ನ್ಯೂಸ್ ನಾಟೌಟ್ : ವೈದ್ಯಲೋಕದಲ್ಲಿ ಇದೊಂದು ಅಚ್ಚರಿಯ ಬೆಳವಣಿಗೆ.ಹೌದು,ಬ್ರೈನ್ ಡೆಡ್ ಆಗಿರುವ ವ್ಯಕ್ತಿಗೆ ಯಶಸ್ವಿಯಾಗಿ ಹಂದಿಯ ಮೂತ್ರಪಿಂಡ ಕಸಿ ಮಾಡಿದ್ದು ಮಹತ್ವದ ಹೆಜ್ಜೆ ಇಟ್ಟಿದ್ದಾರೆ.
ಅಮೆರಿಕದ ನ್ಯೂಯಾರ್ಕ್ ನಗರದ ಎನ್ ವೈಯು ಲ್ಯಾಂಗೋನ್ನ ವೈದ್ಯರ ತಂಡ ಯಶಸ್ವಿ ಚಿಕಿತ್ಸೆ ನಡೆಸಿದೆ.ಬ್ರೈನ್ ಡೆಡ್ ಆಗಿರುವ ರೋಗಿಗೆ ಹಂದಿಯ ಮೂತ್ರಪಿಂಡವನ್ನು ಅಳವಡಿಸಿದಾಗ, ಅದು ಒಂದು ತಿಂಗಳು ಚೆನ್ನಾಗಿ ಕೆಲಸ ಮಾಡಿದೆ.
ಮೌರಿಸ್ ಮೊ ಮಿಲ್ಲರ್ ಎಂಬವರಿಗೆ ಹಂದಿಯ ಕಿಡ್ನಿಯನ್ನು ವರ್ಗಾಯಿಸುವ ಮೂಲಕ ವೈದ್ಯರು ಈ ಕಾರ್ಯವನ್ನು ಮಾಡಿದ್ದಾರೆ. 57ನೇ ವರ್ಷ ವಯಸ್ಸಿಗೆ ಹಂದಿ ಕಿಡ್ನಿಯನ್ನು ವರ್ಗಾಯಿಸುವ ಮೂಲಕ ಪ್ರಯೋಗ ನಡೆಸಿದ್ದಾರೆ.
ಕಿಡ್ನಿ ಸಮಸ್ಯೆಯಿಂದ ಬಳಲುವವರಿಗೆ ಹಂದಿ ಕಿಡ್ನಿಯನ್ನು ಅಳವಡಿಸಬಹುದಾಗಿದೆ. ಪ್ರಾಣಿಗಳ ಅಂಗಾಂಶಗಳನ್ನು ಮಾನವನ ದೇಹಕ್ಕೆ ಅಳವಡಿಸಬಹುದಾಗಿದೆ ಎಂದು ಹೊಸ ಸಂಶೋಧನೆಯತ್ತ ಸಂಶೋಧಕರು ಮುನ್ನಡೆದಿದ್ದಾರೆ.
ಹಿಂದೆ, ನ್ಯೂಯಾರ್ಕ್ ವಿಶ್ವವಿದ್ಯಾಲಯ ಮತ್ತು ಅಲಬಾಮಾ ವಿಶ್ವವಿದ್ಯಾಲಯಗಳು ಮಾಡಿದ ಪ್ರಯತ್ನಗಳು ಫಲಪ್ರದವಾಗದಿದ್ದರೂ ಇದೀಗ ಉತ್ತಮ ಸ್ಪಂದನೆ ದೊರೆತಿದೆ. NYU ಲ್ಯಾಂಗೋನ್ ಟ್ರಾನ್ಸ್ಪ್ಲಾಂಟ್ ಇನ್ಸ್ಟಿಟ್ಯೂಟ್ನ ಶಸ್ತ್ರಚಿಕಿತ್ಸಕರು ಈ ಕಾರ್ಯವನ್ನು ಯಶಸ್ವಿಯಾಗಿ ಮಾಡಿದ್ದಾರೆ. ಮೂತ್ರಪಿಂಡವು ಒಂದು ತಿಂಗಳವರೆಗೆ ಸಂಪೂರ್ಣವಾಗಿ ಕಾರ್ಯನಿರ್ವಹಿಸುತ್ತದೆ.
ಅಮೆರಿಕದಲ್ಲಿ 103,00ಕ್ಕಿಂತ ಹೆಚ್ಚು ಜನರಿಗೆ ಅಂಗಾಂಗ ಕಸಿಯ ಅಗತ್ಯವಿದೆ. ಅದರಲ್ಲಿ 88 ಸಾವಿರ ಜನರಿಗೆ ಮೂತ್ರಪಿಂಡ ಕಸಿ ಮಾಡುವ ಅಗತ್ಯವಿದೆ. ಪ್ರತಿ ವರ್ಷ ಜನರು ಇದೇ ಕಾರಣದಿಂದ ಸಾಯುತ್ತಿರುತ್ತಾರೆ ಎಂದು ವೈದ್ಯರೊಬ್ಬರು ತಿಳಿಸಿದ್ದಾರೆ.
ಹಂದಿಯ ಮೂತ್ರಪಿಂಡವನ್ನು ಮನುಷ್ಯರಿಗೆ ಕಸಿ ಮಾಡುವುದನ್ನು ಕ್ಸೆನೋಟ್ರಾನ್ಸ್ಪ್ಲಾಂಟೇಶನ್ ಎಂದು ಕರೆಯಲಾಗುತ್ತದೆ. ಕ್ಸೆನೋಟ್ರಾನ್ಸ್ಪ್ಲಾಂಟೇಶನ್ನಲ್ಲಿ ವೈರಸ್ಗಳು ಹರಡುವ ಅಪಾಯದ ಕಾರಣದಿಂದಾಗಿ US ಆಹಾರ ಮತ್ತು ಔಷಧ ಆಡಳಿತವು ಮಾನವ ಕ್ಸೆನೋಟ್ರಾನ್ಸ್ಪ್ಲಾಂಟೇಶನ್ ಕ್ಲಿನಿಕಲ್ ಪ್ರಯೋಗಗಳನ್ನು ಅನುಮೋದಿಸಿಲ್ಲ. ಆದರೆ ಹೊಸದಾಗಿ ಕಸಿ ಮಾಡಿದ ಕಿಡ್ನಿಯಿಂದ ಯಾವುದೇ ಸೋಂಕು ಕಾಣಿಸಿಕೊಂಡಿಲ್ಲ ಎಂಬುದು ಗಮನಾರ್ಹ.