ನ್ಯೂಸ್ ನಾಟೌಟ್: ಪಾಕಿಸ್ತಾನದ ಸಿಂಧ್ ಪ್ರಾಂತ್ಯದ ಕಾಶ್ಮೋರ್ ಜಿಲ್ಲೆಯಲ್ಲಿ ಹಿಂದೂ ಉದ್ಯಮಿಯನ್ನು ಅಪಹರಿಸಿ, ಹಿಂಸೆ ನೀಡಲಾಗಿದೆ. ಬಿಡುಗಡೆಗೆ ಅಪಹರಣಕಾರರು 5 ಕೋಟಿ ಪಾಕಿಸ್ತಾನಿ ರೂ.ಗೆ ಬೇಡಿಕೆ ಇಟ್ಟಿದ್ದಾರೆ ಎನ್ನಲಾಗಿದೆ.
ಈ ಸಂಬಂಧ ಕಾಶ್ಮೋರ್ ಪೊಲೀಸ್ ಠಾಣೆಯಲ್ಲಿ ಜಗದೀಶ್ ಕುಟುಂಬದವರು ದೂರು ದಾಖಲಿಸಿದ್ದಾರೆ. ಅಲ್ಲದೇ ಕರಾಚಿ ಪೊಲೀಸ್ ಪ್ರಧಾನ ಕಚೇರಿಯಲ್ಲಿ ಕೂಡ ದೂರು ದಾಖಲಾಗಿದೆ. ಇತ್ತೀಚಿನ ವರ್ಷಗಳಲ್ಲಿ ಪಾಕಿಸ್ತಾನದಲ್ಲಿ ಹಿಂದೂ, ಸಿಖ್ ಮತ್ತು ಕ್ರೈಸ್ಥರನ್ನು ಗುರಿಯಾಸಿಕೊಂಡು ದಾಳಿಗಳು, ಅಪರಾಧಗಳು ಹೆಚ್ಚುತ್ತಿವೆ ಎಂಬ ಸುದ್ದಿಗಳು ಹರಿದಾಡುತ್ತಿವೆ.
ಜು.20ರಂದು ಉದ್ಯಮಿ ಜಗದೀಶ್ ಕುಮಾರ್ ಮುಕ್ಕಿ ಎಂಬಾಕೆಯನ್ನು ಅಪರಿತರು ಅಪಹರಿಸಿದ್ದಾರೆ. ಅಲ್ಲದೇ ಅವರ ಕುತ್ತಿಗೆ, ಕೈ-ಕಾಲುಗಳಿಗೆ ಸರಳುಗಳನ್ನು ಹಾಕಿ, ಹಿಗ್ಗಾ-ಮುಗ್ಗಾ ಥಳಿಸಿರುವ ಅಪಹರಣಕಾರರು, ಅವರ ತಲೆಗೆ ಬಂದೂಕು ಇಟ್ಟು, ಈ ಕುರಿತ ವಿಡಿಯೋವನ್ನು ಜಗದೀಶ್ ಅವರ ಪುತ್ರನಿಗೆ ಕಳುಹಿಸಿದ್ದಾರೆ. ಕೂಡಲೇ ಹಣವನ್ನು ನೀಡುವಂತೆ ಬೆದರಿಕೆ ಹಾಕಿದ್ದಾರೆ. ೫ ಕೋಟಿ ಕೇಳಿದ ಆ ಗುಂಪು ಹಿಂದೂಗಳನ್ನೇ ಟಾರ್ಗೆಟ್ ಮಾಡುತ್ತಿದೆ ಎನ್ನಲಾಗಿದೆ ಈ ಬಗ್ಗೆ ಪಾಕ್ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.