ನ್ಯೂಸ್ ನಾಟೌಟ್ : ಹೃದಯಾಘಾತ ಪ್ರಕರಣಗಳು ಹೆಚ್ಚುತ್ತಿವೆ.ಅದರಲ್ಲೂ ಈ ಹೃದಯಾಘಾತಕ್ಕೆ ಬಲಿಯಾಗ್ತ ಇರೋದು ಯುವಕರೇ ಅನ್ನುವ ಅಂಶ ಆಘಾತಕಾರಿಯಾಗಿದೆ.ಅದರಲ್ಲೂ ಕೆಲ ಯುವಕರು ಅಥವಾ ಯುವತಿಯರು ದೇಹದ ತೂಕ ಕಡಿಮೆ ಮಾಡಲೆಂದು ನಾನಾ ರೀತಿಯ ಚಿಕಿತ್ಸೆಗೆ ಮೊರೆ ಹೋಗೋದೆ ಇದಕ್ಕೆ ಕಾರಣ ಎಂಬ ಶಂಕೆ ವ್ಯಕ್ತವಾಗುತ್ತಿದೆ.
ದೇಹದ ತೂಕವನ್ನು ಬಹಳ ಬೇಗ ಕಡಿಮೆ ಮಾಡೋ ಆಹಾರ ಪದ್ಧತಿಗಳಲ್ಲಿ ಕೀಟೋ ಡೈಯಟ್ ಫುಡ್ ಕೂಡ ಒಂದು.ಇತ್ತೀಚೆಗೆ ಸಿಲಿಕಾನ್ ಸಿಟಿಯಂತಹ ಮಹಾನಗರದಲ್ಲಿ ಕೀಟೋ ಡೈಯಟ್ ಫುಡ್ ಸಿಕ್ಕಾಪಟ್ಟೆ ಫೇಮಸ್ ಆಗ್ತಿದೆ.ನಗರ ಪ್ರದೇಶಗಳಲ್ಲಿ ಈ ಫುಡ್ ಗೆ ಜನ ಮರುಳಾಗ್ತ ಇದ್ದು, ದೇಹದ ತೂಕವನ್ನು ಬಹಳ ಬೇಗ ಕಡಿಮೆ ಮಾಡೋದ್ರಲ್ಲಿ ಇದು ಹೆಚ್ಚು ಪ್ರಭಾವಶಾಲಿಯಾಗಿದೆ ಎನ್ನಲಾಗಿದೆ.
ಹಾಗಾದ್ರೆ ಈ ಡಯಟ್ ಫುಡ್ಗಳನ್ನು ಸೇವಿಸೋದ್ರಿಂದ ದೇಹದ ತೂಕವನ್ನು ಕಡಿಮೆ ಮಾಡಬಹುದಾ? ಇದು ನಿಜವೇ? ಎನ್ನುವ ಪ್ರಶ್ನೆ ನಿಮ್ಮ ಮನಸ್ಸಲ್ಲಿ ಮೂಡದಿರದು. ಸಣ್ಣ ಏನೋ ಆಗುತ್ತೆ ನಿಜ, ಆದ್ರೆ, ಇದರಿಂದಾಗೋ ಅಡ್ಡ ಪರಿಣಾಮಗಳು ಭಯಾನಕವಾಗಿದೆ ಎಂಬ ಅಂಶ ಇದೀಗ ಬೆಳಕಿಗೆ ಬಂದಿದೆ.
ಕೀಟೋ ಡೈಯಟ್ ಫುಡ್ ಆರೋಗ್ಯಕ್ಕೆ ಒಳ್ಳೆಯದಲ್ಲ ಎಂಬ ವಿಚಾರ ಇದೀಗ ಭಾರಿ ಚರ್ಚೆಯಲ್ಲಿದೆ. ಈ ಡೈಯಟ್ ಮಾಡೋದ್ರಿಂದ ಹೃದಯಾಘಾತ ಸಂಭವಿಸೋ ಸಾಧ್ಯತೆ ಹೆಚ್ಚು ಎನ್ನಲಾಗಿದ್ದು, ತಜ್ಞ ವೈದ್ಯರೇ ಹೀಗಂತ ಅಭಿಪ್ರಾಯ ಪಡುತ್ತಾರೆ.ಈ ಕುರಿತು ಮಾತನಾಡಿರುವ ವೈದ್ಯರು ಸ್ಪೋಟಕ ಮಾಹಿತಿ ತೆರೆದಿಟ್ಟಿದ್ದಾರೆ.
