ನ್ಯೂಸ್ ನಾಟೌಟ್: ಧ್ವನಿ ಬೆಳಕು ಮತ್ತು ಶಾಮಿಯಾನ ಮಾಲಕರ ಸಂಘದ ವತಿಯಿಂದ 8ನೇ ವಾರ್ಷಿಕೋತ್ಸವದ ಅಂಗವಾಗಿ ನವೆಂಬರ್ 17 ಮತ್ತು 18ರಂದು ನಡೆಯುವ ರಾಷ್ಟ್ರೀಯ ಮಟ್ಟದ 8 ಆಹ್ವಾನಿತಾ ತಂಡಗಳ ಲೀಗ್ ಮಾದರಿ ಹೊನಲು ಬೆಳಕಿನ ಮ್ಯಾಟ್ ಕಬಡ್ಡಿ ಪಂದ್ಯಾಟ ನಡೆಯಲಿದೆ.
ಈ ಪ್ರಯುಕ್ತ ಸುಳ್ಯದ ಪ್ರಭು ಗ್ರೌಂಡ್ನ ಎಸ್.ವಿ.ಎಂ ಸಂಕಿರ್ಣದಲ್ಲಿ ಇದರ ಕಚೇರಿಯನ್ನು ಎಸ್.ವಿ.ಎಂ ಕಟ್ಟಡ ಮಾಲಕ ಶಿವರಾಮ್ ಉದ್ಘಾಟಿಸಿದರು.
ಈ ಸಂದರ್ಭ ಸುಳ್ಯ ಧ್ವನಿ ಮತ್ತು ಶಾಮಿಯಾನ ಮಾಲಕರ ಸಂಘದ ಅಧ್ಯಕ್ಷ ಶಿವಪ್ರಕಾಶ್, ಸಂಘದ ಕಾರ್ಯದರ್ಶಿ ಸತೀಶ್ ಕಲ್ಲುಗುಂಡಿ , ಗೌರವಾಧ್ಯಕ್ಷ ಎಸ್.ಕೆ. ಲೋಕನಾಥ್, ಕಬ್ಬಡಿ ಪಂದ್ಯಾಟದ ಸಂಚಾಲಕ ಸಂಶುದ್ದೀನ್, ಕಬಡ್ಡಿ ಪಂದ್ಯಾಟದ ಕಾರ್ಯದರ್ಶಿ ಶರತ್ ಎಣ್ಮುರ್, ಗುರುಪ್ರಸಾದ್ ಶಾಮಿಯಾನ ಮಾಲಕ ಜಿ.ಜಿ. ನಾಯಕ್ , ಸಹನಾ ಶಾಮಿಯಾನ ಮಾಲಕ ಜಿ.ಎ. ಮೊಹಮ್ಮದ್ ಹಾಗೂ ಸಂಘದ ಪದಾಧಿಕಾರಿಗಳು, ಸದಸ್ಯರು ಉಪಸ್ಥಿತರಿದ್ದರು. ಕಾರ್ಯಕ್ರಮದಲ್ಲಿ ರಾಷ್ಟ್ರೀಯ ಮಟ್ಟದ ಕಬಡ್ಡಿ ಪಂದ್ಯಾಟ ಆಯೋಜಿಸುವ ಮತ್ತು ಜವಾಬ್ದಾರಿಯನ್ನು ತಾಲೂಕಿನ ವಿವಿಧ ಶಾಮಿಯಾನ ಮಾಲಕರಿಗೆ ತಿಳಿಸಲಾಯಿತು.
ಸುಳ್ಯ ಧ್ವನಿ ಬೆಳಕು ಮತ್ತು ಶಾಮಿಯಾನ ಮಾಲಕರ ಸಂಘದ 8ನೇ ವಾರ್ಷಿಕೋತ್ಸವದ ಅಂಗವಾಗಿ ಅಮೆಚೂರು ಕಬಡ್ಡಿ ಅಸೋಸಿ ಯೇಷನ್ ಇದರ ಸಹಯೋಗದೊಂದಿಗೆ ದಕ್ಷಿಣ ವಲಯ ಅಂತಾರಾಜ್ಯ ಮಟ್ಟದ ಪ್ರೋ ಕಬಡ್ಡಿ ಆಟಗಾರರನ್ನೊಳಗೊಂಡ ಎಂಟು ಆಹ್ವಾನಿತ ತಂಡಗಳ ಹಾಗೂ ನಾಲ್ಕು ಮಹಿಳಾ ತಂಡದ ಎರಡು ದಿನಗಳ ಪ್ರೊ ಮಾದರಿಯ ಮ್ಯಾಟ್ ಕಬಡ್ಡಿ ಪಂದ್ಯಾಟ ನವೆಂಬರ್ 17 ಮತ್ತು 18 ರಂದು ನಡೆಯುವ ಸುಳ್ಯದಲ್ಲಿ ಅದ್ಧೂರಿಯಾಗಿ ನಡೆಯಲಿದೆ.
ಪಂದ್ಯಾಟ ವೀಕ್ಷಿಸಲು ಸುಸಜ್ಜಿತ ಗ್ಯಾಲರಿ ವ್ಯವಸ್ಥೆ , ಸಿನಿಮಾ ನಟ ನಟಿಯರ ಆಗಮನ , ಅತ್ಯಾಧುನಿಕ ತಂತ್ರಜ್ಞಾನದೊಂದಿಗೆ ಹೊಸ ಮಾದರಿಯ ಬೆಳಕಿನ ವ್ಯವಸ್ಥೆ, ಡಿಜಿಟಲ್ ತಂತ್ರಜ್ಞಾನದ ಸೌಂಡ್ ಸಿಸ್ಟಮ್.ನೊಂದಿಗೆ ಸುಳ್ಯದ ಇತಿಹಾಸದಲ್ಲೇ ಮೊದಲ ಬಾರಿಗೆ ಕ್ರೀಡಾ ಹಬ್ಬ ನಡೆಯಲಿದೆ.