ನ್ಯೂಸ್ ನಾಟೌಟ್ : ಬ್ಯಾಂಕಾಕ್ನಲ್ಲಿ ಹೃದಯಾಘಾತದಿಂದ ಸಾವನ್ನಪ್ಪಿದ್ದ ನಟ ವಿಜಯ್ ರಾಘವೇಂದ್ರ ಪತ್ನಿ ಬೆಳ್ತಂಗಡಿಯ ಸ್ಪಂದನಾ (Sapandana Vijay Raghavendra) ಅಂತ್ಯಕ್ರಿಯೆ ಈಡಿಗ ಸಂಪ್ರದಾಯದಂತೆ ನೆರವೇರಿತು. ವಿಜಯ್ ರಾಘವೇಂದ್ರ (Vijay Rahavendra) ಹಾಗೂ ಮಗ ಶೌರ್ಯ ಅಂತಿಮ ವಿಧಿ ವಿಧಾನ ನೆರವೇರಿಸಿದ್ರು. ಹರಿಶ್ಚಂದ್ರ ಘಾಟ್ನಲ್ಲಿ ಸ್ಪಂದನಾ ಅಂತ್ಯ ಸಂಸ್ಕಾರ ನಡೆಸಲಾಯ್ತು. ಸ್ಪಂದನಾ ಪಾರ್ಥಿವ ಶರೀರ ಪಂಚಭೂತಗಳಲ್ಲಿ ಲೀನವಾಗಿದೆ. ಸ್ಪಂದನಾಗೆ ಕುಟುಂಬಸ್ಥರು ಕಣ್ಣೀರ ವಿದಾಯ ಹೇಳಿದ್ರು.
ಆಗಸ್ಟ್ 7ರಂದು ಬೆಳಗ್ಗೆ ಸ್ಪಂದನಾ ಸಾವನ್ನಪ್ಪಿದ್ದು, ಆಗಸ್ಟ್ 8ರಂದು ರಾತ್ರಿ ಸ್ಪಂದನಾ ಮೃತದೇಹವನ್ನು ಬೆಂಗಳೂರಿಗೆ ತರಲಾಯ್ತು. ಮಧ್ಯಾಹ್ನದವರೆಗೆ ಮಲ್ಲೇಶ್ವರಂನಲ್ಲಿರುವ ಸ್ಪಂದನಾ ತವರು ಮನೆ ಬಳಿ ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿತ್ತು. ಅನೇಕ ಸ್ಯಾಂಡಲ್ವುಡ್ (Sandalwood) ಸೆಲೆಬ್ರೆಟಿಗಳು ಹಾಗೂ ರಾಜಕೀಯ ಗಣ್ಯರು ಅಂತಿಮ ದರ್ಶನ ಪಡೆದ್ರು. ಸ್ಪಂದನಾ ನಿಧನ ಇಡೀ ಕನ್ನಡ ಚಿತ್ರರಂಗವನ್ನೇ ದುಃಖಕ್ಕೆ ತಳ್ಳುವಂತೆ ಮಾಡಿತ್ತು. ಅನೇಕ ಜನ ಸ್ಪಂದನಾ ನೋಡಿ ಕಣ್ಣೀರು ಹಾಕಿದ್ರು. ನಟ ವಿಜಯ್ ರಾಘವೇಂದ್ರಗೆ (Vijay Raghavendra) ಧೈರ್ಯ ತುಂಬಿದ್ರು.
ಮಲ್ಲೇಶ್ವರಂನ ಸ್ಪಂದನಾ ತಂದೆ ಬಿ.ಕೆ ಶಿವರಾಮ್ ಅವರ ಮನೆಯಿಂದ ಶ್ರೀರಾಮಂಪುರದ ಹರಿಶ್ಚಂದ್ರ ಘಾಟ್ವರೆಗೂ ಅಂತಿಮ ಯಾತ್ರೆ ನಡೆಯಿತು. ಸಾರ್ವಜನಿಕರು ಸಾಲು ಗಟ್ಟಿ ನಿಂತು ಸ್ಪಂದನಾಗೆ ಅಂತಿಮ ನಮನ ಸಲ್ಲಿಸಿದ್ರು. ಹರಿಶ್ಚಂದ್ರಘಾಟ್ನಲ್ಲಿ ಅಂತಿಮ ವಿಧಿವಿಧಾನ ನೆರವೇರಿಸಲಾಯ್ತು.
ಸ್ಪಂದನಾ ಪತಿ ರಾಘವೇಂದ್ರ ಅವರ ಶಕ್ತಿಯಾಗಿದ್ದರು. ಮಾತ್ರವಲ್ಲದೇ ಮಗ ಶೌರ್ಯ ಅವರಿಗೆ ಧೈರ್ಯ ತುಂಬುತ್ತಿದ್ದರು. ರಾಘು ಗೆಲುವಿಗೆ ಬೆನ್ನೆಲುಬಾಗಿ ನಿಂತಿದ್ದ ಸ್ಪಂದನಾ, ಚಿನ್ನಾರಿ ಮುತ್ತನನ್ನು ಬಿಟ್ಟು ಬಾರದ ಲೋಕಕ್ಕೆ ತೆರಳಿದ್ದಾರೆ.ವಿಜಯ್ ರಾಘವೇಂದ್ರಗೆ ಪ್ರತಿ ಹೆಜ್ಜೆಯಲ್ಲೂ ಸ್ಪೂರ್ತಿಯಾಗಿದ್ದ ಸ್ಪಂದನಾ ಕಳೆದುಕೊಂಡು ರಾಘು ಕಣ್ಣೀರಿಡುತ್ತಿದ್ದಾರೆ. ಮಕ್ಕಳಿಗೆ ತಾಯಿಯೇ ದೇವರು, ತಾಯಿ ಕಳೆದುಕೊಂಡ ಶೌರ್ಯ ಕೂಡ ಭಾವುಕರಾಗಿ ತಂದೆ, ಚಿಕ್ಕಪ್ಪನನ್ನು ತಬ್ಬಿಕೊಂಡು ಅತ್ತ ದೃಶ್ಯ ಮನಕಲಕುವಂತಿತ್ತು.