ನ್ಯೂಸ್ ನಾಟೌಟ್: ಕೋ ಆಪರೇಟಿವ್ ಸೊಸೈಟಿಯಲ್ಲಿ ನಕಲಿ ದಾಖಲಿ ದಾಖಲೆಗಳನ್ನು ನೀಡಿ ಕಾರು ಖರೀದಿಸಿ ಕಳೆದ ಕೆಲವು ವರ್ಷಗಳಿಂದ ತಲೆಮರೆಸಿಕೊಂಡು ತಿರುಗಾಡುತ್ತಿದ್ದ ವ್ಯಕ್ತಿಯನ್ನು ಬಜಪೆ ಪೊಲೀಸರು ಬಂಧಿಸಿದ್ದಾರೆ.
ಬಂಧಿತನನ್ನು ಪುತ್ತೂರು ಗ್ರಾಮದ ಆರ್ಯಾಪಿನ ಅಬ್ದುಲ್ ಅಜೀಜ್ ಸಂಪ್ಯ ( 56 ವರ್ಷ) ಎಂದು ಗುರುತಿಸಲಾಗಿದೆ.
2020 ನೇ ಸಾಲಿನಲ್ಲಿ ಮಂಗಳೂರು ಕ್ಯಾತೋಲಿಕ್ ಕೋ ಆಪರೇಟಿವ್ ಲಿಮಿಟೆಡ್ ಬ್ಯಾಂಕ್ನ ಬಜಪೆ ಶಾಖೆಯಲ್ಲಿ Ms onfinio ventures .pvt ltd ಎಂಬ ಹೆಸರಿನಲ್ಲಿ sunn nissim cars ಇದರ ಅಧಿಕೃತ ಮಾರಾಟಗಾರರು ಎಂಬುದಾಗಿ ಅಜೀಜ್ ಸಂಪ್ಯ ನಕಲಿ ದಾಖಲೆಗಳನ್ನು ಸೃಷ್ಟಿಸಿಕೊಂಡಿದ್ದ. ಕೋ ಆಪರೇಟಿವ್ ಬ್ಯಾಂಕ್ನಿಂದ ಭರ್ಜರಿ ರೂ. 9 ಲಕ್ಷ ಹಣ ಪಡೆದುಕೊಂಡಿದ್ದ.
ಈತ ಎಲ್ಲ ದಾಖಲೆಗಳನ್ನು ಅಸಲಿ ಎನ್ನುವಂತೆ ಬಿಂಬಿಸಿ ವಂಚಿಸಿದ್ದ. ಹಣವನ್ನು ವಾಪಸ್ ಮಾಡದೆ ತಲೆಮರೆಸಿಕೊಂಡಿದ್ದ. ಈತನ ವಿರುದ್ಧ ಪೊಲೀಸ್ ದೂರು ದಾಖಲಾಗಿತ್ತು.
ಈತನಿಗಾಗಿ ಪೊಲೀಸರು ಎಲ್ಲಡೆ ಹುಡುಕಾಟ ನಡೆಸಿದ್ದರು. ಆದರೆ ಈತ ಮಾತ್ರ ಕಳೆದ ಎರಡು ವರ್ಷಗಳಿಂದ ದಸ್ತಗಿರಿಗೆ ಸಿಗದೆ ವಿವಿಧ ಸ್ಥಳಗಳನ್ನು ಬದಲಿಸುತ್ತಾ ತಲೆ ಮರೆಸಿಕೊಂಡಿದ್ದ.
ಈತನ ಹುಡುಕಾಟಕ್ಕೆ ಬಜಪೆ ಪೊಲೀಸ್ ಠಾಣೆಯಿಂದ ವಿಶೇಷ ತಂಡವನ್ನು ರಚಿಸಲಾಗಿತ್ತು. ಈ ತಂಡವು ಆತನನ್ನು ಹಿಡಿಯುವಲ್ಲಿ ಸಫಲವಾಗಿದೆ. ಆರೋಪಿಯ ಮೇಲೆ ಬಂಟ್ವಾಳ ನಗರ ಪೊಲೀಸ್ ಠಾಣೆಯಲ್ಲಿ ಎರಡು ಪ್ರಕರಣ, ಕಂಕನಾಡಿ ನಗರ ನಗರ ಮಂಗಳೂರು ಪೂರ್ವ , ಪುತ್ತೂರು ನಗರ ಠಾಣೆಗಳಲ್ಲಿ ತಲಾ ಒಂದೊಂದು ಪ್ರಕರಣವು ದಾಖಲುಗೊಂಡಿದೆ.
ಮಂಗಳೂರು ನಗರ ಪೊಲೀಸ್ ಆಯುಕ್ತರಾದ ಕುಲದೀಪ್ ಕುಮಾರ್ ಜೈನ್ ಮಾರ್ಗದರ್ಶನದಂತೆ ಡಿಸಿಪಿ ಅಂಶು ಕುಮಾರ್, ಡಿಸಿಪಿ ದಿನೇಶ್ ಕುಮಾರ್, ಮಂಗಳೂರು ಉತ್ತರ ಉಪ ವಿಭಾಗದ ಎಸಿಪಿ ಮನೋಜ್ ಕುಮಾರ್ ನಿರ್ದೇಶನದಂತೆ ಕಾರ್ಯಾಚರಣೆಯಲ್ಲಿ ಬಜಪೆ ಠಾಣೆ ಪಿಐ ಪ್ರಕಾಶ್, ಪಿಎಸ್ಐ ಗರು ಕಾಂತಿ ನೇತೃತ್ವದಲ್ಲಿ ಕಾರ್ಯಾಚರಣೆ ನಡೆಸಲಾಗಿ ಆರೋಪಿಯನ್ನು ಬಂಧಿಸಲಾಗಿದೆ.