ನ್ಯೂಸ್ ನಾಟೌಟ್: ಮಾಲ್ ನಲ್ಲಿ ಬುರ್ಖಾ ಬದಲಿಸುವ ವಿಡಿಯೋ ಮಾಡಿ ಸಾಮಾಜಿಕ ಜಾಲತಾಣಗಳಲ್ಲಿ ವಿಡಿಯೋ ಹರಿಬಿಟ್ಟ ಹಿನ್ನೆಲೆ ವಿಡಿಯೋ ಜೊತೆಗೆ ಮುಸ್ಲಿಂ ಯುವತಿಯರ ಪೋಷಕರಿಗೆ ಬೆದರಿಕೆ ಹಾಕಿದ ಘಟನೆ ಇಂದು(ಆ.12) ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರಿನಲ್ಲಿ ವರದಿಯಾಗಿದೆ.
ಸಿನಿಮಾ ಮಾಲ್ ಒಳಗೆ ಮುಸ್ಲಿಂ ಯುವತಿಯರು ಬುರ್ಖಾ ತಗೆದು ಮಾಲ್ ನಲ್ಲಿ ಸಿನಿಮಾ ನೋಡಿಲು ಹೋಗಿರುವುದು ಈಗ ಭಾರಿ ವಿವಾದಕ್ಕೆ ಕಾರಣವಾಗಿದ್ದು, ಯುವತಿಯರ ಪೋಷಕರಿಗೆ ಈ ಸಂಬಂಧ ಬೆದರಿಕೆ ಹಾಕಲಾಗಿದೆ ಎಂದು ವರದಿ ತಿಳಿಸಿದೆ.
ಪುತ್ತೂರು ಜಿ.ಎಲ್.ಮಾಲ್ ಗೆ ಬಂದ ಮುಸ್ಲಿಂ ಯುವತಿಯರು ಸಿನಿಮಾ ನೋಡುವ ಸಲುವಾಗಿ ಮಾಲ್ ಗೆ ಬಂದು ಬುರ್ಖಾ ಕಳಚಿ ಸಿನಿಮಾ ನೋಡುಲು ಹೋಗುತ್ತಿರುವುದನ್ನು ಮಾಲ್ ಹೊರಗಿನಿಂದ ವಿಡಿಯೋ ಮಾಡಿ ಹರಿಬಿಡಲಾಗಿದೆ, ಈ ವಿಡಿಯೋ ಆಧರಿಸಿ ಬೆದರಿಕೆಗಳು ಬಂದಿದ್ದು, ಪೋಷಕರು ತಮ್ಮ ಮಕ್ಕಳನ್ನು ಗಮನಿಸಿ, ನಾಳೆ ಆಗುವ ಅನಾಹುತಕ್ಕೆ ನೀವೇ ಹೊಣೆಗಾರರಾಗುತ್ತೀರಿ ಎಂದು ಬೆದರಿಕೆ ಹಾಕಲಾಗಿದೆ.