ನ್ಯೂಸ್ ನಾಟೌಟ್: ಸಿದ್ದಗಂಗಾ ಮಠದಲ್ಲಿ ಅನಾಹುತವೊಂದು ನಡೆದು ನಾಲ್ವರು ಭಾನುವಾರ ದುರಂತ ಅಂತ್ಯ ಕಂಡಿದ್ದಾರೆ.
ತಮ್ಮ ಮಕ್ಕಳನ್ನ ನೋಡಲು ಪೋಷಕರು ಆಗಮಿಸಿದ್ರು.. ಅದೇ ರೀತಿ ಬೆಂಗಳೂರಿನ ಬಾಗಲಗುಂಟೆ ಮೂಲದ ಲಕ್ಷ್ಮೀ, ಯಾದಗಿರಿ ಮೂಲದ ಮಹದೇವಪ್ಪ ಇಂದು ಸಿದ್ದಗಂಗಾ ಮಠಕ್ಕೆ ಆಗಮಿಸಿದ್ರು. ಲಕ್ಷ್ಮೀ ಹಾಗೂ ಲಕ್ಷ್ಮೀ, ಮಗಳು ಲಾವಣ್ಯ ಮಗ ರಂಜಿತ್ ಹಾಗೂ ಸ್ನೇಹಿತರಾದ ಶಂಕರ್, ಹರ್ಷಿತ್ ಜೊತೆ ಸಿದ್ದಗಂಗಾ ಮಠದಲ್ಲಿರುವ ಗೋ ಕಟ್ಟೆ ಬಳಿ ಊಟ ಮಾಡಲು ತೆರಳಿದ್ದಾರೆ..
ಈ ವೇಳೆ ಅಲ್ಲಿದ್ದ ಮರಗಳ ಮುಂದೆ ಎಲ್ಲರು ಪೋಟೋ ಶೂಟ್ ಮಾಡಿಕೊಂಡು ಗೋ ಕಟ್ಟೆ ಬಳಿ ಸೆಲ್ಪಿ ತೆಗೆದುಕೊಂಡಿದ್ದಾರೆ.. ಬಳಿಕ ವಾಟ್ಸಪ್ ಸ್ಟೇಟಸ್ ಗೂ ಸಹ ಪೋಟೋಗಳನ್ಬ ಶೇರ್ ಮಾಡಿಕೊಂಡಿದ್ದಾರೆ.. ಬಳಿಕ ಅಲ್ಲೆ ಗೋ ಕಟ್ಟೆ ಬಳಿ ಊಟ ಮಾಡಿದ್ದಾರೆ.. ಊಟ ಮಾಡಿದ ಬಳಿಕ ಕೈ ತೊಳೆಯಲು ಗೋ ಕಟ್ಟೆ ಬಳಿ ರಂಜಿತ್ ತೆರಳಿದ್ದಾನೆ.
ಈ ವೇಳೆ ಕಾಲು ಜಾರಿ ನೀರಿನಲ್ಲಿ ಮುಳುಗಿದ್ದಾನೆ.. ಆತನನ್ನ ರಕ್ಷಣೆ ಮಾಡಲು ರಂಜಿತ್ ತಾಯಿ ಲಕ್ಷ್ಮೀ ನೀರಿಗೆ ಬಿದಿದ್ದಾರೆ.. ಲಕ್ಷ್ಮೀ ಹಾಗೂ ರಂಜಿತ್ ನನ್ನ ರಕ್ಷಣೆ ಮಾಡಲು ಹರ್ಷಿತ್ ಹಾಗೂ ಶಂಕರ್ ನೀರಿಗೆ ಬಿದಿದ್ದಾರೆ.. ಈ ವೇಳೆ ನೀರಿನಲ್ಲಿ ಮುಳುಗುತ್ತಿದ್ದ ನಾಲ್ವರನ್ನ ನೋಡಿದ ಯಾದಗಿರಿ ಮೂಲದ ಮಹದೇವಪ್ಪ ರಕ್ಷಣೆ ಮಾಡಲು ನೀರಿಗೆ ಬಿದಿದ್ದಾರೆ.. ಈ ವೇಳೆ ರಂಜಿತ್ ನನ್ನ ರಕ್ಷಣೆ ಮಾಡಿದ ನಾಲ್ವರು ನೀರಿನಲ್ಲಿ ಮುಳುಗಿ ಸಾವನ್ನಪ್ಪಿದ್ದಾರೆ..
