ನ್ಯೂಸ್ ನಾಟೌಟ್ : ರೈಲು ಹಳಿ ಹತ್ರ ಹೋಗೋದಕ್ಕೆ ಭಯ,ಎಷ್ಟೊತ್ತಿಗೆ ರೈಲು ಪಾಸ್ ಆಗುತ್ತೆ,ಅದರ ಟೈಮಿಂಗ್ಸ್ ..ಈ ಬಗ್ಗೆ ಹೆಚ್ಚು ತಿಳಿದಿರಬೇಕು.ಆದರೆ ಇಲ್ಲೊಬ್ಬಳು ಮಹಿಳೆ ಈ ಒಂದು ಸವಾಲಿನಿಂದ ಹೊರ ಬಂದಿರೋದೇ ಗ್ರೇಟ್..!ಮಹಿಳೆಯ ಧೈರ್ಯವನ್ನು ನಾವೆಲ್ಲರೂ ಕೊಂಡಾಡಲೇ ಬೇಕು. ರೈಲೊಂದು ಯಮರೂಪಿಯಾಗಿ ಪಕ್ಕಕ್ಕೆ ಬಂದು ನಿಂತಾಗ ಆಕೆ ಮಾಡಿದ ಉಪಾಯವಾದರೂ ಏನು ಎಂಬೋದಕ್ಕೆ ಈ ವರದಿ ನೋಡಿ..
ಇದು ಬೆಂಗಳೂರು ಹೊರವಲಯದ ಯಲಹಂಕ ಸಮೀಪದ ರಾಜಾನುಕುಂಟೆಯಲ್ಲಿ ನಡೆದ ಘಟನೆ.ಅಲ್ಲಿ ರೈಲು ಹಳಿ (Railway track) ಯೊಂದು ಬರುತ್ತದೆ. ಅದನ್ನು ದಾಟಿ ಹೋಗಲು ಕಾಲು ದಾರಿಯೂ ಇದೆ. ರೈಲು ಬಂದಾಗ ಜನರು ಕಾದು ನಿಂತು ದಾಟೋದು ಸಾಮಾನ್ಯ.ಮಾತ್ರವಲ್ಲ ಈ ರಸ್ತೆಯಲ್ಲಿ ಆಗಾಗ ಗೂಡ್ಸ್ ರೈಲು ಅಡ್ಡಲಾಗಿ ನಿಂತಿರುತ್ತದೆ.ಹೀಗಾಗಿ ಸಾಮಾನ್ಯವಾಗಿ ಜನರು ನಿಂತ ರೈಲಿನ ಎರಡು ಬೋಗಿಗಳನ್ನು ಸೇರಿಸುವ ಜಾಗದಲ್ಲಿ ಬಗ್ಗಿಕೊಂಡು ದಾಟಿ ಬಿಡುತ್ತಾರೆ.
ಇದೀಗ ಮಹಿಳೆಗೂ ಅದೇ ಆಗಿದ್ದು, ಹಳಿ ದಾಟಲು ಮುಂದಾಗಿದ್ದ ಅವರು ನಿಂತಿದ್ದ ಗೂಡ್ಸ್ ರೈಲಿನ ಕೆಳಗೆ ನುಗ್ಗಿ ಹಳಿ ದಾಟಲು ಯತ್ನಿಸುತ್ತಿದ್ದಂತೆಯೇ (Woman trapped between track and train) ಒಮ್ಮಿಂದೊಮ್ಮೆ ರೈಲು ಸಂಚರಿಸಲು ಶುರು ಮಾಡಿತು. ಹೀಗೆ ಹೋದವರು ಪೇಚಿಗೆ ಸಿಲುಕಿದ್ದಾರೆ.ಸ್ವಲ್ಪ ಹೆಚ್ಚು ಕಡಿಮೆ ಆದ್ರೂನು ಮಹಿಳೆಯ ಪ್ರಾಣವೇ ಹಾರಿಹೋಗುತ್ತಿತ್ತು. ಒಂದೆರಡು ಸೆಕೆಂಡ್ ಕಳೆದು ಹೋಗಿದ್ದರೆ ಹಳಿ ದಾಟಿಯೇ ಬಿಡುತ್ತಿದ್ದರು.
