ನ್ಯೂಸ್ ನಾಟೌಟ್ : ಕೆಲವು ಸಲ ಭೇಜವಾಬ್ದಾರಿಯಿಂದ ಏನೆಲ್ಲಾ ದುರಂತಗಳು ಸಂಭವಿಸುತ್ತವೆ.ಇನ್ನೂ ಕೆಲವು ಸಲ ಆಕಸ್ಮಿಕವಾಗಿ ಅವಾಂತರಗಳು ಸೃಷ್ಟಿಯಾಗೋದಿದೆ. ಹೌದು,ಮಹಿಳೆಯರಿಗೆ ನಮ್ಮ ದೇಶದಲ್ಲಿ ವಿಶೇಷ ಸ್ಥಾನವನ್ನು ನೀಡಲಾಗಿದೆ.ಆಕೆಯನ್ನು ಪೂಜನೀಯ ಭಾವನೆಯಿಂದ ನೋಡಲಾಗುತ್ತದೆ. ಅದರಲ್ಲೂ ಆಕೆ ಗರ್ಭಿಣಿ ಎಂದಾಗ ವಿಶೇಷ ಕಾಳಜಿ ವಹಿಸಲಾಗುತ್ತದೆ.ಆದರೆ ಇಲ್ಲೊಂದು ಕಡೆ ಮಹಿಳೆಯರಿಗಾದ ಅನ್ಯಾಯ ನೋಡಿದ್ರೆ ನಿಜಕ್ಕೂ ಆಘಾತಕಾರಿ ಎಂಬಂತಿದೆ..!ಯಾರು ಮಾಡಿದ ತಪ್ಪಿಗೋ ಗೊತ್ತಿಲ್ಲ ಅನ್ಯಾಯವಾಗಿ 81 ಗರ್ಭಿಣಿಯರು ಏಡ್ಸ್ ಎಂಬ ಕಾಯಿಲೆಗೆ ತುತ್ತಾಗಿದ್ದಾರೆ.
ಹೆಚ್ಐವಿ ಏಡ್ಸ್ ರೋಗ ಇದೊಂದು ಮನುಷ್ಯನನ್ನೇ ಮುಗಿಸುವ ಮಾರಕ ಕಾಯಿಲೆ.ಈ ರೋಗಾಣು ದೇಹದೊಳಗೆ ಒಮ್ಮೆ ಪ್ರವೇಶಿಸಿದ್ರೆ ಮನುಷ್ಯ ಕ್ರಮೇಣ ಅನಾರೋಗ್ಯಕ್ಕೊಳಗಾಗಿ ಕೊನೆಗೊಂದು ದಿನ ಈ ಪ್ರಪಂಚಕ್ಕೆ ವಿದಾಯ ಹೇಳುತ್ತಾನೆ.ಇದೀಗ ಘಟನೆಯೊಂದರಲ್ಲಿ 81ಕ್ಕೂ ಹೆಚ್ಚು ಗರ್ಭಿಣಿಯರು ಹೆಚ್ಐವಿ ಏಡ್ಸ್ ಸೋಂಕಿಗೆ ತುತ್ತಾಗಿರುವ ಘಟನೆ ಉತ್ತರಪ್ರದೇಶದ ಮೀರತ್ನಲ್ಲಿ ಬೆಳಕಿಗೆ ಬಂದಿದೆ ಎನ್ನುವುದು ನೋವಿನ ವಿಚಾರ. ಕಳೆದ 16 ತಿಂಗಳ ಅಂತರದಲ್ಲಿ ಗರ್ಭಿಣಿಯರಲ್ಲಿ ಇದು ಹೆಚ್ಚಾಗಿ ಕಾಣಿಸಿಕೊಂಡಿದೆ ಎಂದು ವರದಿ ಹೇಳುತ್ತಿದೆ.
ಆರೋಗ್ಯ ಇಲಾಖೆಯೂ ಈ ಸಂಬಂಧ ಸೋಂಕಿತ ಗರ್ಭಿಣಿಯರ ಮೇಲೆ ತೀವ್ರ ನಿಗಾ ವಹಿಸಿದೆ ಎಂದು ವೈದ್ಯರೊಬ್ಬರು ತಿಳಿಸಿದ್ದಾರೆ.ಮೀರತ್ನ ಲಾಲಾ ಲಜಪತ್ ರಾಯ್ ಮೆಡಿಕಲ್ ಕಾಲೇಜಿನ ಆ್ಯಂಟಿ ರೆಟ್ರೋ ವೈರಸ್(ATR) ಥೆರಪಿ ಕೇಂದ್ರ ನೀಡಿದ ವರದಿ ಆಧಾರದ ಮೇಲೆ ಗರ್ಭಿಣಿಯರು ಸೋಂಕಿಗೆ ತುತ್ತಾಗಿರುವುದು ಬೆಳಕಿಗೆ ಬಂದಿದೆ. 81 ಗರ್ಭಿಣಿಯರನ್ನು ಆ್ಯಂಟಿ ರೆಟ್ರೋ ಥೆರಪಿಗೆ ಒಳಪಡಿಸಿದಾಗ ಅವರಿಗೆ ಸೋಂಕು ದೃಢಪಟ್ಟಿದೆ ಎಂದು ಹೇಳಿದೆ.