿದೆ ಎನ್ನಲಾಗಿದೆ.
ಇನ್ನು ಮುಂದೆ ಚಿಕ್ಕಮಗಳೂರು (Chikkamagaluru) ತಾಲೂಕಿನ ಇತಿಹಾಸ ಪ್ರಸಿದ್ಧ ಬಿಂಡಿಗ ದೇವಿರಮ್ಮನ ದೇವಾಲಯದಲ್ಲಿ ಸ್ಕರ್ಟ್, ಮಿಡಿ, ಸ್ಲೀವ್ಲೆಸ್ ಡ್ರೆಸ್, ಪ್ಯಾಂಟ್, ಸಾಕ್ಸ್ ಹಾಕಿ ದೇವಾಲಯಕ್ಕೆ ಬರುವಂತಿಲ್ಲ. ದೇವಾಲಯದ ಆವರಣದೊಳಗೆ ಮೊಬೈಲ್ (Mobile) ಫೋನ್ಗೂ ನೀಷೇಧ ಹೇರಲಾಗಿದೆ. ದೀಪಾವಳಿ ವೇಳೆ ಲಕ್ಷಾಂತರ ಭಕ್ತರು ದೇವಾಲಯಕ್ಕೆ ಭೇಟಿ ನೀಡುತ್ತಾರೆ. ಪ್ರತಿವರ್ಷ ಲಕ್ಷಾಂತರ ಭಕ್ತರು ದೇವಿರಮ್ಮನ ಬೆಟ್ಟ ಹತ್ತುತ್ತಾರೆ ಆದರೆ, ಈ ಬಾರಿ ಕಠಿಣ ನಿಯಮಗಳನ್ನು ಜಾರಿಗೊಳಿಸಲಾಗಿದೆ.
ಮಕ್ಕಳಿಂದ ವೃದ್ಧರವರೆಗೂ ಬೆಟ್ಟ ಹತ್ತಿ ಬೆಟ್ಟದ ತಾಯಿಗೆ ಕೈಮುಗಿಯುತ್ತಾರೆ. ಯುವಕ-ಯುವತಿಯರೂ ಬರುತ್ತಾರೆ. ಅವರಲ್ಲಿ ಪ್ರೇಮಿಗಳೂ ಹೆಚ್ಚಿನ ಸಂಖ್ಯೆಯಲ್ಲಿರುತ್ತಾರೆ. ಯಾರೇ ಬಂದರೂ ಸಾಂಪ್ರದಾಯಿಕ ಉಡುಗೆಯಲ್ಲೇ ಬರಬೇಕೆಂದು ದೇವಾಲಯ ಸೂಚನೆ ನೀಡಿದೆ. ದೇವಾಯದ ಆವರಣದಲ್ಲಿ ಪ್ರೀ ವೆಡ್ಡಿಂಗ್ ಶೂಟ್ ಹಾಗೂ ರೀಲ್ಸ್ಗೆ ಅವಕಾಶವಿಲ್ಲ ಎಂದು ಸಂದೇಶ ನೀಡಿದೆ ಎನ್ನಲಾಗಿದೆ.