ನ್ಯೂಸ್ ನಾಟೌಟ್ : ವಿಮಾನ (Flight)ದ ಟಾಯ್ಲೆಟ್ನಲ್ಲಿ ಪೈಲಟ್ ಕುಸಿದು ಬಿದ್ದು ಮೃತಪಟ್ಟಿರುವ ಘಟನೆ ವರದಿಯಾಗಿದೆ.ಮಿಯಾಮಿಯಿಂದ ಚಿಲಿಗೆ ಹೊರಟಿದ್ದ ವಿಮಾನ (Flight)ದ ಟಾಯ್ಲೆಟ್ನಲ್ಲಿ ಪೈಲಟ್ ಮೃತಪಟ್ಟಿದ್ದು ತಕ್ಷಣವೇ ವಿಮಾನವನ್ನು ತುರ್ತು ಭೂಸ್ಪರ್ಶ ಮಾಡಲಾಯಿತು ಎಂದು ತಿಳಿದು ಬಂದಿದೆ.271 ಪ್ರಯಾಣಿಕರೊಂದಿಗೆ ಮಿಯಾಮಿಯಿಂದ ಚಿಲಿಗೆ ವಿಮಾನ ಹೊರಟಿತ್ತು.
ತಕ್ಷಣವೇ ವಿಮಾನವನ್ನು ಪನಾಮದಲ್ಲಿ ತುರ್ತು ಭೂಸ್ಪರ್ಶ ಮಾಡಲಾಯಿತು ಎಂದು ತಿಳಿದು ಬಂದಿದೆ. LATAM ಏರ್ಲೈನ್ಸ್ ವಿಮಾನ ಟೇಕ್ ಆಫ್ ಆದ ಮೂರು ಗಂಟೆಗಳ ನಂತರ ಸಾವನ್ನಪ್ಪಿದ್ದಾರೆ. ತಕ್ಷಣವೇ ಸಿಬ್ಬಂದಿ ತುರ್ತು ಚಿಕಿತ್ಸೆ ನೀಡಿದರೂ ಅವರನ್ನು ಬದುಕಿಸಿಕೊಳ್ಳಲು ಸಾಧ್ಯವಾಗಲಿಲ್ಲವೆಂದು ತಿಳಿದು ಬಂದಿದೆ.ಇವರ ನಿಧನಕ್ಕೆ ಹಲವು ಗಣ್ಯರು ಸಂತಾಪ ಸೂಚಿಸಿದ್ದಾರೆ.
ವಿಮಾನವು ಮಂಗಳವಾರ ಪನಾಮ ನಗರದಿಂದ ಹೊರಟು ಚಿಲಿಯ ಕಡೆಗೆ ತನ್ನ ಪ್ರಯಾಣವನ್ನು ಮುಂದುವರೆಸಿತು.ಇವಾನ್ ಅವರು 25 ವರ್ಷಗಳ ಅನುಭವ ಹೊಂದಿರುವ ಅನುಭವಿ ಪೈಲಟ್ ಆಗಿದ್ದರು.
ವಿಮಾನವು ಪನಾಮ ಸಿಟಿಯ ಟೊಕುಮೆನ್ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಇಳಿದಾಗ, ವೈದ್ಯಕೀಯ ತಜ್ಞರು ಪೈಲಟ್ ಅನ್ನು ಪರೀಕ್ಷಿಸಲು ಧಾವಿಸಿದರು. ಆದರೆ ಅಷ್ಟೊರೊಳಗೆ ಅವರು ಮೃತಪಟ್ಟಿದ್ದರು.
ಇವಾನ್ಅಂದೌರ್ಗೆ 56 ವರ್ಷ, ಅವರ 25 ವರ್ಷಗಳ ಸೇವೆ, ಸಮರ್ಪಣೆ, ಅಮೂಲ್ಯ ಕೊಡುಗೆಗಾಗಿ ನಾವು ಕೃತಜ್ಞರಾಗಿದ್ದೇವೆ. ಹಾರಾಟದ ಸಮಯದಲ್ಲಿ ಪೈಲಟ್ ಜೀವ ಉಳಿಸಲು ಎಲ್ಲಾ ಅಗತ್ಯ ಕ್ರಮಗಳನ್ನು ಕೈಗೊಳ್ಳಲಾಯಿತು ಎಂದು ವಿಮಾನಯಾನ ಸಂಸ್ಥೆ ತಿಳಿಸಿದೆ.