ಮಾನವೀಯತೆ ಮೆರೆದ ಪೊಲೀಸರು ಹೇಳಿದ್ದೇನು?
ನ್ಯೂಸ್ ನಾಟೌಟ್ : ಇಬ್ಬರು ಮಕ್ಕಳಿದ್ದರೂ ಪುಣೆ ಮೂಲದ ನಿವೃತ್ತ ಬ್ಯಾಂಕ್ ಮ್ಯಾನೇಜರ್ ಒಬ್ಬರು ಅನಾಥವಾಗಿ ಅಂತ್ಯ ಕಂಡ ಘಟನೆ ಬೆಳಗಾವಿಯ ಚಿಕ್ಕೋಡಿ ತಾಲೂಕಿನ ನಾಗರಮುನ್ನೊಳ್ಳಿಯಲ್ಲಿ ನಡೆದಿದೆ.
ಉತ್ತಮ ಸಂಬಳವಿತ್ತು. ಅವರ ಮಕ್ಕಳು ವಿದೇಶದಲ್ಲಿ ಉತ್ತಮ ನೌಕರಿಯಲ್ಲಿದ್ದಾರೆ. ಮಕ್ಕಳು, ಕಾರು, ಬಂಗಲೆ ಎಲ್ಲ ಇದ್ದರೂ ಮೂಲಚಂದ್ ತಮ್ಮ ಕೊನೆಯ ದಿನಗಳಲ್ಲಿ ಅನಾಥರಾಗಿ ಮೃತಪಟ್ಟಿದ್ದಾರೆ. ನಾಗರಮುನ್ನೊಳ್ಳಿ ಎಂಬ ಪುಟ್ಟ ಊರಿನಲ್ಲಿ ಅಂತ್ಯ ಸಂಸ್ಕಾರದ ವೇಳೆ ವಿದೇಶದಲ್ಲಿದ್ದ ಮಕ್ಕಳು ಸೇರಿದಂತೆ ಸಂಬಂಧಿಕರೂ ಬಂದಿಲ್ಲ ಎನ್ನುವುದು ವಿಚಿತ್ರ.
ಆ ವೇಳೆ ಪೊಲೀಸರು ಅಮೆರಿಕದಲ್ಲಿರುವ ಮಗ ಮತ್ತು ಮಗಳನ್ನು ಸಂಪರ್ಕಿಸಿದ್ದಾರೆ. ಕೇಳಿದಾಗ ನಮ್ಮ ತಂದೆ ಮೊದಲು ಇದ್ದರು. ಈಗ ಇಲ್ಲ. ಅವರಿಗೆ ಚಿಕಿತ್ಸೆ ಕೊಡಿಸುವಂತೆ ನಾನು ನಿಮಗೆ ಹೇಳಿಲ್ಲ. ನೀವು ಬೇಕಿದ್ದರೆ ಶವ ಸಂಸ್ಕಾರ ಮಾಡಿ, ಇಲ್ಲದಿದ್ದರೆ ಶವ ಬಿಸಾಡಿ ಎಂದು ನಿಷ್ಠುರವಾಗಿ ನುಡಿದಿದ್ದಾರೆ. ಪೊಲೀಸರು ಮಾನವೀಯತೆ ಮೆರೆದು ಆ ವಕ್ತಿಯ ಅಂತ್ಯ ಸಂಸ್ಕಾರ ನಡೆಸಿದ್ದಾರೆ.
ಪುಣೆ ಮೂಲದ ಮೂಲಚಂದ್ ಶರ್ಮಾ (72) ಬ್ಯಾಂಕ್ ಮ್ಯಾನೇಜರ್ ಹುದ್ದೆಯಲ್ಲಿದ್ದರು ಎನ್ನಲಾಗಿದೆ.ಈ ಹಿಂದೆ ಮೂಲಚಂದ್ ಶರ್ಮಾ ಅವರನ್ನು ಒಂದೂವರೆ ತಿಂಗಳ ಹಿಂದೆ ಚಿಕ್ಕೋಡಿ ತಾಲೂಕಿನ ನಾಗರಮುನ್ನೊಳಿ ಗ್ರಾಮದ ಶಿವನೇರಿ ಲಾಡ್ಜ್ಗೆ ವ್ಯಕ್ತಿಯೊಬ್ಬ ಕರೆದುಕೊಂಡು ಬಂದಿದ್ದ. ಬಳಿಕ ಆತ ಮೂಲಚಂದ್ ಅವರನ್ನು ಲಾಡ್ಜ್ನಲ್ಲಿ ಬಿಟ್ಟು ಪರಾರಿಯಾಗಿದ್ದ. ಲಾಡ್ಜ್ ಸಿಬ್ಬಂದಿ ಈ ಕುರಿತು ಪೊಲೀಸರಿಗೆ ಮಾಹಿತಿ ನೀಡಿದ್ದರು. ಪೊಲೀಸರು ಮೂಲ ಚಂದ್ ವಿಚಾರಣೆ ನಡೆಸಿದ್ದರು. ಅವರು ಇಂಗ್ಲಿಷ್, ಹಿಂದಿ, ಮರಾಠಿ ಬಾಷೆ ಮಾತನಾಡುತ್ತಿದ್ದರು. ”ನನ್ನ ಮಗಳು ಕೆನಡಾದಲ್ಲಿ ಹಾಗೂ ಮಗ ದಕ್ಷಿಣ ಆಫ್ರಿಕಾದಲ್ಲಿ ಒಳ್ಳೆಯ ಕೆಲಸ ದಲ್ಲಿದ್ದಾರೆ. ನಾನು ನಿವೃತ್ತ ಬ್ಯಾಂಕ್ ಮ್ಯಾನೇಜರ್,” ಎಂದು ಅವರು ಮಾಹಿತಿ ನೀಡಿದ್ದರು.
