ನ್ಯೂಸ್ ನಾಟೌಟ್: ಯುವತಿ ಸ್ನಾನ ಮಾಡುವಾಗ ಕದ್ದು ವಿಡಿಯೋ ಮಾಡಿರುವ ಪ್ರಕರಣಕ್ಕೆ ಸಂಬಂಧ ಪಟ್ಟಂತೆ ಮಂಗಳೂರು ನಗರ ಪೊಲೀಸ್ ಕಮೀಷನರ್ ಕುಲದೀಪ್ ಜೈನ್ ಮಹತ್ವದ ಮಾಹಿತಿ ತಿಳಿಸಿದ್ದಾರೆ.
ಈ ಬಗ್ಗೆ ಮಂಗಳೂರಿನಲ್ಲಿ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದ ಅವರು, ಮಹಿಳೆ ಮಧ್ಯರಾತ್ರಿ ಟಾಯ್ಲೆಟ್ಗೆ ಹೋಗಿದ್ದಾರೆ. ಒಳಗೆ ಹೋಗಿ ಸಂಶಯ ಬಂದು ಮೇಲೇ ನೋಡುವಾಗ ಫೋನ್ ಕಂಡು ಬಂದಿದೆ. ಫೋನ್ ಪರಿಶೀಲಿಸುವಾಗ ಪಕ್ಕದ ಮನೆಯ ಸುಶಾಂತ್ ಫೋನ್ ಎಂದು ತಿಳಿದಿದೆ.
ಮಹಿಳೆಯ ದೂರಿನ ಆಧಾರದ ಮೇಲೇ ಪ್ರಕರಣ ದಾಖಲಿಸಿದ್ದೇವೆ. ಆದರೆ ಆತ ಯಾವ ಸಂಘಟನೆಗೆ ಸೇರಿದ್ದಾನೆ ಎನ್ನುವ ಬಗ್ಗೆ ನಿಖರವಾದ ಮಾಹಿತಿ ಲಭಿಸಿಲ್ಲ ಎಂದು ಕುಲದೀಪ್ ಜೈನ್ ಹೇಳಿದ್ದಾರೆ.