ನ್ಯೂಸ್ ನಾಟೌಟ್ : ಇತ್ತೀಚಿನ ದಿನಗಳಲ್ಲಿ ಹದಿಹರೆಯದವರಲ್ಲೇ ಕಾಯಿಲೆಗಳು ಕಾಣಿಸಿಕೊಂಡು ಅವರ ಜೀವಕ್ಕೇ ಕಂಟಕವಾಗುತ್ತಿವೆ. ಕೆಲವು ದಿನಗಳಿಂದ ಇಂತಹ ಪ್ರಕರಣಗಳು ವರದಿಯಾಗುತ್ತಿದ್ದು, ಭಾರಿ ಆಘಾತಕಾರಿ ವಿಷಯವಾಗಿದೆ.ಆರೋಗ್ಯವಂತರಾಗಿ ಅತ್ತಿಂದಿತ್ತ ಓಡಾಡುತ್ತಿರುವ ಯುವಕ ಯುವತಿಯರಿಗೆ ದಿಢೀರ್ ಆಗಿ ಆರೋಗ್ಯದಲ್ಲಿ ಏರು ಪೇರು ಉಂಟಾಗುತ್ತಿದ್ದು, ಕೆಲವರಂತು ಪ್ರಾಣವನ್ನೇ ಕಳೆದುಕೊಳ್ಳುತ್ತಿದ್ದಾರೆ.ಇದೀಗ ಸುಳ್ಯದಲ್ಲಿ ಹೊಟ್ಟೆನೋವೆಂದು ಆಸ್ಪತ್ರೆಗೆ ದಾಖಲಾದ ಬಾಲಕನೋರ್ವ ಚಿಕಿತ್ಸೆ ಫಲಕಾರಿಯಾಗದೇ ದಾರುಣವಾಗಿ ಮೃತಪಟ್ಟಿರುವ ಘಟನೆಯೊಂದು ವರದಿಯಾಗಿದೆ.
ಸುಳ್ಯ ಶಾಂತಿನಗರ ನಿವಾಸಿ ಸಂಜೀವ ಎಂಬುವರ ಪುತ್ರ ಶ್ರೀಜಿತ್ (17 ವರ್ಷ) ಮೃತ ಬಾಲಕನೆಂದು ತಿಳಿದು ಬಂದಿದೆ.ಈತನಿಗೆ ಕಳೆದ ಎರಡು ದಿನಗಳ ಹಿಂದೆಯಷ್ಟೇ ಹೊಟ್ಟೆ ನೋವು ಕಾಣಿಸಿಕೊಂಡಿದ್ದು,ಅದು ಉಲ್ಬಣಗೊಂಡು ಸುಳ್ಯದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಯಿತು.
ಆದರೆ ಬಾಲಕನಿಗೆ ಕೂಡಲೇ ಶಸ್ತ್ರಚಿಕಿತ್ಸೆ ನಡೆಸಬೇಕೆಂದು ವೈದ್ಯರು ಹೇಳಿದ್ದು, ಆತನನ್ನು ಪುತ್ತೂರಿನ ಖಾಸಗಿ ಆಸ್ಪತ್ರೆಗೆ ಮನೆಯವರು ಕೊಂಡೊಯ್ದರು ಎಂದು ತಿಳಿದು ಬಂದಿದೆ.ಬಾಲಕನ ಸ್ಥಿತಿ ಮತ್ತಷ್ಟು ಗಂಭೀರವಾಗುತ್ತಿದ್ದಂತೆ ಇಂದು ಹೆಚ್ಚಿನ ಚಿಕಿತ್ಸೆಗಾಗಿ ಮಂಗಳೂರಿನ ಕೆ.ಎಮ್.ಸಿ ಆಸ್ಪತ್ರೆಗೆ ದಾಖಲಿಸಲಾಯಿತು.ಆದರೆ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿರುವುದಾಗಿ ತಿಳಿದುಬಂದಿದೆ.
ಶ್ರೀಜಿತ್ ಎಂಬ ಬಾಲಕನನ್ನು ಕಳೆದು ಕೊಂಡು ಕುಟುಂಸ್ಥರ ರೋಧನ ಮುಗಿಲು ಮುಟ್ಟಿದೆ. ಮೃತ ಬಾಲಕ ತಂದೆ ಸಂಜೀವ, ತಾಯಿ ಪ್ರೇಮ, ಸಹೋದರ ಶ್ರೀನಿತ್ ಸೇರಿದಂತೆ ಕುಟುಂಬಸ್ಥರು, ನೆಂಟರಿಸ್ಟರು ಹಾಗೂ ಅಪಾರ ಬಂಧು ಮಿತ್ರರನ್ನು ಅಗಲಿದ್ದಾರೆ.ಪುತ್ತೂರು ಖಾಸಗಿ ಆಸ್ಪತ್ರೆ ವೈದ್ಯರೇ ನಮ್ಮ ಮಗನ ಸಾವಿಗೆ ಕಾರಣವೆಂದು ಪೋಷಕರು ಆರೋಪ ಮಾಡಿದ್ದು,ಪ್ರೀತಿಯ ಮಗನನ್ನು ಕಳೆದು ಕೊಂಡು ಪೋಷಕರು ಕಣ್ಣೀರಿಡುತ್ತಿದ್ದಾರೆ.