ಇದೊಂದು ದೇಹಕ್ಕೆ ಪ್ರೋಟಿನ್, ಕೊಬ್ಬಿನ ಅಂಶ ಕೊಡುವ ಆಹಾರ ವಿಧಾನವಾಗಿದೆ.ಅತೀ ಬೇಗನೇ ಸಣ್ಣ ಆಗಬಹುದು ಎಂದು ನಂಬಲಾಗಿದೆ. ಇದರಲ್ಲಿ ಅತೀ ಕಡಿಮೆ ಕಾರ್ಬೋಹೈಡ್ರೇಟ್ ಅಂಶ ಇರಲಿದ್ದು,ಅತೀ ಹೆಚ್ಚು ಪ್ರೋಟಿನ್ ಇರಲಿದೆ.ಡಯಟ್ನಲ್ಲಿರುವವರು ಮಾಂಸ, ಮೊಟ್ಟೆ, ಬಾದಾಮಿ, ಚೀಸ್,ಕ್ರೀಮ್,ಬೆಣ್ಣೆ, ಪನ್ನೀರ್ ಸೇರಿದಂತೆ ಅನೇಕ ಪ್ರೋಟಿನ್ ಸೇವನೆಯಿರುತ್ತೆ.ಇನ್ನು ಅಕ್ಕಿ, ರಾಗಿ, ಮೈದಾ, ಓಟ್ಸ್ನಂತಹ ಕಾರ್ಬೋಹೈಡ್ರೇಟ್ ಇದರಲ್ಲಿ ಇರೋದಿಲ್ಲ.ಇದು ದೇಹಕ್ಕೆ ಅಡ್ಡ ಪರಿಣಾಮ ಬೀಳುವಂತೆ ಮಾಡುತ್ತೆ.ಬ್ರೆಡ್, ಕಾರ್ನ್, ಆಲೂಗಡ್ಡೆ, ಸೇಬು, ಬಾಳೆಹಣ್ಣು ಸೇವನೆ ಮಾಡುವುದಿಲ್ಲ ಹೀಗಾಗಿ ಇದು ತುಂಬಾ ಪರಿಣಾಮ ಬೀರುವಂತೆ ಮಾಡುತ್ತೆ.
ಅತಿಯಾದ್ರೆ ಅಮೃತವೂ ವಿಷ ಎಂಬಂತೆ ಕೀಟೋ ಡೈಯಟ್ ಫುಡ್ ನಮ್ಮ ಆರೋಗ್ಯಕ್ಕೆ ಒಳ್ಳೆಯದಲ್ಲ. ಈ ಫುಡ್ನಲ್ಲಿ ಅತಿಯಾದ ಪ್ರೋಟಿನ್ ಅಂಶಗಳು ಇದ್ದು,ಇದು ಆರೋಗ್ಯಕ್ಕೆ ಪರಿಣಾಮ ಬೀರುವಂತೆ ಮಾಡುತ್ತವೆ.ಇದರಲ್ಲಿ ಕಾರ್ಬೋಹೈಡ್ರೇಟ್ ಇರೋದಲ್ಲ. ಅತಿಯಾದ ಪ್ರೋಟಿನ್ ಫುಡ್ಗಳಿಂದ ರಕ್ತನಾಳಗಳು ಡ್ಯಾಮೇಜ್ ಆಗುತ್ತವೆ ಎಂದಿದ್ದಾರೆ.
ಈ ಫುಡ್ ಸೇವಿಸುವುದರಿಂದ ಹೃದಯಾಘಾತದ ಸಾಧ್ಯತೆಗಳು ಹೆಚ್ಚಾಗುತ್ತದೆ. ನಮ್ಮ ದೇಹಕ್ಕೆ ಪ್ರೋಟಿನ್ ಜೊತೆಗೆ ಕಾರ್ಬೋಹೈಡ್ರೇಟ್ ಕೂಡಾ ತುಂಬಾ ಮುಖ್ಯವಾಗಿದ್ದು, ಕೀಟೋ ಡೈಯೆಟ್ ಲಿಮಿಟ್ ಆಗಿ ಇರಲಿ ಎಂದು ಹೃದ್ರೋಗ ತಜ್ಞ ಡಾ.ಸಿ.ಎನ್ ಮಂಜುನಾಥ್ ಅವರು ಸಲಹೆ ನೀಡಿದ್ದಾರೆ.