ನ್ಯೂಸ್ ನಾಟೌಟ್: ಡೈರೆಕ್ಟ್ ಬೆನಿಫಿಟ್ ಟ್ರಾನ್ಸ್ಫರ್ ಎನ್ನಲಾಗುವ ವ್ಯವಸ್ಥೆ ಕೆಲವು ಯೋಜನೆಗಳಲ್ಲಿದೆ. ಆದರೆ ಇಲ್ಲೊಂದು ಕಡೆ ಮದುವೆಯೊಂದರಲ್ಲಿ ವಿಚಿತ್ರ ಡಿಜಿಟಲ್ ಕ್ರಾಂತಿ ನಡೆದಿದೆ.
ಡಿಜಿಟಲ್ ತಂತ್ರಜ್ಞಾನವನ್ನು ಜನರು ಹಲವಾರು ರೀತಿಯಲ್ಲಿ ಬಳಸುತ್ತಿದ್ದು, ಹಣದ ವಹಿವಾಟಿನಲ್ಲೂ ಇದನ್ನೂ ಪೂರ್ಣಪ್ರಮಾಣದಲ್ಲಿ ಹಲವರು ಬಳಸಿಕೊಳ್ಳುತ್ತಿದ್ದಾರೆ. ಆ ಮೂಲಕ ನಗದುರಹಿತ ವ್ಯವಹಾರ ಮಾಡುತ್ತಿದ್ದಾರೆ. ಮನೆಯಿಂದ ಹೊರಡುವಾಗ ಮರೆತು ಪರ್ಸ್ ಬಿಟ್ಟು ಹೋದರೂ ಚಿಂತೆ ಇಲ್ಲ ಎಂಬ ನಿರಾಳತೆಯಲ್ಲಿ ಈಗಿನ ಜನರಿದ್ದಾರೆ.
ಇನ್ನು ಕೆಲವು ಕಡೆ ದೇವಸ್ಥಾನದಲ್ಲಿ ಆರತಿ ತಟ್ಟೆಗೆ ಕಾಣಿಕೆ ಹಾಕಲಿಕ್ಕೂ, ಮತ್ತೆ ಕೆಲವು ಕಡೆ ಭಿಕ್ಷೆ ಹಣಕ್ಕೂ ಯುಪಿಐ ಪೇಮೆಂಟ್, ಕ್ಯೂಆರ್ ಕೋಡ್ ಮೂಲಕ ಹಣ ಪಾವತಿ ನಡೆದ ಅನೇಕ ನಿದರ್ಶನಗಳಿಗೆ.
ರಕ್ಷಾ ಬಂಧನದ ಹಿನ್ನೆಲೆಯಲ್ಲಿ ಇಲ್ಲೊಬ್ಬಳು ಯುವತಿ ಡಿಜಿಟಲ್ ಮೆಹಂದಿ ಹಾಕಿಕೊಂಡಿದ್ದಾಳೆ. ಈಕೆಯಿಂದ ರಾಖಿ ಕಟ್ಟಿಸಿಕೊಂಡವರು ಉಡುಗೊರೆಯಾಗಿ ನಗದನ್ನೇ ಕೊಡಬೇಕಾಗಿಲ್ಲ. ಬದಲಿಗೆ ಈಕೆಯ ಕೈಯನ್ನು ಸ್ಕ್ಯಾನ್ ಮಾಡಿದರೂ ಸಾಕು, ಹಣ ಸಂದಾಯ ಮಾಡಿ ಬಿಡಬಹುದು. ಅಂದರೆ, ಖಾತೆಯ ಕ್ಯೂಆರ್ ಕೋಡ್ ಈಕೆಯ ಕೈ ಮೇಲಿನ ಮೆಹಂದಿಯಲ್ಲಿ ಮೂಡಿ ಬರುವಂತೆ ಮಾಡಲಾಗಿದೆ. ಕೈ ಮೇಲಿನ ಆ ಮೆಹಂದಿ ಮೇಲೆ ಮೊಬೈಲ್ಫೋನ್ನಿಂದ ಸ್ಕ್ಯಾನ್ ಮಾಡಿದರೆ ಖಾತೆಯ ಪೇಮೆಂಟ್ ಗೇಟ್ವೇ ತೆರೆದುಕೊಳ್ಳುತ್ತದೆ.
ಈ ಕುರಿತ ವಿಡಿಯೋ ತುಣುಕನ್ನು ಎಕ್ಸ್ ಬಳಕೆದಾರರೊಬ್ಬರು ಹಂಚಿಕೊಂಡಿದ್ದು, ಭರ್ಜರಿ ಪ್ರತಿಕ್ರಿಯೆ ಪಡೆದುಕೊಳ್ಳುತ್ತಿರುವ ಮೂಲಕ ವೈರಲ್ ಆಗುತ್ತಿದೆ.