ನ್ಯೂಸ್ ನಾಟೌಟ್:ಮೊನ್ನೆಯಷ್ಟೆ ಹೃದಯಾಘಾತಗೊಂಡು ನಟ ವಿಜಯ ರಾಘವೇಂದ್ರ ಅವರ ಪತ್ನಿ ಬೆಳ್ತಂಗಡಿಯ ಸ್ಪಂದನಾ ಸಾವನ್ನಪ್ಪಿದ್ದರು.ಸಣ್ಣ ವಯಸ್ಸಲ್ಲೇ ಸಾವನ್ನಪ್ಪಿರುವ ಸುದ್ದಿ ಕೇಳಿ ರಾಜ್ಯದ ಜನತೆ ಆಘಾತಗೊಂಡಿದ್ದರು.ಇದೀಗ ಇಂಥದ್ದೆ ಮತ್ತೊಂದು ಘಟನೆ ವರದಿಯಾಗಿದೆ.
ಲೋ ಬಿಪಿಯಿಂದ ಹೃದಯಾಘಾತಕ್ಕೊಳಗಾಗಿ ನರ್ಸಿಂಗ್ ವಿದ್ಯಾರ್ಥಿನಿ ಸಾವನ್ನಪ್ಪಿದ ಘಟನೆ ದ.ಕ ಜಿಲ್ಲೆಯ ಬೆಳ್ತಂಗಡಿ ತಾಲೂಕಿನ ನೆರಿಯ ಗ್ರಾಮದಿಂದ ವರದಿಯಾಗಿದೆ.ಸುಮಾ(19) ಮೃತ ವಿದ್ಯಾರ್ಥಿನಿ.
ಅನಾರೋಗ್ಯದ ಕಾರಣ ಚಿಕಿತ್ಸೆ ಪಡೆದು ಮನೆಯಲ್ಲಿದ್ದ ಸುಮಾ ಮಂಗಳೂರಿನಲ್ಲಿ ಮೊದಲ ವರ್ಷದ ನರ್ಸಿಂಗ್ ವಿದ್ಯಾಭ್ಯಾಸ ಮಾಡುತಿದ್ದರು.ಆಗಸ್ಟ್ 9 ರಂದು ಅನಾರೋಗ್ಯದ ಕಾರಣ ಸ್ಥಳೀಯ ಆಸ್ಪತ್ರೆಗೆ ತೆರಳಿ ಚಿಕಿತ್ಸೆ ಪಡೆಯುತ್ತಿದ್ದರು ಎಂದು ತಿಳಿದು ಬಂದಿದೆ.
ಆ.11 ರಂದು ಅನಾರೋಗ್ಯ ಜಾಸ್ತಿಯಾದ ಕಾರಣ ಮಂಗಳೂರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ಗುಣಮುಖರಾಗಿದ್ದರು.ಆದರೆ ಆ.13 ರಂದು ಸಂಜೆ ಮತ್ತೆ ಅಸ್ವಸ್ಥಗೊಂಡಿದ್ದು, ಆಸ್ಪತ್ರೆಗೆ ಸಾಗಿಸುವ ದಾರಿ ಮಧ್ಯೆ ಹೃದಯಾಘಾತದಿಂದ ಸಾವನ್ನಪ್ಪಿದ್ದಾರೆ ಎಂದು ತಿಳಿದು ಬಂದಿದೆ.