”ವ್ಯಕ್ತಿಯೊಬ್ಬ ಮೂಲಚಂದ್ ಅವರನ್ನು ನಾಗರಮುನ್ನೊಳಿಯ ಖಾಸಗಿ ಆಸ್ಪತ್ರೆಗೆ ಪಾಶ್ರ್ವವಾಯು ಚಿಕಿತ್ಸೆಗೆ ಕರೆದುಕೊಂಡು ಬಂದಿದ್ದ. ನಮ್ಮ ಲಾಡ್ಜ್ನಲ್ಲಿ ರೂಂ ಮಾಡಿ ವಸತಿ ಇದ್ದರು. ಆ ವ್ಯಕ್ತಿ ಇವರ ಸಂಬಂಧಿ ಎಂದು ನಾವು ತಿಳಿದಿದ್ದೆವು. ಆದರೆ ಗುತ್ತಿಗೆ ಆಧಾರದ ಮೇಲೆ ಆರೈಕೆ ಮಾಡುವ ಕೆಲಸಗಾರ ಎಂಬ ಮಾಹಿತಿ ಬಳಿಕ ತಿಳಿಯಿತು. ಈ ಅವಧಿಯಲ್ಲಿ ಗುತ್ತಿಗೆ ಮುಗಿದ ಕಾರಣ ಆತ ಮೂಲಚಂದ್ ಅವರನ್ನು ಇಲ್ಲೇ ಬಿಟ್ಟು ಹೋಗಿದ್ದಾನೆ,” ಎಂದು ಲಾಡ್ಜ್ ಸಿಬ್ಬಂದಿ ಪೊಲೀಸರಿಗೆ ತಿಳಿಸಿದ್ದಾರೆ ಎನ್ನಲಾಗಿದೆ. ಈ ರೀತಿ ಯಾರು ಮಾಡದಂತೆ ಪೊಲೀಸರು ಮನವಿ ಮಾಡಿಕೊಂಡಿದ್ದಾರೆ.
ಈ ವಿಷಯ ತಿಳಿದ ಚಿಕ್ಕೋಡಿ ಪಿಎಸ್ಐ ಬಸಗೌಡ ನೇರ್ಲಿ ಮೂಲಚಂದ್ ಅವರಿಗೆ ಸಮಾಧಾನ ಹೇಳಿದ್ದರು. ಬಳಿಕ ಅವರನ್ನು ಚಿಕ್ಕೋಡಿ ಸಾರ್ವಜನಿಕ ಆಸ್ಪತ್ರೆಗೆ ದಾಖಲಿಸಿ, ಬಳಿಕ ಹೆಚ್ಚಿನ ಚಿಕಿತ್ಸೆಗಾಗಿ ಬೆಳಗಾವಿಯ ಜಿಲ್ಲಾಆಸ್ಪತ್ರೆಗೆ ಕಳಿಸಿದ್ದರು. ಆದರೆ, ಚಿಕಿತ್ಸೆ ಫಲಿಸದ ಕಾರಣ ಶನಿವಾರ ಮೂಲಚಂದ್ ಜಿಲ್ಲಾಸ್ಪತ್ರೆ ಯಲ್ಲಿ ಮೃತಪಟ್ಟಿದ್ದಾರೆ. ಮರಣೋತ್ತರ ಪರೀಕ್ಷೆ ನಡೆಸಿದ ಬಳಿಕ ಮೃತದೇಹವನ್ನು ನಾಗರಮುನ್ನೊಳಿ ಗ್ರಾಮಕ್ಕೆ ತಂದ ಪೊಲೀಸರು, ನಾಗರಮುನ್ನೊಳಿ ಗ್ರಾಪಂ ಪಿಡಿಒ ಹಾಗೂ ಅಧ್ಯಕ್ಷರು ಹಾಗೂ ಸದಸ್ಯರು ಸಹಾಯದಿಂದ ಅಂತಿಮ ಸಂಸ್ಕಾರ ನೆರವೇರಿಸಿ ಪೊಲೀಸರು ಮಾನವಿಯತೆ ಮೆರೆದಿದ್ದಾರೆ.