ನ್ಯೂಸ್ ನಾಟೌಟ್ : ಸೌಜನ್ಯ ಪ್ರಕರಣಕ್ಕೆ ಸಂಬಂಧಪಟ್ಟಂತೆ ಪ್ರತಿಭಟನೆಯ ಕಾವು ದಿನದಿಂದ ದಿನಕ್ಕೆ ಹೆಚ್ಚಾಗುತ್ತಲೇ ಇದೆ.ಪ್ರತಿಭಟನೆಯಲ್ಲಿ ಕೇಳಿ ಬರುತ್ತಿರುವ ಒಂದೇ ಕೂಗು ಏನೆಂದರೆ ನಿಜವಾದ ಆರೋಪಿಗಳು ಯಾರಿದ್ದಾರೋ ಅವರನ್ನು ಕೂಡಲೇ ಬಂಧಿಸಿ,ಇಲ್ಲವಾದಲ್ಲಿ ಮುಂದಿನ ದಿನಗಳಲ್ಲಿ ಉಗ್ರಹೋರಾಟವನ್ನು ಮಾಡಲಿದ್ದೇವೆ ಎಂಬುದು.
ಇದರ ಮಧ್ಯೆ ಸಹೋದರಿ ಸೌಜನ್ಯಳಿಗಾಗಿ ಭಕ್ತರು ದೇವರ ಮೊರೆ ಹೋಗುತ್ತಿದ್ದಾರೆ.ಮೊನ್ನೆಯಷ್ಟೆ ಕೊರಗಜ್ಜನಿಗೆ ಭಕ್ತರು ಮೊರೆ ಇಟ್ಟಿದ್ದರು.ಇದೀಗ ಶಬರಿಮಲೆಗೆ ತೆರಳಿದ ಮಾಲಾಧಾರಿಗಳು ಅಯ್ಯಪ್ಪ ದೇವರ ಬಳಿ ಪ್ರಾರ್ಥಿಸಿದ್ದಾರೆ.ನಿಜವಾದ ಆರೋಪಿಗಳು ಎಲ್ಲಿ ತಲೆ ಮರೆಸಿಕೊಂಡಿದ್ದರೂ ಕೂಡ ನಿಮ್ಮ ಅನುಗ್ರಹದಲ್ಲಿ ಅವರ ಬಂಧನವಾಗಬೇಕು ಎಂದಿದ್ದಾರೆ.
ಅಜ್ಜಾವರ ಗ್ರಾಮದ ಶಿವಪ್ರಕಾಶ್ ಗುರುಸ್ವಾಮಿಗಳ ನೇತೃತ್ವದಲ್ಲಿ ಶಬರಿಮಲೆಗೆ ತೆರಳಿದ ಭಕ್ತರು ಇಂದು ಮುಂಜಾನೆ ಅಯ್ಯಪ್ಪ ಸ್ವಾಮಿಯ ಸನ್ನಿಧಾನದಲ್ಲಿ ಸೌಜನ್ಯ ಪ್ರಕರಣದ ಬಗ್ಗೆ ಪಾರ್ಥಿಸಿದರು. ಈ ಪ್ರಕರಣದಲ್ಲಿ ಧರ್ಮಸ್ಥಳ ಕ್ಷೇತ್ರದ ಬಗ್ಗೆಯು ಕೆಟ್ಟ ಹೆಸರು ಕೇಳಿ ಬರುತ್ತಿದೆ.ಇದಾಗಬಾರದು. ಸ್ವಾಮಿ ಅಯ್ಯಪ್ಪನ ಕೃಪಕಟಾಕ್ಷದಿಂದ ಮುಂದಿನ ಸಂಕ್ರಮಣದ ಒಳಗಾಗಿ ಅಯ್ಯಪ್ಪ ಸ್ವಾಮಿಯು ಆ ದುಷ್ಟರಿಗೆ ತಕ್ಕ ಶಿಕ್ಷೆ ನೀಡಬೇಕು ಎಂದು ಅಯ್ಯಪ್ಪ ಸ್ವಾಮಿಯ ಸನ್ನಿಧಾನದಲ್ಲಿ ಪ್ರಾರ್ಥನೆ ಮಾಡಲಾಯಿತು. ಈ ಸಂದರ್ಭದಲ್ಲಿ ಸಮಾಜ ಸೇವಕ ಡಾ. ರವಿ ಕಕ್ಕೆಪದವು ಮತ್ತಿತರರು ಜತೆಗಿದ್ದರು.