ನ್ಯೂಸ್ ನಾಟೌಟ್ : ಸುಳ್ಯದ ನೆಹರು ಮೆಮೋರಿಯಲ್ ಪಪೂ ಕಾಲೇಜಿನಲ್ಲಿ Anti drug cell ಇದರ ವತಿಯಿಂದ ಫೋಕ್ಸೋ ಕಾಯಿದೆ ಮತ್ತು ಮಾದಕ ದ್ರವ್ಯ ವ್ಯಸನದ ಕುರಿತು ಜಾಗೃತಿ ಕಾರ್ಯಕ್ರಮ ಆಯೋಜಿಸಲಾಗಿತ್ತು. ಸುಳ್ಯ ಪೊಲೀಸ್ ಠಾಣೆಯ ಉಪ ನಿರೀಕ್ಷಕ ಈರಯ್ಯ ದೂಂತೂರ್ ಮುಖ್ಯ ಅತಿಥಿಯಾಗಿ ಪಾಲ್ಗೊಂಡು ಮಾತನಾಡಿದರು.
ಈ ವೇಳೆ ಮಾತನಾಡಿದ ಅವರು ನಮ್ಮ ಭವಿಷ್ಯ ನಮ್ಮ ಕೈಯಲ್ಲಿದೆ.ಭವಿಷ್ಯ ರೂಪಿಸಿಕೊಳ್ಳುವಲ್ಲಿ ಬಹಳ ಜಾಗರೂಕರಾಗಿರಬೇಕು.ಇತ್ತೀಚಿನ ದಿನಗಳಲ್ಲಿ ಸೈಬರ್ ಅಪರಾಧಗಳು ಹೆಚ್ಚಾಗುತ್ತಿದ್ದು,18 ವರ್ಷದೊಳಗಿನ ಮಕ್ಕಳು ಎಚ್ಚೆತ್ತುಕೊಳ್ಳಬೇಕಾಗಿದೆ.ಮೊಬೈಲ್ ಬಳಕೆ ,ಮಾದಕ ವ್ಯಸನ ಮುMತಾದುವುಗಳ ಬಗ್ಗೆ ತುಂಬಾ ಎಚ್ಚರಿಕೆಯಿಂದ ಇರುವುದು ಒಳಿತು ಎಂದು ಹೇಳಿದರು.
ಬಳಿಕ ಮಾತನಾಡಿದ ಅವರು ವ್ಯಕ್ತಿ ಹುಟ್ಟಿನಿಂದ ಸಾಯುವ ತನಕ ಫೋಕ್ಸೋ ಕಾಯಿದೆ ನೆರವಿಗೆ ಬರುತ್ತದೆ. ಪರವಾನಿಗೆ,ಹೆಲ್ಮೆಟ್ ಇಲ್ಲದೇ ವಾಹನ ಚಲಾಯಿಸಲೇ ಬಾರದು.ವಾಹನ ಸವಾರರು ಇದನ್ನು ಗಂಭೀರವಾಗಿ ತೆಗೆದುಕೊಳ್ಳಬೇಕು.ನಾವು ಮಾಡುವ ಸಣ್ಣ ತಪ್ಪು ನಿರ್ಧಾರಗಳಿಂದ ಅವಘಡಗಳು ಸಂಭವಿಸುವ ಮುನ್ನ ಮುಂಚಿತವಾಗಿಯೇ ಈ ಬಗ್ಗೆ ಕಾರ್ಯಪ್ರವೃತ್ತರಾದರೆ ಮುಂದೆ ಆಗುವ ಅನಾಹುತಗಳನ್ನು ಸರಳವಾಗಿ ತಪ್ಪಿಸಬಹುದು. ಜನರಿಗೆ ವೈಯಕ್ತಿಕ ಸುರಕ್ಷತೆ ಬಹಳ ಮುಖ್ಯ. ಅಸಹಾಯಕರಿಗೆ, ದುರ್ಬಲರಿಗೆ ಸಹಾಯ ಮಾಡುತ್ತ ಮನುಷ್ಯತ್ವ ದಿಂದ ನಾವು ಬಾಳಬೇಕು ಎಂದು ಕಿವಿ ಮಾತು ಹೇಳಿದರು.
ಕಾಲೇಜಿನ ಪ್ರಾಂಶುಪಾಲರಾದ ಹರಿಣಿ ಪುತ್ತೂರಾಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.ವಿದ್ಯಾರ್ಥಿಗಳು ಪ್ರಚಲಿತ ವಿದ್ಯಮಾನಗಳ ಬಗ್ಗೆ ಸದಾ ಅಪ್ ಡೇಟ್ ಆಗುತ್ತಿರಬೇಕು. ಸಭ್ಯ ವ್ಯಕ್ತಿತ್ವವನ್ನು ಹೊಂದಿ ಸಮಾಜದ ನೀತಿ -ನಿಯಮ,ಕಾನೂನು ಪಾಲನೆ ಮಾಡುತ್ತಾ ಬದುಕಿಗೆ ಪೂರಕವಾಗಿ ಸಹಬಾಳ್ವೆ ಯಿಂದ ಬದುಕಬೇಕು.ಪರಿಪೂರ್ಣತೆಯ ವ್ಯಕ್ತಿತ್ವ ನಮ್ಮದಾಗಬೇಕು.ಸಮಾಜಕ್ಕೆ ಮಾದರಿಯಾಗುವಂತಹ ವ್ಯಕ್ತಿತ್ವವನ್ನು ಮೈಗೂಡಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು.
ವೇದಿಕೆಯಲ್ಲಿ ವಿದ್ಯಾರ್ಥಿ ಕ್ಷೇಮಾಧಿಕಾರಿಗಳಾದ ರೇಷ್ಮಾ ಎಂ.ಎಂ, ಹರೀಶ ಸಿ ಉಪಸ್ಥಿತರಿದ್ದರು. ವಿದ್ಯಾರ್ಥಿನಿ ಅಭಿಜ್ಞಾ ಪ್ರಾರ್ಥಿಸಿದರು. ರೇಷ್ಮಾ ಎಂ ಎಂ ಸ್ವಾಗತಿಸಿ, ಹರೀಶ.ಸಿ ವಂದಿಸಿದರು. ಉಪನ್ಯಾಸಕಿ ಸಾವಿತ್ರಿ.ಕೆ ಕಾರ್ಯಕ್ರಮ ನಿರೂಪಿಸಿದರು.