ಇನ್ನು ಘಟನೆ ಬಗ್ಗೆ ಮಾಹಿತಿ ತಿಳಿಯುತ್ತಿದ್ದಂತೆ ಸ್ಥಳಕ್ಕೆ ದೌಡಾಯಿಸಿದ ತುಮಕೂರು ಎಸ್ ಪಿ ರಾಹುಲ್ ಕುಮಾರ್ , ಕ್ಯಾತಸಂದ್ರ ಪೊಲೀಸರು ಹಾಗೂ ಅಗ್ನಿಶಾಮಕ ದಳದ ಸಿಬ್ಬಂದಿ ಕಾರ್ಯಚರಣೆ ನಡೆಸಿ ಲಕ್ಷ್ಮೀ ಹಾಗೂ ಹರ್ಷಿತಾ ಮೃತದೇಹವನ್ನ ಹೊರತೆಗೆದಿದ್ದಾರೆ.. ಇನ್ನು ಪತ್ತೆಯಾಗದ ಶಂಕರ್, ಹಾಗೂ ಮಹದೇವಪ್ಪನ ಮೃತದೇಹಕ್ಕಾಗಿ ಅಗ್ನಿಶಾಮಕ ಸಿಬ್ಬಂದಿ ದಳ ಹಾಗೂ ಪೊಲೀಸರು ಶೋಧಕಾರ್ಯ ನಡೆಸುತ್ತಿದ್ದಾರೆ..
ಇನ್ನು ಮೃತ ಹರ್ಷಿತ್, ಶಂಕರ್ ಹಾಗೂ ರಂಜಿತ್ ಸಿದ್ದಗಂಗಾ ಮಠದಲ್ಲಿ 6 ನೇ ತರಗತಿ ವಿದ್ಯಾಭ್ಯಾಸ ಮಾಡ್ತಿದ್ದು. ಇನ್ನು ಮೃತ ಹರ್ಷಿತ್ ಚಿಕ್ಕಮಗಳೂರು ಮೂಲದವನಾಗಿದ್ದು, ಶಂಕರ್ ರಾಮನಗರದ ಮಾಗಡಿ ಮೂಲದವನು, ಮಹದೇವಪ್ಪ ಯಾದಗಿರಿ ಮೂಲದವದರಾಗಿದ್ದು ತಮ್ಮ ಪುತ್ರ ಪವನ್ ಸಿದ್ದಗಂಗಾ ಮಠದಲ್ಲಿ ವಿದ್ಯಾಭ್ಯಾಸ ಮಾಡುತ್ತಿದ್ದ ಆತನ ಯೋಗಕ್ಷೇಮ ವಿಚಾಯ ಬಂದಿದ್ದ ಮಹಾದೇವಪ್ಪ ದಾರುಣವಾಗಿ ಸಾವನ್ನಪ್ಪಿದ್ದಾರೆ. ಇನ್ನು ಘಟನೆ ಬಗ್ಗೆ ಮಾಹಿತಿ ತಿಳಿಯುತ್ತಿದ್ದಂತೆ ಘಟನಾ ಸ್ಥಳಕ್ಕೆ ಪೋಷಕರು ಆಗಮಿಸಿದ್ದು ಅವರ ಅಕ್ರಂಧನ ಮುಗಿಲು ಮುಟ್ಟಿದೆ.