ನ್ಯೂಸ್ ನಾಟೌಟ್: ಕರಿಕೆ ಗ್ರಾಮಕ್ಕೆ ಸಾರ್ವಜನಿಕ ಬಸ್ ಒದಗಿಸುವ ಬಗ್ಗೆ ಗ್ರಾಮ ಪಂಚಾಯಿತಿ ಅಧ್ಯಕ್ಷರು ಶಾಸಕರಿಗೆ ಪತ್ರ ಬರೆದಿದ್ದು, ಸಮಸ್ಯೆಯ ಪರಿಹಾರಕ್ಕಾಗಿ ಮನವಿ ಮಾಡಿಕೊಂಡಿದ್ದಾರೆ ಎನ್ನಲಾಗಿದೆ.
ಕರಿಕೆ ಗ್ರಾಮಕ್ಕೆ ಕರ್ನಾಟಕ ರಸ್ತೆ ಸಾರಿಗೆ ನಿಗಮದ ಬಸ್ ಮಾರ್ಗ ಒದಗಿಸಿಕೊಡುವ ಬಗ್ಗೆ ಮತ್ತು ಇದರಿಂದಾಗಿ ಕರಿಕೆಯ ಸಾರ್ವಜನಿಕರಿಗೆ, ವಿದ್ಯಾರ್ಥಿಗಳಿಗೆ, ಉದ್ಯೋಗಿಗಳಿಗೆ ತುಂಬಾ ಸಮಸ್ಯೆಯಾಗುತ್ತಿರು ಬಗ್ಗೆ ಕರಿಕೆ ಗ್ರಾಮ ಪಂಚಾಯಿತಿ ಅಧ್ಯಕ್ಷರು ಮುಖ್ಯ ಮಂತ್ರಿಯವರ ಕಾನೂನು ಸಲಹೆಗಾರರು ಹಾಗೂ ವಿರಾಜಪೇಟೆ ವಿಧಾನಸಭಾ ಕ್ಷೇತ್ರದ ಶಾಸಕರಾಗಿರುವ ಎ.ಎಸ್.ಪೊನ್ನಣ್ಣ ಗೆ ಪತ್ರ ಬರೆಯಲಾಗಿದೆ.
ಕರಿಕೆ ಮಾರ್ಗದಲ್ಲಿ ಸಾರಿಗೆ ಸಂಸ್ಥೆಯ ಬಸ್ನ ಕೊರತೆಯಿದೆ ಮತ್ತು ಕರಿಕೆಯ ಸಾರ್ವಜನಿಕರಿಗೆ, ವಿದ್ಯಾರ್ಥಿಗಳಿಗೆ, ಉದ್ಯೋಗಿಗಳಿಗೆ ತುಂಬಾ ಸಮಸ್ಯೆಯಾಗುತ್ತಿರುವುದರಿಂದ ಕರ್ನಾಟಕ ರಸ್ತೆ ಸಾರಿಗೆ ನಿಗಮದ ಬಸ್ ಅನ್ನು ಮಡಿಕೇರಿಯಿಂದ ಮುಂಜಾನೆ 6 ಗಂಟೆಗೆ ಹೊರಟು ಭಾಗಮಂಡಲ-ಕರಿಕೆ-ಸುಳ್ಯ-ಕುಕ್ಕೆ ಸುಬ್ರಮಣ್ಯ-ಧರ್ಮಸ್ಥಳಕ್ಕೆ ತಲುಪಿ ನಂತರ ಅದೇ ಮಾರ್ಗವಾಗಿ ಮಡಿಕೇರಿಗೆ ತಲುಪುವಂತೆ ಒದಗಿಸಬೇಕು ಎಂದು ಮನವಿ ಮಾಡಲಾಗಿದೆ,
ಜೊತೆಗೆ ಮಡಿಕೇರಿಯಿಂದ ಮುಂಜಾನೆ 8 ಗಂಟೆಗೆ ಹೊರಟು ನಾಪೋಕ್ಲು-ಅಯ್ಯಂಗೇರಿ-ಭಾಗಮಂಡಲ ಕರಿಕೆ-ಕಾಂಞಂಗಾಡ್-ಪರಸಿನಿಕಡವ್ ಶ್ರೀ ಮುತ್ತಪ್ಪ ದೇವಸ್ಥಾನಕ್ಕೆ(ಕೇರಳ) ನಂತರ ‘ಅದೇ ಮಾರ್ಗವಾಗಿ ಮಡಿಕೇರಿಗೆ ತಲುಪುವಂತೆ ಒದಗಿಸಲು ಪತ್ರದಲ್ಲಿ ಕರಿಕೆ ಗ್ರಾಮ ಪಂಚಾಯಿತಿ ಅಧ್ಯಕ್ಷರು ಎನ್.ಬಾಲಚಂದ್ರ ನಾಯರ್ ಒತ್ತಾಯಿಸಿದ್ದಾರೆ.
ಇದರ ಜೊತೆಗೆ ಕರಿಕೆಯಿಂದ ಬೆಂಗಳೂರಿಗೆ ರಾತ್ರಿ ಸಂಚಾರ ಬಸ್ ನ ಅವಶ್ಯಕತೆ ಇದೆ ಎಂದು ಶಾಸಕರಿಗೆ ತಿಳಿಸಿದ್ದಾರೆ ಎನ್ನಲಾಗಿದೆ.