ಮಹಿಳೆ ದಾಟೋದಕ್ಕೆ ರೆಡಿಯಾಗಿದ್ದು, ಬಗ್ಗಿ ನಿಂತಿದ್ದರು. ಒಂದು ಕ್ಷಣ ಹೆಚ್ಚು ಕಡಿಮೆಯಾದರೂ ರೈಲಿನ ಬೋಗಿಯ ಭಾಗ ಅವರನ್ನು ಕೆಡವಿ ಅವರ ಮೇಲೆ ಸಾಗಿ ಹೋಗುತ್ತಿತ್ತು. ಆದರೆ ಆ ಮಹಿಳೆ ಗಟ್ಟಿ ಮನಸ್ಸು ಮಾಡಿ ಕೂಡಲೇ ಸಮಯಪ್ರಜ್ಞೆ ಮೆರೆದರು. ಏನಾದರೂ ಆಗಲಿ ಎಂದು ಹಳಿಗಳ ಮೇಲೆ ಉದ್ದಕ್ಕೆ ಮಲಗಿಯೇಬಿಟ್ಟರು!
ಆದರೆ ಮಹಿಳೆ ಮಲಗಿದಲ್ಲಿಗೇ ರೈಲು ಬಂಡಿಗಳ ಸಾಲು ಮುಗಿಯೋದೇ ಇಲ್ಲ.. ಒಂದು ರೈಲು ತನ್ನ ಮೇಲೆ ಹರಿದು ಹೋಗುತ್ತಿದೆ ಎನ್ನುವುದನ್ನು ಕಲ್ಪನೆ ಮಾಡಿಕೊಳ್ಳೋದಕ್ಕು ಅಸಾಧ್ಯ. ಆದರೆ ಈ ಮಹಿಳೆ ಅದೆಲ್ಲವನ್ನೂ ನಿಭಾಯಿಸಿಕೊಂಡು ರೈಲುಪೂರ್ತಿಯಾಗಿ ದಾಟಿ ಹೋಗುವವರೆಗೂ ಹಾಗೆಯೇ ಮಲಗಿದ್ದರು. ರೈಲು ದಾಟಿ ಹೋದಮೇಲೆಯೇ ಆಕೆ ಅಲ್ಲಿಂದ ಎದ್ದು ಬಂದರು!
ಅಲ್ಲಿದ್ದವರೆಲ್ಲ ಈ ಮಹಿಳೆ ನೋಡಿ ಗಾಬರಿಯಾದರು. ಬಹುಶಃ ಹೊರಗಡೆ ಸೌಂಡ್ ಕೇಳಿದ್ರೆನೆ ತುಂಬಾನೇ ಭಯಪಡುತ್ತಿದ್ದರು ಆ ಮಹಿಳೆ .ಆದರೆ ಮಹಿಳೆ ಕಿವಿ ಮುಚ್ಚಿಕೊಂಡಿದ್ದರು. ಇಷ್ಟೆಲ್ಲ ಆದರೂ ಆ ಮಹಿಳೆ ಸ್ವಲ್ಪವೂ ಭಯಗೊಂಡಿರಲಿಲ್ಲ. ಆಕೆ ಅಲ್ಲಿಂದ ಎದ್ದುಬರುತ್ತಿದ್ದಂತೆಯೇ ಆಕೆಯ ಬಂಧುವೊಬ್ಬರು ಓಡಿ ಹೋಗಿ ಅವರನ್ನು ತಬ್ಬಿಕೊಂಡರು.
ಹೀಗೆ ಆರಾಮವಾಗಿದ್ದ ಮಹಿಳೆ “ತಾನು ದಾಟುತ್ತಿದ್ದಾಗಲೇ ರೈಲು ಚಲಿಸಲು ಆರಂಭಿಸಿದೆ. ಏನು ಮಾಡಬೇಕು ಎಂದು ತೋಚದೆ ಎದೆ ಗಟ್ಟಿ ಮಾಡಿಕೊಂಡು ಅಲ್ಲೇ ಮಲಗಿದ್ದೇನೆ. ರೈಲಿನ ಸದ್ದು ಕೇಳಿದರೆ, ನೋಡಿದರೆ ಎದೆಯೊಡೆಯಬಹುದು ಎಂದು ಕಣ್ಣು ಮತ್ತು ಕಿವಿಗಳೆರಡನ್ನೂ ಮುಚ್ಚಿಕೊಂಡಿದ್ದೆ ಎಂದು ಹೇಳಿದರು.
ಮಹಿಳೆಯ ಈ ಸಾಹಸ, ಆಕೆ ರೈಲು ಹಳಿ ಮೇಲೆ ಮಲಗಿದ್ದ ದೃಶ್ಯ ಸ್ಥಳೀಯರ ಮೊಬೈಲ್ ನಲ್ಲಿ ಸೆರೆಯಾಗಿದ್ದು, ಭಾರಿ ವೈರಲ್ ಆಗಿದೆ.ಆಕೆಯ ಸಮಯಪ್ರಜ್ಞೆಯನ್ನು ಎಲ್ಲರೂ ಕೊಂಡಾಡುತ್ತಿದ್ದಾರೆ.