ನ್ಯೂಸ್ ನಾಟೌಟ್: ಜನರು ತಮ್ಮ ಕಷ್ಟಗಳನ್ನು ದೇವರ ಎದುರು ನಿವೇದಿಸಿಕೊಂಡು ಕಷ್ಟ ಪರಿಹಾರ ಮಾಡಪ್ಪ ಭಗವಂತ ಎಂದು ಹೇಳುವುದನ್ನು ನೋಡಿದ್ದೇವೆ. ಆದರೆ ಇಲ್ಲೊಂದು ವ್ಯಾಪಾರಸ್ಥರ ಕುಟುಂಬ ರಾಜಕೀಯ ವ್ಯಕ್ತಿಯ ಗೆಲುವಿಗಾಗಿ ದೇವರಿಗೆ ಹರಕೆ ಹೊತ್ತು ಅದನ್ನು ನೆರವೇರಿಸುವುದಕ್ಕೆ ಇದೀಗ ಧರ್ಮಸ್ಥಳಕ್ಕೆ ಬೀದಿ ಬದಿ ವ್ಯಾಪಾರಸ್ಥರು ಬಂದಿರುವ ಘಟನೆ ವರದಿಯಾಗಿದೆ.
ಎಂ.ಟಿ ಕೃಷ್ಣಪ್ಪ ತುರುವೇಕೆರೆ ಕ್ಷೇತ್ರದ ಜೆಡಿಎಸ್ ಶಾಸಕ. ಇವರು ಗೆಲ್ಲಬೇಕು ಎಂದು ಧರ್ಮಸ್ಥಳ ಮಂಜುನಾಥನಿಗೆ ಹರಕೆ ಸಲ್ಲಿಸಲಾಗಿತ್ತು. ಅದರಂತೆ ಈಗ ಎಂ.ಟಿ.ಕೃಷ್ಣಪ್ಪ ಗೆಲುವು ಸಾಧಿಸಿದ್ದಾರೆ. ಈಗ ಹರಕೆ ತೀರಿಸುವ ಸಮಯ. ಸಮಸ್ತ ಬೀದಿ ಬದಿಯ ವ್ಯಾಪಾರಸ್ಥರು ಮಂಜುನಾಥನ ಸನ್ನಿಧಿಗೆ ಬಂದು ಹರಕೆ ತೀರಿಸಿದ್ದಾರೆ.
6 ತಿಂಗಳ ಹಿಂದೆ 300 ಜನ ಬೀದಿ ಬದಿ ವ್ಯಾಪಾರಸ್ಥರನ್ನು ಒಕ್ಕಲೆಬ್ಬಿಸಲಾಗಿತ್ತು. ಆಗ ಎಂ.ಟಿ ಕೃಷ್ಣಪ್ಪ ವ್ಯಾಪಾರಸ್ಥರ ಬೆಂಬಲಕ್ಕೆ ಬಂದಿದ್ದರು. ಈ ಪ್ರೀತಿ ನೆಚ್ಚಿನ ನಾಯಕನಿಗೆ ದೇವರ ಸ್ಥಾನ ನೀಡಿತು.
ನಿಮ್ಮಂತ ನಾಯಕರು ನಮಗೆ ಬೇಕು ಎಂದು ಬೀದಿ ಬದಿಯ ಬಡ ವ್ಯಾಪಾರಸ್ಥರು ತೀರ್ಮಾನಿಸಿದರು. ಕೃಷ್ಣಪ್ಪ ಗೆದ್ದರೆ ಧರ್ಮಸ್ಥಳಕ್ಕೆ ತೆರಳಿ ಹರಿಕೆ ಪೂರೈಸುವುದಾಗಿ ವ್ಯಾಪಾರಸ್ಥರು ಪ್ರಾರ್ಥನೆ ಮಾಡಿಕೊಂಡಿದ್ದರು.