ನ್ಯೂಸ್ ನಾಟೌಟ್ : ಹಸುವನ್ನು ಸಾಧು ಸ್ವಭಾವದ ಪ್ರಾಣಿ ಎಂದು ಕರಿತೇವೆ. ಆದರೆ ರೌದ್ರವತಾರ ತಾಳಿದ್ರೆ ಏನೆಲ್ಲಾ ಅವಾಂತರಗಳಾಗಬಹುದು ಅನ್ನೋದಕ್ಕೆ ಈ ಘಟನೆಯೇ ಸಾಕ್ಷಿ. ಹೀಗಾಗಿ ಗೋವುಗಳ ಹಿಂಡು ಕಂಡ ತಕ್ಷಣ ಸ್ವಲ್ಪ ಜಾಗರೂಕರಾಗಿವುದು ಒಳಿತು.ಯಾಕೆಂದ್ರೆ ಯಾವ ಸಂದರ್ಭದಲ್ಲಿ ಏನಾಗಬಹುದು ಬಂದು ಊಹಿಸೋದು ಕೂಡ ಕಷ್ಟ.
ಈ ಘಟನೆ ಕಂಡಾಗ ಅಯ್ಯೋ ಅನ್ನಿಸದಿರದು.ನೀವು ಗಟ್ಟಿ ಮನಸ್ಸಿವರಾಗಿದ್ದರೆ ಮಾತ್ರವೇ ಈ ವಿಡಿಯೋ ನೋಡಿ.ಏಕೆಂದ್ರೆ ತೀರಾ ಭಯಾನಕವಾಗಿರುವ ಈ ವಿಡಿಯೋ ನಮ್ಮನ್ನು ಡಿಸ್ಟರ್ಬ್ ಮನಸ್ಸಿಗೂ ಆಘಾತವನ್ನುಂಟು ಮಾಡಬಹುದು. ಈ ಘಟನೆ ನಡೆದಿದ್ದು, ತಮಿಳುನಾಡಿನಲ್ಲಿ.
9 ವರ್ಷದ ಬಾಲಕಿಯೊಬ್ಬಳು ಶಾಲೆ ಮುಗಿಸಿ ಮನೆಗೆ ಹಿಂತಿರುಗುತ್ತಿದ್ದ ಸಮಯದಲ್ಲಿ ರಸ್ತೆ ಮೇಲೆ ಹಸುಗಳ ಹಿಂಡೊಂದು ಹೋಗುತ್ತಿರುತ್ತೆ. ಈ ವೇಳೆ ಅದರ ಪಕ್ಕನೇ ಪಾಸಾದ ಹುಡುಗಿ ಮೇಲೆ ದಿಢೀರ್ ಆಗಿ ದಾಳಿ ಮಾಡಿದ ಹಸು ಕ್ರೂರವಾಗಿ ನಡೆದು ಕೊಂಡಿದೆ. ಬಾಲಕಿಯನ್ನು ತುಳಿದು, ತಿವಿದು, ಡಿಕ್ಕಿಯೊಡೆದ (Cow Attack) ಭೀಕರ ವಿಡಿಯೊ ಇದೀಗ ವೈರಲ್ (Viral Video) ಆಗಿದೆ. ಬಾಲಕಿಯು ಶಾಲೆಯಿಂದ ಮನೆಗೆ ನಡೆದುಕೊಂಡು ಹೋಗುತ್ತಿದ್ದಾಗ ಹಸು ದಾಳಿ ಮಾಡಿದ್ದು,ಯಾವ ಕಾರಣಕ್ಕೆ ಹೀಗೆ ಮಾಡಿದೆ ಅನ್ನೋದು ಗೊತ್ತಾಗಿಲ್ಲ.
ಆಯೇಷಾ ಎಂಬ ಬಾಲಕಿಯು ತಾಯಿ ಜತೆ ಮನೆಗೆ ನೆಡೆದುಕೊಂಡು ಹೋಗುತ್ತಿದ್ದಳು. ತಾಯಿ ಹಾಗೂ ಸಹೋದರ ಉಮರ್ ಹಿಂದೆ ಇದ್ದರೆ, ಆಯೇಷಾ ಮುಂದೆ ಮುಂದೆ ನಡೆದುಕೊಂಡು ಹೋಗುತ್ತಿದ್ದಳು. ಇದೇ ವೇಳೆ ಎರಡು ಹಸುಗಳು ತೆರಳುತ್ತಿದ್ದವು. ಆಗ ಒಂದು ಹಸು ಆಯೇಷಾ ಮೇಲೆ ದಾಳಿ ನಡೆಸಿದೆ.ತಾಯಿಯೆದುರೇ ಹಸು ಈ ರೀತಿ ದಾಳಿ ನಡೆಸಿದರೆ ಹೆತ್ತ ಕರುಳಿಗೆ ಹೇಗಾಗಬೇಡ.ಕಲ್ಪನೆಗೂ ನಿಲುಕದ ಘಟನೆಗೆ ಸೋಶಿಯಲ್ ಮೀಡಿಯಾದಲ್ಲಿ ನೆಟ್ಟಿಗರು ಮರುಕ ವ್ಯಕ್ತ ಪಡಿಸಿದ್ದಾರೆ.
