ನ್ಯೂಸ್ ನಾಟೌಟ್: ವಿದ್ಯಾರ್ಥಿನಿಯೊಬ್ಬಳ ಹೇಳಿಕೆಯ ವಿಡಿಯೋ ವೈರಲ್ ಆಗಿದ್ದು, ಸಾರ್ವಜನಿಕ ವಲಯದಲ್ಲಿ ವ್ಯಾಪಕ ಆಕ್ರೋಶಕ್ಕೆ ವ್ಯಕ್ತವಾಗಿದೆ. ವಿಶ್ವವಿದ್ಯಾಲಯವು ತಮಗೆ ಎರಡನೇ ಮನೆ ಇದ್ದಂತೆ. ಹೀಗಾಗಿ ವಿವಿಯ ಕ್ಯಾಂಪಸ್ ಒಳಗೆ ವಿದ್ಯಾರ್ಥಿಗಳಿಗೆ ಮದ್ಯಪಾನ ಹಾಗೂ ಧೂಮಪಾನ ಮಾಡುವ ಹಕ್ಕು ಇದೆ ಎಂದು ಆಕೆ ಹೇಳಿದ್ದಾಳೆ.
ಪಶ್ಚಿಮ ಬಂಗಾಳದ ಜಾಧವಪುರ ವಿಶ್ವವಿದ್ಯಾಲಯದ ಆವರಣದಲ್ಲಿ ಮೊದಲ ವರ್ಷದ ಪದವಿ ವಿದ್ಯಾರ್ಥಿ ರ್ಯಾಗಿಂಗ್ ಕಾರಣದಿಂದ ಸಾ* ವನ್ನಪ್ಪಿದ್ದ ಕೆಲವು ದಿನಗಳ ಬಳಿಕ ವಿವಿಯು ಕಟ್ಟುನಿಟ್ಟಿನ ನಿಯಮ ಜಾರಿಗೊಳಿಸಿತ್ತು. ಯಾರೇ ಕಾಲೇಜು ಆವರಣ ಪ್ರವೇಶಿಸಬೇಕಿದ್ದರೂ ಅವರು ವಿವಿ ನೀಡಿರುವ ಅಧಿಕೃತ ಐಡಿ ಕಾರ್ಡ್ ತೋರಿಸಬೇಕು ಎಂದು ಹೇಳಿತ್ತು. ಅಲ್ಲದೆ, ವಿವಿ ಆವರಣದಲ್ಲಿ ಧೂಮಪಾನ ಹಾಗೂ ಆಲ್ಕೋಹಾಲ್ ಬಳಕೆಯನ್ನು ನಿಷೇಧಿಸಿತ್ತು.
ಈ ಕುರಿತು ಸ್ಥಳೀಯ ಚಾನೆಲ್ ಒಂದು ವಿದ್ಯಾರ್ಥಿಗಳ ಸಂದರ್ಶನ ಮಾಡಿತ್ತು. ಅದರ ವಿಡಿಯೋ ಈಗ ಸಾಮಾಜಿಕ ಮಾಧ್ಯಮದಲ್ಲಿ ಹರಿದಾಡುತ್ತಿದೆ. “ನಿಮಗೆ ಈ ಹಕ್ಕು ನೀಡಿರುವುದು ಯಾರು?” ಎಂದು ಸಂದರ್ಶಕನ ಪ್ರಶ್ನೆಗೆ ವಿದ್ಯಾರ್ಥಿನಿ, “ನನಗೆ ಈ ಹಕ್ಕನ್ನು ಯಾರೂ ಕೊಡುವಂತೆ ಇಲ್ಲ. ನನಗೆ ಈ ಹಕ್ಕು ಇದೆ” ಎಂದು ಉತ್ತರಿಸಿದ್ದಾಳೆ.
ಕೆಲವರು ವರ್ಷಗಳಾದರೂ ವಿವಿ ಕ್ಯಾಂಪಸ್ ಬಿಟ್ಟು ಹೋಗುವುದಿಲ್ಲ. ಅವರು ಅಲ್ಲಿಯೇ ಏಕೆ ಮೊಕ್ಕಾಂ ಹೂಡಿರುತ್ತಾರೆ ಎನ್ನುವುದು ಈಗ ಅರ್ಥವಾಗುತ್ತಿದೆ. ಕುಡಿಯಲು ಮತ್ತು ಸಿಗರೇಟ್ ಸೇದುವ ಸಲುವಾಗಿಯೇ ಅವರಿಗೆ ಅದು ಎರಡನೇ ಮನೆ ಎಂಬ ಭಾವನೆ ಮೂಡುತ್ತದೆ” ಎಂದು ಟೀಕಿಸಿದ್ದಾರೆ.
“ನೀವು ಅಲ್ಲಿ ಹೋಗುವುದೇ ಅಥವಾ ಕುಡಿದು ಮಜಾ ಮಾಡುವುದಕ್ಕಾಗಿಯೇ? ವಿವಿಗಳು ಮಕ್ಕಳ ಜೀವನ ರೂಪಿಸುವ ಪವಿತ್ರ ಸ್ಥಳಗಳು. ಅದನ್ನು ಬಾರ್ ಅಥವಾ ಪಬ್ಗಳಂತೆ ನೋಡುವಂತಹ ಕೀಳು ಮನಸ್ಥಿತಿ ಇರುವವರು ಅಲ್ಲಿಗೆ ಹೋಗುವುದು ಏಕೆ? ಅದನ್ನು ಮನೆಯಲ್ಲಿಯೇ ಕುಳಿತು ಮಾಡಬಹುದಲ್ಲವೇ?” ಎಂದು ವಾಗ್ದಾಳಿ ನಡೆಸಿದ್ದಾರೆ.