ನ್ಯೂಸ್ ನಾಟೌಟ್: ಆಟವಾಡುತ್ತಿದ್ದ ಮಗುವೊಂದು ಕಟ್ಟಡದ ಮೇಲಿನಿಂದ ಬಿದ್ದು ಗಾಯಗೊಂಡ ಘಟನೆ ಮಂಗಳೂರಿನ ಉಳ್ಳಾಲ ತಾಲೂಕಿನ ಮಂಜನಾಡಿ ಎಂಬಲ್ಲಿ ಶುಕ್ರವಾರ (ಆ.25 ರಂದು) ಸಂಭವಿಸಿದೆ.
ಮಗು ಕಟ್ಟಡದ ಗ್ರಿಲ್ನಲ್ಲಿ ಆಟವಾಡುತ್ತಿರುವ ದೃಶ್ಯ ಸಮೀಪದಲ್ಲಿದ್ದ ಸಿಸಿ ಕ್ಯಾಮರಾದಲ್ಲಿ ದಾಖಲಾಗಿದೆ. ತಾಯಿ ಬ್ಯಾಂಕ್ಗೆ ಬಂದಾಗ ಜತೆಗೆ ಮೂರು ವರ್ಷದ ಗಂಡು ಮಗು ಕೂಡ ಬಂದಿತ್ತು. ತಾಯಿ ಬ್ಯಾಂಕ್ ಒಳಗಿರುವಾಗ ಮಗು ಹೊರಗೆ ಆಟವಾಡುತ್ತಿತ್ತು. ಜತೆಗೆ ಪಕ್ಕದಲ್ಲೇ ಇನ್ನೊಂದು ಮಗು ಕೂಡ ಇತ್ತು. ಬಳಿಕ ಮಗು ಆಟವಾಡುತ್ತಾ ಕಟ್ಟಡದಲ್ಲಿ ಅಳವಡಿಸಿದ ಗ್ರಿಲ್ಗೆ ಹತ್ತಲು ಪ್ರಯತ್ನ ಪಡುತ್ತಿತ್ತು. ಗ್ರಿಲ್ ಹತ್ತುವಾಗ ಮಗು ಆಯತಪ್ಪಿ ಮೊದಲ ಮಹಡಿಯಿಂದ ನೆಲಮಹಡಿಗೆ ಬಿದ್ದಿದೆ.
ಕಟ್ಟಡದಿಂದ ಕೆಳಗೆ ಬಿದ್ದ ರಭಸಕ್ಕೆ ಮಗುವಿನ ತಲೆ ಮತ್ತು ಕೈಗೆ ಗಾಯವಾಗಿತ್ತು. ತಕ್ಷಣ ದೇರಳಕಟ್ಟೆಯ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಸದ್ಯ ಮಗು ಪ್ರಾಣಪಾಯದಿಂದ ಪಾರಾಗಿದೆ.