ಚೆನ್ನೈನ ಎಂಎಂಡಿಎ ಕಾಲೊನಿಯ ಆರ್ ಬ್ಲಾಕ್ನಲ್ಲಿ ಆಗಸ್ಟ್ 9ರಂದು ಘಟನೆ ನಡೆದಿದೆ. ಮೊದಲು ಹಸು ಕೋಡುಗಳಿಂದ ಬಾಲಕಿಗೆ ತಿವಿದಿದೆ. ನಂತರ ಬಾಲಕಿ ಕೆಳಗೆ ಬಿದ್ದ ಮೇಲೆ ಡಿಕ್ಕಿ ಹೊಡೆದಿದೆ. ಮನಸ್ಸು ಬಂದ ಹಾಗೆ ಆಕೆಯನ್ನು ತುಳಿದು ಹಾಕಿದೆ. ಮಗಳ ಮೇಲೆ ಹಸು ದಾಳಿ ಮಾಡಿದ್ದನ್ನು ಕಂಡ ತಾಯಿಯು ಸಹಾಯಕ್ಕಾಗಿ ಅಂಗಲಾಚಿದ್ದಾರೆ.ಅಲ್ಲಿದ್ದವರು ಓಡಿಸಲೆತ್ನಿಸದರೂ ಏನೂ ಮಾಡುವ ಪರಿಸ್ಥಿಯಲ್ಲಿರಲಿಲ್ಲ.ಕೈಯಲ್ಲಿ ಏನು ಇಲ್ಲದೇ ಅದನ್ನು ಬಿಡಿಸುವುದೇ ಸವಾಲಾಗಿತ್ತು.
ಹಸು ದಾಳಿಗೆ ತುತ್ತಾದ ಬಾಲಕಿಯನ್ನು ರಕ್ಷಿಸಲು ಹಲವು ಜನ ಪ್ರಯತ್ನಿಸಿದ್ದಾರೆ. ಹಸುವನ್ನು ಬೆದರಿಸಿ ಹಿಂದಕ್ಕೆ ಕಳುಹಿಸಲು ಕಲ್ಲೇಟು ಕೊಟ್ಟಿದ್ದಾರೆ. ಇಷ್ಟಾದರೂ ಹಸು ಬಾಲಕಿಯನ್ನು ಬಿಟ್ಟಿಲ್ಲ. ಮೂರ್ನಾಲ್ಕು ಜನ ಹಸುವನ್ನು ಹಿಮ್ಮೆಟ್ಟಿಸಲು ಯತ್ನಿಸಿದರೂ, ಅವರ ಮೇಲೆಯೇ ಹಸು ದಾಳಿ ಮಾಡಲು ಮುಂದಾಗಿದೆ.
ಕೊನೆಗೂ ಕಲ್ಲೇಟು ಕೊಟ್ಟು, ಕೂಗಾಡಿ ಹಸುವಿನಿಂದ ಬಾಲಕಿಯನ್ನು ಜನ ರಕ್ಷಿಸಿದ್ದಾರೆ. ಬಾಲಕಿಯನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಆಕೆ ಅಪಾಯದಿಂದ ಪಾರಾಗಿದ್ದಾಳೆ ಎಂದು ತಿಳಿದುಬಂದಿದೆ. ಇನ್ನು, ಹಸುವನ್ನು ಹೀಗೆ ನಿರ್ಲಕ್ಷ್ಯದಿಂದ ಬೀದಿಗೆ ಬಿಟ್ಟ ಮಾಲೀಕರ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳಬೇಕು ಎಂದು ಜನ ಆಗ್ರಹಿಸಿದ್ದಾರೆ.ರಸ್ತೆಯಲ್ಲಿ ಓಡಾಡುತ್ತಿದ್ದವರ ಮೇಲೆ ಮನಸೋ ಇಚ್ಛೆ ಎಂಬಂತೆ ಹಸು ದಾಳಿ ನಡೆಸಿದರೆ ರಸ್ತೆಯಲ್ಲಿ ಓಡಾಡುದಾದರೂ ಹೇಗೆ ಎನ್ನುವ ಪ್ರಶ್ನೆಯನ್ನು ಜನ ಎತ್ತಿದ್ದಾರೆ.