ನ್ಯೂಸ್ ನಾಟೌಟ್ : ಸಿಮ್ ಕಾರ್ಡ್ ಬಗ್ಗೆ ಕೇಂದ್ರ ಸರ್ಕಾರ ಮಹತ್ವದ ನಿರ್ಧಾರವನ್ನು ಪ್ರಕಟಿಸಿದ್ದು, ಪ್ರಸ್ತುತ, ಸೈಬರ್ ವಂಚನೆಗಳು ದೇಶಾದ್ಯಂತ ಬಹಳ ವೇಗವಾಗಿ ಹೆಚ್ಚುತ್ತಿರುವ ಕಾರಣ, ಅದನ್ನು ತಡೆಯಲು ಕೇಂದ್ರ ಟೆಲಿಕಾಂ ಸಚಿವ ಅಶ್ವಿನಿ ವೈಷ್ಣವ್ ದೇಶಾದ್ಯಂತ ಸುಮಾರು 67,000 ಸಿಮ್ ಕಾರ್ಡ್ ಡೀಲರ್ಗಳನ್ನು ಕಪ್ಪು ಪಟ್ಟಿಗೆ ಸೇರಿಸಿದ್ದಾರೆ.
ಇದರೊಂದಿಗೆ ವಂಚನೆಯನ್ನು ತಡೆಯಲು ಸರ್ಕಾರ ಸಿಮ್ ಕಾರ್ಡ್ ಡೀಲರ್ನ ಪೊಲೀಸ್ ವೆರಿಫಿಕೆಶನ್ ಕಡ್ಡಾಯಗೊಳಿಸಿದೆ ಎನ್ನಲಾಗಿದೆ.
ವಂಚನೆಯನ್ನು ತಡೆಗಟ್ಟಲು, ಸರ್ಕಾರವು ಸಿಮ್ ಕಾರ್ಡ್ ಡೀಲರ್ ಗಳ ಪೊಲೀಸ್ ವೆರಿಫಿಕೆಶನ್ ಕಡ್ಡಾಯಗೊಳಿಸಿದೆ. ಹೀಗಾಗಿರುವ ಹಿನ್ನೆಲೆಯಲ್ಲಿ ಇನ್ನು ಮುಂದೆ ದೊಡ್ಡ ಪ್ರಮಾಣದಲ್ಲಿ ‘ಸಂಪರ್ಕ’ ನೀಡುವ ಸೌಲಭ್ಯವನ್ನು ಸ್ಥಗಿತಗೊಳಿಸಿದಂತಾಗಿದೆ. ಈ ವಿಚಾರವನ್ನು ಕೇಂದ್ರ ಟೆಲಿಕಾಂ ಸಚಿವ ಅಶ್ವಿನಿ ವೈಷ್ಣವ್ ಹೇಳಿದ್ದಾರೆ.
ಇದರೊಂದಿಗೆ ಸರ್ಕಾರ 52 ಲಕ್ಷ ಮೊಬೈಲ್ ಸಂಪರ್ಕಗಳನ್ನು ಬಂದ್ ಮಾಡಿದೆ ಎಂದು ಕೇಂದ್ರ ಸಚಿವರು ತಿಳಿಸಿದ್ದಾರೆ. 67,000 ಡೀಲರ್ಗಳ ಹೆಸರನ್ನು ಕಪ್ಪು ಪಟ್ಟಿಗೆ ಸೇರಿಸಲಾಗಿದೆ. ಮೇ 2023 ರಿಂದ, ಸಿಮ್ ಕಾರ್ಡ್ ವಿತರಕರ ವಿರುದ್ಧ 300 ಎಫ್ಐಆರ್ಗಳನ್ನು ದಾಖಲಿಸಲಾಗಿದೆ ಎಂದು ಮಾಹಿತಿ ನೀಡಿದ್ದಾರೆ.
ವಂಚನೆ ಕೃತ್ಯಗಳಲ್ಲಿ ತೊಡಗಿರುವ ಸುಮಾರು 66,000 ಖಾತೆಗಳನ್ನು ವಾಟ್ಸಾಪ್ ನಿರ್ಬಂಧಿಸಿದೆ. ಈಗ ವಂಚನೆ ತಡೆಯಲು ಸಿಮ್ ಕಾರ್ಡ್ ಡೀಲರ್ ಗಳನ್ನು ಪೊಲೀಸ್ ವೆರಿಫಿಕೆಶನ್ ಕಡ್ಡಾಯಗೊಳಿಸಲಾಗಿದೆ ಎಂದು ಹೇಳಿದ್ದಾರೆ. ಈ ನಿಯಮ ಉಲ್ಲಂಘಿಸುವ ಡೀಲರ್ ಗೆ 10 ಲಕ್ಷ ರೂ. ದಂಡ ವಿಧಿಸಲಾಗುವುದು.
10 ಲಕ್ಷ ಸಿಮ್ ಡೀಲರ್ಗಳಿದ್ದು, ಅವರಿಗೆ ಪೊಲೀಸ್ ವೆರಿಫಿಕೆಶನ್ ಗೆ ಸಾಕಷ್ಟು ಸಮಯ ನೀಡಲಾಗುವುದು ಎಂದು ಸಚಿವರು ಹೇಳಿದ್ದಾರೆ. ಇದರ ಜೊತೆಗೆ SIM ತೆಗೆದುಕೊಳ್ಳುವ ವ್ಯಕ್ತಿಯ KYC ಅನ್ನು ಸಹ ಮಾಡಲಾಗುತ್ತದೆ ಎಂದು ವೈಷ್ಣವ್ ಹೇಳಿದ್ದಾರೆ. KYC ಸಂಸ್ಥೆ ಅಥವಾ ಖರೀದಿದಾರರ ಗುರುತು ಮತ್ತು ವಿಳಾಸವನ್ನು ದೃಢೀಕರಿಸಲು ಸಹಾಯ ಮಾಡುತ್ತದೆ ಎನ್ನುವ ಉದ್ದೇಶದಿಂದ ಪ್ರಕ್ರಿಯೆಯನ್ನು ಮಾಡಿಸಲಾಗುತ್ತಿದೆ ಎಂದು ಪತ್ರಿಕಾ ಪ್ರಕಟಣೆಯಲ್ಲಿ ಕೇಂದ್ರ ಟೆಲಿಕಾಂ ಸಚಿವ ಅಶ್ವಿನಿ ವೈಷ್ಣವ್ ತಿಳಿಸಿದ್ದಾರೆ.