ನ್ಯೂಸ್ ನಾಟೌಟ್ :ಬೆಂಗಳೂರಿನಲ್ಲಿ ನೆಲೆಸಿದ್ದ ಆಂಧ್ರ ಮೂಲದ ಕುಟುಂಬ ಕುವೈತ್ನಲ್ಲಿ ದಾರುಣ ಅಂತ್ಯ ಕಂಡ ಘಟನೆ ವರದಿಯಾಗಿದೆ. ರಸ್ತೆ ಅಪಘಾತವಾಗಿದ್ದು, ನಿಯಂತ್ರಣ ಕಳೆದುಕೊಂಡ ಕಾರು ಡಿವೈಡರ್ಗೆ ಡಿಕ್ಕಿಯಾಗಿ ದುರಂತ ಸಂಭವಿಸಿದೆ.
ಗೌಸ್ಬಾಷಾ (35), ಅವರ ಪತ್ನಿ ಹಾಗೂ ಇಬ್ಬರು ಗಂಡು ಮಕ್ಕಳು ಉಸಿರು ಚೆಲ್ಲಿದ್ದಾರೆ. ಇವರು ಆಂಧ್ರ ಪ್ರದೇಶದ ಅನ್ನಮೈಯಾ ಜಿಲ್ಲೆಯ ಮದನಪಲ್ಲಿ ಮೂಲದವರು. ಸೌದಿ ಅರೇಬಿಯಾದಿಂದ ಕುವೈತ್ಗೆ ಬರುತ್ತಿದ್ದಾಗ ಈ ಘಟನೆ ನಡೆದಿದೆ ಎಂದು ಆಂಧ್ರದ ರಾಜಂಪೇಟೆಯಲ್ಲಿರುವ ಅವರ ಸಂಬಂಧಿಕರು ತಿಳಿಸಿದ್ದಾರೆ.
ರಾಜಂಪೇಟೆ ಪಟ್ಟಣದ ದೊಡ್ಡ ಮಸೀದಿಯ ಮಾಜಿ ಅಧ್ಯಕ್ಷ ದಿವಂಗತ ನೂರುದ್ದೀನ್ ಎಂಬುವರು ಗೌಸ್ ಬಾಷಾ ಅವರ ಸೋದರ ಮಾವ. ಗೌಸ್ ಬಾಷಾ ಈ ಹಿಂದೆ ಹತ್ತನೇ ತರಗತಿವರೆಗೆ ಅಲ್ಲೇ ಓದಿದ್ದರು. ಬಳಿಕ ಗೌಸಬಾಷಾ ಹುಟ್ಟೂರು ಮದನಪಲ್ಲಿಗೆ ತೆರಳಿದ್ದರು. ಅಲ್ಲಿ ಕೆಲವು ವರ್ಷಗಳವರೆಗೆ ಇದ್ದು ಮದುವೆಯಾದ ಬಳಿಕ ಕುಟುಂಬ ಸಮೇತ ಬೆಂಗಳೂರಿಗೆ ಹೋಗಿ ನೆಲೆಸಿದ್ದರು ಎಂದು ತಿಳಿದು ಬಂದಿದೆ.
ಮದುವೆಯಾದ ಬಳಿಕ ಗೌಸ್ ಬಾಷಾ ಜೀವನ ನಿರ್ವಹಣೆಗಾಗಿ ಕೆಲಸಕ್ಕೆಂದು ಬೆಂಗಳೂರಿನಿಂದ ಕುವೈತ್ಗೆ ತೆರಳಿ ಅಲ್ಲಿಯೇ ನೆಲೆಸಿದ್ದರು. ಹೀಗೆ ಕಾರಿನಲ್ಲಿ ಹೋಗುತ್ತಿದ್ದಾಗ ಅಪಘಾತ ಸಂಭವಿಸಿದೆ. ಅಪಘಾತದಲ್ಲಿ ಗೌಸ್ ಬಾಷಾ ಅವರ ಪತ್ನಿ ಹಾಗೂ ಇಬ್ಬರು ಪುತ್ರರು ಇನ್ನಿಲ್ಲವಾಗಿದ್ದಾರೆ.
ಗೌಸ್ ಬಾಷಾ ಸಾವಿನ ಬಗ್ಗೆ ಹಲವು ಅನುಮಾನಗಳಿವೆ ಎಂದು ಅವರ ಹತ್ತಿರದ ಸಂಬಂಧಿಕರು ತಿಳಿಸಿದ್ದಾರೆ. ಆದರೆ, ರಸ್ತೆ ಅಪಘಾತ ನಡೆದಿರುವುದು ನಿಜ ಎಂದಿದ್ದಾರೆ. ಕುವೈತ್ನಲ್ಲಿ ನಡೆದ ಈ ಅಪಘಾತದ ಬಗ್ಗೆ ಅಧಿಕಾರಿಗಳು ಕ್ರಮ ಕೈಗೊಂಡು ವಿಚಾರಣೆ ನಡೆಸಬೇಕೆಂದು ಕೋರಿದ್ದಾರೆ.