ನ್ಯೂಸ್ ನಾಟೌಟ್: CA ಪರೀಕ್ಷೆಯಲ್ಲಿ ಮಗ ಫೇಲ್ ಆಗಿದ್ದಕ್ಕೆ ನೊಂದು ತಾಯಿಯೊಬ್ಬರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಮಗನ ಬಗ್ಗೆ ಈಕೆಗಿದ್ದ ಅತಿಯಾದ ಕಾಳಜಿ ದುರಂತ ಸಾವಿಗೆ ಕಾರಣವಾಗಿದೆ.
ಹೈದರಾಬಾದ್ನ ಗಾಜುಲರಾಮರಾಮ್ ಎಂಬಲ್ಲಿ ದುರ್ಘಟನೆ ನಡೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಮೃತರನ್ನು ಪುಷ್ಪ ಜ್ಯೋತಿ (41) ಎಂದು ಗುರುತಿಸಲಾಗಿದೆ. ಮನೆಯಲ್ಲಿ ಯಾರೂ ಇಲ್ಲದ ವೇಳೆ ಗಮನಿಸಿದ ಸಂತ್ರಸ್ತೆ, ಫ್ಯಾನಿಗೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಪುಷ್ಪ ಅವರ ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ರವಾನಿಸಲಾಗಿದೆ. ಮಗನ ಭವಿಷ್ಯವನ್ನು ಅತಿಯಾಗಿ ಚಿಂತಿಸಿದ್ದ ಆಕೆ, ದುಡುಕಿ ನಿರ್ಧಾರ ತೆಗೆದುಕೊಂಡಿದ್ದಾರೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
ಸಂತ್ರಸ್ತೆಯ ಪತಿ ಖಾಸಗಿ ಸಂಸ್ಥೆಯೊಂದರಲ್ಲಿ ಕೆಲಸ ಮಾಡುತ್ತಿದ್ದು, ಇಬ್ಬರು ಗಂಡು ಮಕ್ಕಳಲ್ಲಿ ಒಬ್ಬ ಇತ್ತೀಚಿಗೆ ಸಿಎ(CA) ಪರೀಕ್ಷೆಯನ್ನು ಬರೆದಿದ್ದರು.